ಗಂಗಾವಳಿ ಸೇತುವೆ ಮೇಲೆ ಮಗು ಸಹಿತ ಅಪಾಯಕಾರಿಯಾಗಿ ನಿಂತ ಪ್ರವಾಸಿಗ : ಪೊಲೀಸರಿಂದ ಎಚ್ಚರಿಕೆ
Tourist standing dangerously with child on Gangavali Bridge: Police warn
ಕಾರವಾರ 02 : ಶಿರೂರು ಹೆದ್ದಾರಿ ನಸನಿಹದ ಗಂಗಾವಳಿ ಸೇತುವೆ ಮೇಲೆ ಮಗು ಸಹಿತ ಅಪಾಯಕಾರಿಯಾಗಿ ನಿಂತ ಪ್ರವಾಸಿಗ ದಂಪತಿಗಳನ್ನು ಸಿಸಿ ಟಿವಿ ಕ್ಯಾಮರಾದಲ್ಲಿ ಗಮನಿಸಿದ ಪೊಲೀಸರು, ದಂಪತಿಗಳಿಗೆ ಎಚ್ಚರಿಕೆ ನೀಡಿದ ಘಟನೆ ನಿನ್ನ ಮಧ್ಯಾಹ್ನ 1.20 ರ ಸುಮಾರಿಗೆ ನಡೆದಿದೆ.
ಗಂಗಾವಳಿ ನದಿ ವೀಕ್ಷಿಸಲು ದಂಪತಿಗಳು ಕಾರ್ ನಿಂದ ಇಳಿದು, ಸೇತುವೆ ಬಳಿ ಬರುತ್ತಾರೆ. ಪತಿ ಮಗುವನ್ನು ಸೇತುವೆ ಕಟ್ಟೆ ಮೇಲೆ ನಿಲ್ಲಿಸಿಕೊಂಡಿರುತ್ತಾನೆ. ಪತ್ನಿ ಸೇತುವೆ ಬಳಿ ಸೆಲ್ಪಿ ತೆಗೆಯಲು ಮೊಬೈಲ್ ಹಿಡಿಯುವ ಸಮಯಕ್ಕೆ ಸರಿಯಾಗಿ ಪೊಲೀಸ್ ಧ್ವನಿ ಹಾಗೂ ಅಪಾಯಕಾರಿ ಸೈರನ್ ಕೇಳಿಸುತ್ತದೆ.
ನೀವು ಅಪಾಯಕಾರಿ ಸ್ಥಳದಲ್ಲಿ ನಿಂತಿದ್ದೀರಿ ಎಂದು ಪೊಲೀಸ್ ಸಿಬ್ಬಂದಿ ಎಚ್ಚರಿಕೆ ನೀಡುತ್ತಾರೆ. ತಕ್ಷಣ ದಂಪತಿಗಳು ಅಲ್ಲಿಂದ ವಾಪಾಸ್ ಕಾರ್ ಬಳಿ ಬರುತ್ತಾರೆ. ಸೇತುವೆ ಮೇಲೆ ಸಿಸಿ ಕ್ಯಾಮರಾ ಅಳವಡಿಸಿದ್ದು, ಅದರ ದೃಶ್ಯ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಕಾಣುವ ವ್ಯವಸ್ಥೆ ಮಾಡಲಾಗಿದೆ.
ಈ ತಂತ್ರಜ್ಞಾನದ ಫಲವಾಗಿ ಆಗಬಹುದಾದ ಅಪಾಯದ ಮುನ್ನೆಚ್ಚರಿಕೆ ಪ್ರವಾಸಿಗರಿಗೆ ಹೋಗಿದೆ.ಈ ವ್ಯವಸ್ಥೆ ಅಳವಡಿಸಿ ಕೊಂಡ ಜಿಲ್ಲಾ ಪೊಲೀಸ್ ಆಡಳಿತ ಮತ್ತು ಗೋಕರ್ಣ ಪೋಲೀಸರ ಸಮಯ ಪ್ರಜ್ಞೆ ಸಾರ್ವಜನಿಕ ಪ್ರಶಂಸೆಗೆ ಕಾರಣವಾಗಿದೆ.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 