ಕೋಲಾರ 13: ಟಿಕ್ಟಾಕ್ ವಿಡಿಯೋ ಚಿತ್ರೀಕರಿಸುತ್ತಿದ್ದ ವಿದ್ಯಾಥರ್ಿನಿ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲಾರ ತಾಲ್ಲೂಕಿನ ವಡಗೇರಿ ಗ್ರಾಮದ ಮಾಲಾ(22) ಮೃತಪಟ್ಟ ವಿದ್ಯಾರ್ಥಿನಿ.
ಕೋಲಾರದ ಮಹಿಳಾ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ಈಕೆ ನಿನ್ನೆ ಸಂಜೆ ಕೃಷಿ ಹೊಂಡದ ಬಳಿ ಟಿಕ್ಟಾಕ್ಗಾಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಹೊಂಡಕ್ಕೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾಳೆ.
ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ತುಮಕೂರಿನ ಯುವಕನೊಬ್ಬ ಟಿಕ್ಟಾಕ್ ವೇಳೆ ಕುತ್ತಿಗೆ ಮೂಳೆ ಮುರಿದುಕೊಂಡು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಯುವತಿ ಟಿಕ್ಟಾಕ್ಗೆ ಬಲಿಯಾಗಿರುವುದು ವಿಷಾದಕರ.