ಬೆಂಗಳೂರು 16, ನೋಂದಣಿ ಮುದ್ರಾಂಕ ಇಲಾಖೆಯ ಕೆಲಸಗಳು ಸಾರ್ವಜನಿಕರಿಗೆ ಸುಲಭವಾಗಿ ಕೈಗೆಟಕುವ ನಿಟ್ಟಿನಲ್ಲಿ ಕಾವೇರಿ ಆನ್ಲೈನ್ ಸೇವೆ ಉಪಯುಕ್ತವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ಆನ್ಲೈನ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಆಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ, ಅಧಿಕಾರ ಪತ್ರ ನೋಂದಣಿ, ನೋಂದಾಯಿಸಿದ ಪತ್ರಗಳ ಭದ್ರತೆಯನ್ನು ಇಲಾಖೆ ನಿರ್ವಹಿಸುತ್ತದೆ. ಸಾರ್ವಜನಿಕರು ನೋಂದಣಿಗೆ ಸಂಬಂಧಿಸಿದ ಕೆಲಸವನ್ನು ಕಚೇರಿಗೆ ಬಂದು ಮಾಡಿಸಲು ಆಗುವ ಅನಾನುಕೂಲ ತಪ್ಪಿಸಲು ಆನ್ಲೈನ್ ಸೇವೆ ಮೂಲಕವೇ ಒಂದೇ ಹಂತದ ಪಯರ್ಾಯ ಸೌಲಭ್ಯ ಕಲ್ಪಿಸಲಾಗಿದ್ದು, ಮೈತ್ರಿ ಸಕರ್ಾರದಿಂದ ಜನ ಸಾಮಾನ್ಯರಿಗೆ ಅನುಕೂಲವಾಗಲು ಈ ಯೋಜನೆ ಹೆಚ್ಚು ಫಲಪ್ರದವಾಗಲಿದೆ ಎಂದು ಅಭಿಪ್ರಾಯಪಟ್ಟರು.
ರೈತರ ಸಾಲ ಮನ್ನಾ ವಿಚಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದರಲ್ಲಿ ಕಂದಾಯ ಇಲಾಖೆಯ ಪಾತ್ರವೂ ಪ್ರಮುಖವಾಗಿದ್ದು, ಸೆಲ್ಗಳನ್ನು ಸ್ಥಾಪಿಸಿ ಸಕರ್ಾರ ಮತ್ತು ರೈತರ ನಡುವೆ ಮಧ್ಯವತರ್ಿಗಳ ಹಾವಳಿ ತಪ್ಪಿಸಿ ನೇರವಾಗಿ ಜನರಿಗೆ ಸೌಲಭ್ಯ ಒದಗಿಸಲು ಇ-ಸೇವೆ ಅನುಕೂಲಕರವಾಗಲಿದೆ. ಆ ಉದ್ದೇಶದಿಂದಲೇ ಇದನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಸ್ಥಿರಾಸ್ತಿಗಳ ಋಣಬಾರ, ಪ್ರಮಾಣ ಪತ್ರ ನೋಂದಣಿ ಇನ್ನಿತರ ಕೆಲಸಗಳಿಗೆ ಮೊದಲೇ ಸಮಾಯವಕಾಶ ಪಡೆದು ಆನ್ಲೈನ್ ಮೂಲಕವೇ ಅಗತ್ಯ ದಾಖಲೆ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.
ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಒಂಭತ್ತು ಸೇವೆಗಳನ್ನು ಒಳಗೊಂಡಿರುವ ಕಾವೇರಿ ಆನ್ಲೈನ್ ಸೇವೆ ಪಾರದರ್ಶಕ ವ್ಯವಸ್ಥೆ ಒಳಗೊಂಡಿದೆ ಎಂದು ವಿವರಿಸಿದರು.
ಆನ್ಲೈನ್ ಮೂಲಕವೇ ಆಸ್ತಿ ನೋಂದಣಿ ಮತ್ತಿತರ ದಾಖಲೆಗಳ ವಿವರವನ್ನು ಸಬ್ರಿಜಿಸ್ಟ್ರಾರ್ಗೆ ತಲುಪಿಸಿ ಖರೀದಿದಾರರು ಮತ್ತು ಮಾರಾಟಗಾರರ ನೋಂದಣಿಗೂ ಸಮಸ್ಯೆಯಾಗದಂತೆ ಈ ವ್ಯವಸ್ಥೆ ರೂಪುಗೊಂಡಿದೆ. ಸಮಾರಂಭದಲ್ಲಿ ಮಾಜಿ ಸಚಿವ ಆರ್.ರೋಷನ್ ಬೇಗ್, ಎಚ್.ಎಂ.ರೇವಣ್ಣ, ಎಚ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ ಭೋಜೇಗೌಡ, ನೋಂದಣಿ ಮತ್ತು ಪರಿವೀಕ್ಷಕ ಹಾಗೂ ಮುದ್ರಾಂಕ ಆಯುಕ್ತ ತ್ರಿಲೋಕ್ಚಂದ್ರ ಮತ್ತಿತರರು ತಿಳಿಸಿದರು.