ಕಾರವಾರ ಬಾಣಂತಿ ಸಾವಿನ ಘಟನೆ : ಘಟನೆಯ ತನಿಖೆಗೆ ತಂಡ ರಚಿಸಿದ ಜಿಲ್ಲಾಧಿಕಾರಿ : ನಿಷ್ಪಕ್ಷಪಾತ ತನಿಖೆಗೆ ಸೂಚನೆ

karwar krims Bananti deth scandal

 ಕಾರವಾರ  ಬಾಣಂತಿ ಸಾವಿನ ಘಟನೆ : ಘಟನೆಯ ತನಿಖೆಗೆ ತಂಡ ರಚಿಸಿದ ಜಿಲ್ಲಾಧಿಕಾರಿ :  ನಿಷ್ಪಕ್ಷಪಾತ ತನಿಖೆಗೆ ಸೂಚನೆ 


ಕಾರವಾರ : ಇಲ್ಲಿನ ಮೆಡಿಕಲ್ ಕಾಲೇಜಿನ ಅಧೀನ ಆಸ್ಪತ್ರೆಯಲ್ಲಿ ಸೆ. ೩ ರಂದು ನಡೆದ  ಬಾಣಂತಿ ಸಾವಿನ ತನಿಖೆ ನಡೆಸಲು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಜಿಲ್ಲಾ ಪಂಚಾಯತ್  ಸಿಇಓ ರೋಶನ್ .ಎಂ. ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದಾರೆ. ತಂಡದಲ್ಲಿ ಡಿಎಚ್‌ಓ, ಹೃದಯ ತಜ್ಞರು, ಖಾಸಗಿ ಅರವಳಿಕೆ ತಜ್ಞರು, ಖಾಸಗಿ ಹೆರಿಗೆ ತಜ್ಞೆ ಇರಲಿದ್ದಾರೆ. ಖಾಸಗಿ ಅರವಳಿಕೆ ತಜ್ಞರು ಮತ್ತು ಹೆರಿಗೆ ತಜ್ಞರ ಆಯ್ಕೆಯನ್ನು ಸಿಇಓ ಅವರಿಗೆ ಬಿಡಲಾಗಿದೆ. ಪ್ರಭಾವಕ್ಕೆ ಒಳಗಾಗದೆ , ತನಿಖೆ ಮಾಡಿ ,ಹತ್ತು ದಿನಗಳಲ್ಲಿ ವರದಿ ಕೊಡಲು ಸೂಚಿಸಲಾಗಿದೆ. 

ಶಿವಾನಂದ ಕುಡ್ತಲಕರ್ ವಿರುದ್ಧ ಶನಿವಾರ ಸಾರ್ವಜನಿಕರು ಪ್ರತಿಭಟನೆ ಮಾಡಿ ಜಿಲ್ಲಾಡಳಿತಕ್ಕೆ, ಸರ್ಕಾರಕ್ಕೆ ದೂರು ನೀಡಿದ್ದಾರೆ.  ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆ ನೀಡಿದ್ದರೆ. ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ಸಹ ಸಾರ್ವಜನಿಕರು ವಿನಂತಿಸಿದ್ದಾರೆ.  ಅಧೀಕ್ಷಕ , ಹೆರಿಗೆ ವೈದ್ಯ ಶಿವಾನಂದ ಕುಡ್ತಲಕರ್ ವಿರುದ್ಧ ಮೊದಲಿನಿಂದ ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ವೈದ್ಯ ಪ್ರಭಾವ ಬಳಸಿ ಜಿಲ್ಲಾ ಆಸ್ಪತ್ರೆಯಲ್ಲಿ ಉಳಿದಿದ್ದಾರೆ. ಸಾರ್ವಜನಿಕರಿಗೆ ಕಂಠಕವಾಗಿದ್ದಾರೆ. ಬಾಣಂತಿಗೆ ಅನಸ್ತೇಶಿಯಾ ಕೊಟ್ಟವರು ತಾವಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ. ಹಾಗಾಗಿ ಕುಟುಂಬದವರು ಸೂಕ್ತ ತನಿಖೆಗೆ ಆಗ್ರಹಿಸಿದ್ದು, , ಈ ಸಂಬAಧ ತನಿಖಾ ತಂಡ ರಚಿಸುತ್ತಿದ್ದೇನೆ ಎಂದು ಜಿಲ್ಲಾಧಿಕಾರಿ ಸನಿವಾರ ಸಂಜೆ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ತನಿಖೆಯನ್ನು ನಿಷ್ಪಕ್ಷಪಾತದಿಂದ ಮಾಡಲು ಜಿಲ್ಲಾ ಪಂಚಾಯತ್  ಸಿಇಓ ಅವರಿಗೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್  ಸೂಚನೆ ನೀಡಿದ್ದಾರೆ.  ಜನರ ಪ್ರತಿಭಟನೆ ಗಮನಿಸಿ ತನಿಖಾ ತಂಡ ರಚಿಸಿರುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. 

.................