ಲೋಕದರ್ಶನ ವರದಿ
ಇಂಡಿ 26: ಅಂಗವಿಕಲತೆ ನಿವಾರಣೆಯಾಗುತ್ತದೆ ಎಂದು ನಂಬಿ 23 ವರ್ಷದ ಅಂಗವಿಕಲ ಮಗನಿಗೆ ಪಾಲಕರು ಸೂರ್ಯಗ್ರಹಣದ ದಿನ ನೆಲದಲ್ಲಿ ಗುಂಡಿ ತೋಡಿ ಕುತ್ತಿಗೆಯವರೆಗೂ ಹೂತಿಟ್ಟ ಘಟನೆ ಇಂಡಿ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ನಡೆದಿದೆ.
ಪಾಪು ಕುತ್ಬುದ್ದೀನ ಮುಲ್ಲಾ (23) ವಿಕಲಚೇತನರಾಗಿರುವದರಿಂದ ಈ ಕಂಕಣ ಸೂರ್ಯಗ್ರಹಣ ಅತ್ಯಂತ ವಿಶೇಷವಾಗಿದ್ದು ಗ್ರಹಣ ಸಂಭವಿಸಿದಾಗ ಯಾವುದೇ ಆಗದೆ ಇರುವ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬ ನಂಬಿಕೆಯಿಂದ ಗ್ರಾಮದ ಹಲವರ ಮಾತು ಕೇಳಿ ಪಾಲಕರು ಈ ಕಾರ್ಯ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಸ್ನೇಹಲ ಸುಧಾಕರ ಲೋಖಂಡೆ ಕಾರ್ಯಾಲಯದ ಶಿರಸ್ತೆದಾರ ಎ.ಬಿ ಬಣಕಾರ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ವಿಕಲಚೇತನ ಪಾಪು ಕುತ್ಬದ್ದೀನ ಈತನಿಗೆ ಮನ ಒಲಿಸಿ ಮಣ್ಣಿನಲ್ಲಿ ಹೂತು ಕೂಡಬಾರದು ಇದರಿಂದ ಮತ್ತೆ ಏನಾದರೂ ಅನಾಹುತಗಳು ಸಂಭವಿಸುವ ಲಕ್ಷಣಗಳು ಹೆಚ್ಚು ಎಂದು ಹೇಳಿ ತಿಳುವಳಿಕೆ ಹೇಳಿ ಆತನನ್ನು ಹೊರತೆಗೆಸಿದ್ದಾರೆ.