ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಗೆೆ ಪ್ರತಿಜ್ಞಾ ವಿಧಿ ಬೋಧನೆ
ಲೋಕದರ್ಶನವರದಿ
ಹಾವೇರಿ11: ಮತದಾನ ಅತ್ಯಂತ ಪವಿತ್ರ ಹಕ್ಕು, ಪ್ರಜಾಪಭುತ್ವದ ಬಲವರ್ದನೆಗಾಗಿ ಎಲ್ಲಾರು ಕಡ್ಡಾಯವಾಗಿ ಮತದಾನವನ್ನು ಮಾಡಬೇಕು ಹಾಗೂ ಮತದಾನದಲ್ಲಿ ಭಾಗವಹಿಸುವದು ಎಲ್ಲರ ಕರ್ತವ್ಯವಾಗಿದೆೆ ಎಂದು ತಾಲೂಕ ಪಂಚಾಯತಿ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿ ವರ್ಗದವರಿಗೆ ಮತ್ತು ಸಾರ್ವಜನಿಕರಿಗೆ ವಿವಿ ಪ್ಯಾಟ ಪ್ರಾತ್ಯಕ್ಷಿಕೆ ಮತ್ತು ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದ ತಾಲೂಕ ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿಯಾದ ಅನ್ನಪೂರ್ಣ ಮುದುಕಮ್ಮನವರ ತಿಳಿಸಿದರು.
ಮುಂದುವರೆದು ಪ್ರಜ್ಞಾವಂತ ಮತದಾರರು ಪ್ರಜಾ ಪ್ರಭುತ್ವದ ಮೂಲಭೂತ ಹಕ್ಕಾದ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ದೇಶದ ಅಭಿವೃದ್ದಿಗೆ ಕೈಜೋಡಿಸಬೇಕಿದೆ ನಾವು ಮತದಾನ ಮಾಡುವುದಲ್ಲದೆ ನಮ್ಮ ಸುತ್ತಮುತ್ತಲಿನವರು ಮತದಾನ ಮಾಡಿದ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.
ಮತದಾನದಿಂದ ದೂರ ಉಳಿದವರಿಗೆ ಮತದಾನದ ಮಹತ್ವಕುರಿತು, ತಿಳಿಹೇಳುವ ಮೂಲಕ ಮತದಾನ ಮಾಡುವಂತೆ ಪ್ರೇರೆಪಿಸಬೇಕು ಎಂದರು. ತಾಲೂಕಾ ವ್ಯಾಪ್ತಿಯಲ್ಲಿ ಮತದಾನ ಶೇಕಡಾ ಪ್ರಮಾಣ ಹೆಚ್ಚಿಸುವಲ್ಲಿ ಕಾಳಜಿವಹಿಸಬೇಕಿದೆ ಎಂದರು.
ತಾಲೂಕ ಅಕ್ಷರ ದಾಸೋಹ ಸಹಾಯಕ ನಿದರ್ೇಶಕರಾದ ಪುಷ್ಪಲತಾ ಬಿದರಿ, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ತಾಲೂಕ ಪಂಚಾಯತಿ ಸಿಬ್ಬಂದಿ ವರ್ಗದವರು, ಸೆಕ್ಟರ್ ಅಧಿಕಾರಿಗಳು, ಹಾಜರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 