ಹಾವೇರಿ10: ಮೂರು ದಿನಗಳ ಕಾಲ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವಾತರ್ಾ ಇಲಾಖೆ ಆಯೋಜಿಸಿರುವ ಮತದಾನ ಜಾಗೃತಿ ಅಭಿಯಾನ ವಸ್ತುಪ್ರದರ್ಶನ ವಿಶೇಷ ಚುನಾವಣಾ ಜಾಗೃತಿ ಸಂದೇಶ ಹಾಗೂ ವಿನ್ಯಾಸದಿಂದ ಸಾರ್ವಜನಿಕರ ಗಮನ ಸೆಳೆಯುತ್ತಿದ್ದೆ.
ಸುಗಮ ಮತ್ತು ನೈತಿಕ ಮತದಾನದ ಜಾಗೃತಿಗಾಗಿ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ಕನರ್ಾಟಕ ಹಾಗೂ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನ ಮಳಿಗೆಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಕೆ. ಲೀಲಾವತಿ ಅವರು ಉದ್ಘಾಟಿಸಿದರು.
ಮತದಾನ ಜಾಗೃತಿಗಾಗಿ ವಿವಿಧ ಸಂದೇಶಗಳು ಹಾಗೂ ಚುನಾವಣಾ ಮಾಹಿತಿಗಾಗಿ ಆಯೋಗ ರೂಪಿಸಿರುವ ನೂತನ ಆ್ಯಪ್ಗಳ ಬಗ್ಗೆ ಮಾಹಿತಿ ಹಾಗೂ "ನಮಗೆ ವಯಸ್ಸು ಹದಿನೆಂಟು ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ ನಮಗುಂಟು", "ಮತದಾನ ಮಾಡಿದರೆ ಹೆಣ್ಣು ತೆರೆಯುವುದು ದೇಶದ ಕಣ್ಣು", ಮಹಿಳೆಯರಿಗೆ ಪ್ರತ್ಯೇಕ ಸಾಲು ನಿಶ್ಚಿತೆಯಿಂದ ಮತ ಚಲಾಯಿಸಿ", ನಾವು ನೆರವಾಗುತ್ತೇವೆ ಮತದಾನದಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆ", ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣು", "ಚುನಾವಣಾ ಅಕ್ರಮ ಕಂಡರೆ ಸಾಕ್ಷಿ ಸಮೇತಹ ದೂರು ನೀಡಿ", ಇಲ್ಲಿ ಎಲ್ಲರೂ ಸಮಾನರು ಎಲ್ಲರ ಮತವೂ ಅಮೂಲ್ಯ ಹೀಗೆ ಸಾಲು ಸಾಲು ಜಾಗೃತಿ ಫಲಕಗಳ ಮೂಲಕ ಪ್ರತಿ ಮತವೂ ಎಷ್ಟು ಅಮೂಲ್ಯ ಎಂಬುದರ ಜೊತೆಗೆ ಯುವ ಸಮೂಹ, ಹಿರಿಯರು, ವೃದ್ಧರು, ಮಹಿಳೆಯರು, ವಿಶೇಷ ಚೇತನರು ಒಳಗೊಂಡಂತೆ ಎಲ್ಲ ವರ್ಗಗಳಿಗೂ ಆತ್ಮವಿಶ್ವಸ ತುಂಬುವ ಸಂದೇಶಗಳು ಹಾಗೂ ಚುನಾವಣಾ ಅಕ್ರಮಗಳ ತಡೆಗೆ ಸಾರ್ವಜನಿಕರ ಸಹಭಾಗಿತ್ವದ ಮಹತ್ವ ಸಾರವ ಹಲವು ಸಂದೇಶಗಳು ಸುಗಮ ಹಾಗೂ ನೈತಿಕ ಮತದಾನಕ್ಕೆ ಸ್ಪೂತರ್ಿ ತುಂಬುತ್ತವೆ.
ಪ್ರದರ್ಶನದಲ್ಲಿ ಬಿಂಬಿತವಾಗಿರುವ ವಿವಿಧ ಫಲಕಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಕೆ.ಲೀಲಾವತಿ ಅವರು ಯುವಕರನ್ನು ಉದ್ದೇಶಿಸಿ ಚುನಾವಣಾ ಪ್ರಕ್ರಿಯೆಗಳನ್ನು ಯುವಕರು ತಿಳಿದುಕೊಳ್ಳಬೇಕು. ಇದಕ್ಕಾಗಿ ತಮ್ಮ ಮೊಬೈಲ್ನಲ್ಲಿ ಚುನಾವಣಾ ಆ್ಯಪ್ ಹಾಗೂ ಸಿವಿಜಲ್ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ತಿಳಿಸಿದರು.
ಸಿವಿಜಲ್ ಕುರಿತಂತೆ ಜಾಗೃತಿ ಫಲಕಗಳಗಳನ್ನು ಯುವ ಸಮೂಹಕ್ಕೆ ಪರಿಚಯಿಸಿದ ಜಿಲ್ಲಾಧಿಕಾರಿಗಳು ಪಾರದರ್ಶಕ, ನೈತಿಕ ಹಾಗೂ ಸುಗಮ ಚುನಾವಣೆಗೆ ಯುವ ಸಮೂಹ ಕೈಜೋಡಿಸಬೇಕು.
ಮತದಾರರ ಪಟ್ಟಿಯಲ್ಲಿರುವ ಎಲ್ಲ ಯುವ ಸಮೂಹ ಹೆಚ್ಚಿನ ಜವಾಬ್ದಾರಿಯಿಂದ ಮತದಾನದಲ್ಲಿ ಭಾಗವಹಿಸಿ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಿಸಿಲು ಭಾಗಿಗಳಾಗಬೇಕು. ತಮ್ಮ ಸುತ್ತಲಿನ ಗ್ರಾಮ ಹಾಗೂ ಪರಿಸರದಲ್ಲಿ ಯಾವುದೇ ಚುನಾವಣಾ ಅಕ್ರಮಗಳು ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದರೆ ಭಾರತ ಚುನಾವಣಾ ಆಯೋಗ ಹೊಸದಾಗಿ ಪರಿಚಯಿಸಿರುವ ಸಿವಿಜಲ್ ಆ್ಯಪ್ ಬಳಿಸಿ ದೂರು ದಾಖಲಿಸಬಹುದು. ದೂರು ದಾಖಲಿಸಿದ ಹೆಸರನ್ನು ಗೌಪ್ಯಾಗಿ ಇಡಲಾಗುವುದು. ತಮ್ಮ ಮೊಬೈಲ್ನಲ್ಲಿ ಸಿವಿಜಲ್ ಆ್ಯಪ್ನ್ನು ಡೌನ್ಲೋಡಮಾಡಿಕೊಂಡು ಅಕ್ರಮಗಳ ಬಗ್ಗೆ ದುರು ನೀಡುವಂತೆ ಯುವಕರಿಗೆ ತಿಳಿಸಿದರು.
ಪ್ರದರ್ಶನ: ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಿರುವ ಮಲೆನಾಡಿನ ತೊಟ್ಟಿ ಮನೆಯ ಮರದ ವಿನ್ಯಾಸದ ಕಂಬಗಳ ಮಧ್ಯ ಚುನಾವಣೆಗೆ ಸಂಬಂಧಿಸಿದ ವಿವಿಧ ಜಾಗೃತಿ ಫಲಕಗಳು ನೋಡುಗರ ಆಕರ್ಷಣೀಯ ಜೊತೆಗೆ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಮತ್ತು ಮತದಾನಕ್ಕೆ ಪ್ರೇರಣೆ ನೀಡಿ ಎಲ್ಲರ ಗಮನ ಸೆಳೆಯುತ್ತಿವೆ.
ಉದ್ಘಾಟನಾ ಸಮಾರಂಭದಲ್ಲಿ ವಾತರ್ಾಧಿಕಾರಿ ಬಿ.ಆರ್.ರಂಗನಾಥ್, ಕೆ.ಎಸ್.ಆರ್.ಟಿ.ಸಿ. ವಾಯುವ್ಯ ಸಾರಿಗೆ ನಿಯಂತ್ರಣಾಧಿಕಾರಿ ಬಸವರಾಜ, ಸಹಾಯಕ ನಿಯಂತ್ರಣಾಧಿಕಾರಿ ಮುಜುಮ್ದಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ವಿಕಲಚೇತರ ಕಲ್ಯಾಣಾಧಿಕಾರಿ ಮಲ್ಲಿಕಾಜರ್ುನ ಮಠದ, ಸಾಹಿತಿ ಸತೀಶ ಕುಲಕಣರ್ಿ, ಎಂ.ಸಿ.ಎಂ.ಸಿ. ಸಮಿತಿಯ ಅರುಣಕುಮಾರ ಚಂದನವರ ಇತರರು ಉಪಸ್ಥಿತರಿದ್ದರು.