ಸಂಭ್ರಮದ ಹಾಲಸ್ವಾಮಿ ರಥೋತ್ಸವ
ಲೋಕದರ್ಶನವರದಿ
ಹಾವೇರಿ: ತಾಲೂಕಿನ ಸುಕ್ಷೇತ್ರ ಹನುಮನಹಳ್ಳಿ ಗ್ರಾಮದ ಹಾಲಶಿವಯೋಗಿಗಳವರ ಮುಳ್ಳುಗದ್ದುಗೆ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಮಹಾ ರಥೋತ್ಸವ ಯಶಸ್ವಿಯಾಗಿ ಜರುಗಿತು.
ಮಠದ ಗುರುಗಳಾದ ವೇ.ಮೂ. ಹಾಲಸಿದ್ಧರಾಮೆಶ್ವರ ಸ್ವಾಮಿಗಳ ಅಪ್ಪಣೆ ಮೇರೆಗೆ ಪ್ರತಿವರ್ಷದ ಪದ್ಧತಿಯಂತೆ ನಿಶಾನೆ ಹರಾಜು ಮಾಡಲಾಯಿತು. ನಂತರ ಆರಂಭಗೊಂಡ ರಥೋತ್ಸವವು ದೇವಸ್ಥಾನದ ಆವರಣದಲ್ಲಿ ಸಾಗಿ ನಂತರ ದೇವಸ್ಥಾನ ತಲುಪಿತು.
ನಂತರ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಸಿದ್ಧರಾಮ ಶ್ರೀಗಳು ಗ್ರಾಮಸ್ಥರಿಗೆ ಆಶೀರ್ವಚನ ನೀಡಿದರು. ಇದೇ ವೇಳೆಯಲ್ಲಿ ಸಕಲ ಸದ್ಭಕ್ತ ಮಂಡಳಿಯ ಸದಸ್ಯರು, ಊರಿನ ಗಣ್ಯರು ಇತರರು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 