ಸಂವಹನ ಕಲೆಗಳು ಜೀವನದ ಅವಿಭಾಜ್ಯವಾಗಲಿ: ಪ್ರೊ. ನಾಡಗೌಡ
ಹಾವೇರಿ, 05: ವ್ಯಕ್ತಿಯ ವಿಕಸನಕ್ಕೆ ಅವಶ್ಯವಾದ ಸಂವಹನ ಕಲೆಗಳು ಮತ್ತು ವ್ಯಕ್ತಿತ್ವ ಪುನರುತ್ಥಾನ ಅಂಶಗಳು ಜೀವನದ ಅವಿಭಾಜ್ಯವಾಗಬೇಕು ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ಸಂಘ ಆಯೋಜಿಸಿದ್ದ ಸಂವಹನ ಕಲೆಗಳು ವಿಷಯದ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಎಂದು ಜಿ. ಎಚ್. ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಎಸ್. ಬಿ. ನಾಡಗೌಡ ಮಾತನಾಡಿದರು.
ಪ್ರಜ್ಞಾವಂತ ಸಮೂಹ ಇಂದು ಗಟ್ಟಿಯಾಗಿ ನಿಮರ್ಾಣಗೊಳ್ಳುತ್ತಿದ್ದು, ಬದಲಾವಣೆಗೆ ತಕ್ಕಂತೆ ಬೆಳವಣಿಗೆಗಳು ಮತ್ತು ಹೊಸತನದ ಅಳವಡಿಕೆಯ ಅವಶ್ಯಕತೆ ಇದೆ. ಇಂಗ್ಲೀಷ್ ಭಾಷೆಯಿಂದು ವ್ಯವಹಾರಿಕ ಭಾಷೆಯಾಗಿದ್ದು ಎಲ್ಲಾ ರಂಗಗಳಲ್ಲೂ ಇಂಗೀಷ್ನ ಪ್ರಾಮುಖ್ಯತೆ ಇದೆ. ಮೂಲ ಭಾಷೆ ಕನ್ನಡವನ್ನು ಮರೆಯದೇ ಕೇವಲ ವ್ಯವಹಾರಿಕತೆಗೆ ಇಂಗ್ಲಿಷ್ ಭಾಷೆಯ ಕಲಿಗೆ ಇಂದಿನವರಿಗೆ ಅನಿವಾರ್ಯವಾಗಿದೆ. ನಮ್ಮತನದ ಅರಿವು ಜಾಗೃತಗೊಳಿಸಿ, ಭವಿಷ್ಯತ್ತಿನ ಭವ್ಯ ಭಾರತ ನಿಮರ್ಾಣ ಕಾರ್ಯಕ್ಕೆ ಪ್ರತಿಯೊಬ್ಬರೂ ಮುನ್ನೆಜ್ಜೆ ಹಾಕಬೇಕಿದೆ. ಕಲಿಕೆಯ ಹಂತದಲ್ಲಿರುವ ವಿದ್ಯಾಥರ್ಿಗಳು ಭಾಷಾ ಪ್ರಬುದ್ಧತೆ ಮತ್ತು ಮಾತುಗಾರಿಕೆ ಕಲೆಯನ್ನು ಕರಗತ ಮಾಡಿಕೊಂಡಲ್ಲಿ ಏನು ಸಾಧನೆ ಬೇಕಾದರೂ ಮಾಡಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಸ್ಥ ಡಾ|| ಎಮ್. ಜಿ. ಯರನಾಳ, ಸಂಘದ ಕಾಯರ್ಾಧ್ಯಕ್ಷ ಪ್ರೊ. ಆರ್. ಬಿ. ಅಜರಡ್ಡಿ, ಎಮ್.ಕಾಂ. ಸಂಯೋಜಕ ಪ್ರೊ. ಜಿ. ಎಸ್. ಬಾಕರ್ಿ, ಪ್ರೊ. ಗುರುಪಾದಯ್ಯ ವೀ. ಸಾಲಿಮಠ, ಪ್ರೊ. ಸುಮಾ ಹಿರೇಮಠ, ಪ್ರೊ. ವೈಶಾಲಿ ಜೈನ್ ಹಾಗೂ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 