ವಿಜಯಪುರ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತರ ನೊಂದಣಿಗೆ ಸೂಚನೆ

ಲೋಕದರ್ಶನ ವರದಿ

ವಿಜಯಪುರ 14: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತರನ್ನು ನೊಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ವಾಯ್ ಎಸ್ ಪಾಟೀಲ ಅವರು ಸಂಬಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಜಿಲ್ಲೆಯ ಪ್ರತಿ ಅರ್ಹ ರೈತರಿಗೆ ದೊರಯಬೇಕು ರೈತರ ಹೆಸರು ನೊಂದಣಿ ಕಾರ್ಯವನ್ನು ತಕ್ಷಣ ಆರಂಭಿಸುವಂತೆ ತಿಳಿಸಿದ ಅವರು ಆಯಾ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ ಸಹಾಯಕ ತೋಟಗಾರಿಕಾ ಅಧಿಕಾರಿಗಳ ಮೂಲಕ ನೊಂದಣಿ ಕಾರ್ಯ ಚುರುಕುಗೊಳಿಸುವಂತೆ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಈಗಾಗಲೇ ಈ ಯೋಜನೆಡಿ ನೊಂದಣಿಯಾಗಿರುವ ರೈತರನ್ನು ಹೊರತು ಪಡಿಸಿ ಇನ್ನುಳಿದ ಅರ್ಹ ರೈತರು ನಿಗದಿತ ಘೋಷಣಾ ಪತ್ರದೊಂದಿಗೆ ಆಧಾರ ಸಂಖ್ಯೆ, ಬ್ಯಾಂಕ್ ಖಾತೆ ಹಾಗೂ ಆಯಾ ಗ್ರಾಮದಲ್ಲಿರುವ ಜಮೀಣಿನ ಪಹಣಿ ಪತ್ರಗಳ ಝರಾಕ್ಸ್ ಪ್ರತಿಗಳೊಂದಿಗೆ ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳುವಂತೆ ತಿಳಿಸಿದ ಅವರು ಹೆಸರು ನೊಂದಣಿಯ ಜವಾಬ್ಧಾರಿ ಹೊಂದಿರುವ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳು ವಿಳಂಬಕ್ಕೆ ಅವಕಾಶ ನೀಡದೇ ತಕ್ಷಣ ಹೆಸರು ನೊಂದಣಿ ಕಾರ್ಯ ಆರಂಭಿಸಿ ಅರ್ಹ ಬಡ ಫಲಾನುಭವಿಗಳಿಗೆ ವಾಷರ್ಿಕವಾಗಿ  ಮೂರು ಕಂತುಗಳಲ್ಲಿ ಒಟ್ಟು ಆರು ಸಾವಿರ ರೂ ದೊರಕಿಸುವ ದಿಸೆಯಲ್ಲಿ ಜವಾಬ್ಧಾರಿಯಿಂದ ಕಾರ್ಯ ನಿರ್ವಹಿಸಲು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಈ ಯೋಜನೆಯ ಲಾಭ ಪಡೆಯುವ ಅರ್ಹ ರೈತರು ಯಾವುದೇ ಸಂವಿಧಾನಿಕ ಹುದ್ದೆ ಹೊಂದಿರಬಾರದು, ರಾಜ್ಯದ ಸಚಿವ ಅಥವಾ ಲೋಕ ಸಭಾ, ರಾಜ್ಯಸಭಾ, ರಾಜ್ಯ ಶಾಸಕಾಂಗ ಸಭೆಯ ಹಾಗೂ ಪರಿಷತ್ತಿನ ಸದಸ್ಯರಾಗಿರಬಾರದು ಅಥವಾ ಮುನಸಿಪಾಲಿಟಿ, ಕಾಪರ್ೋರೇಶನ್ ಮೇಯರ್, ಜಿಲ್ಲಾ ಪಂಚಾಯತಿ ಅಧ್ಯಕ್ಷರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ ಅದರಂತೆ ರೈತರ( ಪ್ರತಿ/ಪತ್ನಿ) ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮಂತ್ರಾಲಯ ಕಚೇರಿಗಳು/ ಇಲಾಖೆಗಳು, ಅವುಗಳ ಕ್ಷೇತ್ರ ಮಟ್ಟದ ಫಲಕಗಳು ಅಥವಾ ಕೇಂದ್ರ/ ರಾಜ್ಯ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮಗಳ ಮತ್ತು ಸರ್ಕಾರದ  ಅಧೀನದಲ್ಲಿ ಬರುವ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳ ಹಾಲಿ ಅಥವಾ ನಿವೃತ್ತ ಗ್ರೂಪ್ "ಸಿ" ಮತ್ತು ಮೇಲ್ಪಟ್ಟ ನೌಕರರಾಗಿರಬಾರದು ಯಾವುದೇ ಸ್ಥಳೀಯ ಸಂಸ್ಥೆಯ ಖಾಯಂ ನೌಕರ ಆಗಿರಬಾರದು  ಪತಿ/ಪತ್ನಿ ವಯೋನಿವೃತ್ತಿ ಹೊಂದಿ ಮಾಹೆಯಾನ ರೂ 10 ಸಾವಿರ ಅಥವಾ ಹೆಚ್ಚಿನ ಪಿಂಚಣಿ ಪಡೆಯುತ್ತಿಲ್ಲ ಮತ್ತು ಕಳೆದ ಮೌಲ್ಯ ಮಾಪನಾ ವರ್ಷದಲ್ಲಿ ಆದಾಯ ತೆರಿಗೆ ಸಂದಾಯ ಮಾಡಿರುವುದಿಲ್ಲ ಫಲಾನುಭವಿಯು ಪತಿ/ಪತ್ನಿ ವೈದ್ಯರು, ಅಭಿಯಂತರರು, ವಕೀಲರು, ಚಾಟಡರ್್ ಅಕೌಂಟಂಟಗಳು ಹಾಗೂ ವಾಸ್ತು ಶಿಲ್ಪ ಮುಂತಾದ ವೃತ್ತಿಪರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದಿಲ್ಲ ಅಥವಾ ಈ ಕ್ಷೇತ್ರಗಳ ವೃತ್ತಿಪರ ಸಂಘ ಸಂಸ್ಥೆಗಳೊಂದಿಗೆ ನೊಂದಿಣಿಯಾಗಿರುವುದಿಲ್ಲವೆಂದು ರೈತರು ಸ್ವಯಂ ಘೋಷಣೆಯನ್ನು ಘೋಷಣಾ ಪತ್ರದಲ್ಲಿ ಸಲ್ಲಿಸಬೇಕಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಆತ್ಮ ಹತ್ಯ ಮಾಡಿಕೊಂಡಿರುವ ರೈತ ಕುಟುಂಬಗಳಿಗೆ ಸಕಾಲಕ್ಕೆ ಪರಿಹಾರ ದೊರೆಯಲು ಅನುಕೂಲವಾಗುವಂತೆ ಕೃಷಿ ಇಲಾಖೆಯ ಸಹಾಯಕ ನಿದರ್ೆಶಕರು, ತಹಶೀಲ್ಧಾರರು, ಉಪವಿಭಾಗಾಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಆತ್ಮ ಹತ್ಯ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳುವುದರ ಜೊತೆಗೆ ಅವಶ್ಯಕ ದಾಖಲಾತಿಗಳೊಂದಿಗೆ ಮೃತರ ವಾರಸುದಾರರಿಗೆ ಪರಿಹಾರ ದೊರೆಯುವಂತೆ ಹಾಗೂ ಆತ್ಮ ಹತ್ಯ ಪ್ರಕರಣ ಶೀಘ್ರ ವಿಲೆವಾರಿಗೆ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ಧಾರಿಯಿಂದ ಕಾರ್ಯನಿರ್ವಹಿಸಬೇಕು ನಿರ್ಲಕ್ಷ ತೋರುವ ಅಧಿಕಾರಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಸನ್, ಕೃಷಿ ಜಂಟಿ ನಿದರ್ೆಶಕರಾದ ಶಿವಕುಮಾರ, ತೋಟಗಾರಿಕಾ ಉಪನಿದೆಶಶಕ ಸಂತೋಷ ಇನಾಮದರ, ತಹಶೀಲ್ಧಾರರು ಹಾಗೂ ಇತರರು ಉಪಸ್ಥಿತರಿದ್ದರು.