ಲೋಕದರ್ಶನ ವರದಿ
ಹೂವಿನಹಡಗಲಿ 29: ದೇಶದಲ್ಲಿ ಜಾರಿಗೊಂಡ ಗ್ಯಾಟ್ ಒಪ್ಪಂದವು ಭಾರತ ಅಂತರಾಷ್ಟ್ರೀಯಾ ವ್ಯಾಪಾರದಲ್ಲಿ ಪಾಲ್ಗೊಂಳುವಂತೆ ಮಾಡಿತು, ಜಿಎಸ್ಟಿ ಜಾರಿಯಿಂದ ಭಾರತ ದೇಶದ ವ್ಯಾಪಾರ ಹೆಚ್ಚು ಅಭಿವೃದ್ಧಿಯಾಗಿದೆಯೆಂದು ಸೊಂಡೂರು ತಾಲ್ಲೂಕಿನ ನಂದಿಹಳ್ಳಿ ಸ್ನಾತಕ್ಕೋತ್ತರ ಕೇಂದ್ರದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಮುಬಾರಕ್ ಹೇಳಿದರು.
ಪಟ್ಟಣದ ರುದ್ರಾಂಬ ಎಂ.ಪಿ.ಪ್ರಕಾಶ್ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಭರವಸೆ ಕೋಶದ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಅವರು ಪ್ರಾಚೀನ ಭಾರತದಲ್ಲಿ ಸಂಪ್ರಧಾಯಿಕ ವ್ಯಾಪಾರ ಜಾರಿಯಲ್ಲಿದ್ದರಿಂದ ಏಕರೂಪದ ತೆರಿಗೆ ವ್ಯವಸ್ಥೆ ಇದ್ದಿಲ್ಲಾ, ಬ್ರಿಟೀಷರು ಭಾರತವನ್ನ ಏಕಚಕ್ರಾಧಿಪತ್ಯಕ್ಕೆ ಒಳಪಡಿಸಿ ಏಕರೂಪ ತೆರಿಗೆ ಸಂಗ್ರಹಿಸಲು ಪ್ರಾರಂಭಿಸಿದರು. 1977ರ ನಂತರ ಭಾರತದ ತೆರಿಗೆ ಪದ್ದತಿಯಲ್ಲಿ ಅನೇಕ ಸುಧಾರಣೆಗಳಾಗಿ ಭಾರತದ ಅಂತರಿಕ ಮತ್ತು ಅಂತರಾಷ್ಟ್ರೀಯ ವ್ಯಾಪಾರ ಅಭಿವೃದ್ಧಿಯಾಯಿತು ಎಂದು ಹೇಳುತ್ತಾ, ಎಲ್ಲರೂ ಪ್ರಮಾಣಿಕವಾದ ತೆರಿಗೆ ಪಾವತಿಸಿದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.
ಐಕ್ಯುಎಸಿ ಸಂಚಾಲಕ ಪ್ರೊ.ಎನ್.ಗಂಟೆಪ್ಪ ಶೆಟ್ಟಿ ಪ್ರಾಸ್ಥಾವಿಕ ನುಡಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಪ್ರೊ.ಜಿ.ಮಲ್ಲಿಕಾರ್ಜುನ್ ಮಾತನಾಡಿ ವಿದ್ಯಾಥರ್ಿಗಳು ಜೀವನದಲ್ಲಿ ಅಭಿವೃದ್ಧಿಯಾಗಬೇಕಾದರೆ ಇಂಥಾ ಕಾರ್ಯಕ್ರಮದಲ್ಲಿ ಭಾಗವಹಿಸಿವುದು ಅವಶ್ಯವಾಗಿದೆ ಎಂದು ಅಧ್ಯಕ್ಷೀಯ ನುಡಿ ನುಡಿದರು. ಈ ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಸುರೇಶ, ಪ್ರಾಧ್ಯಾಪಕ ಎ.ಜಗದೀಶ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಕೆ.ಸತೀಶ ಸ್ವಾಗತಿಸಿದರು, ಪ್ರೊ.ರಮೇಶ್ ವಂದಿಸಿದರು, ಪ್ರೊ.ಜಿ.ಮಹೇಶ್ ಕಾರ್ಯಕ್ರಮ ನಿರೂಪಿಸಿದರು