ಹೂವಿನಹಡಗಲಿ: ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಎಸ್ಎಲ್ಸಿ ಪರೀಕ್ಷೆ ಕಳಪೆ ಸಾಧನೆಗೆ ಸಚಿವರ ಅಸಮಾಧಾನ

ಲೋಕದರ್ಶನ ವರದಿ

ಹೂವಿನಹಡಗಲಿ 08: ಕಳೆದ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆಯೊಂದಿಗೆ ರಾಜ್ಯದಲ್ಲಿ ಹೂವಿನಹಡಗಲಿ ಕೊನೆಯ ಸ್ಥಾನಕ್ಕೆ ಕುಸಿದಿರುವುದು ನಾಚಿಕೆಗೇಡು ಎಂದು ಸಚಿವ ಪಿ.ಟಿ.ಪರಮೇಶ್ವರನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ತಾ.ಪಂ.ರಾಜೀವ ಗಾಂಧಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ತರಬೇತಿ, ಸರಣಿ ಸಭೆಗಳನ್ನು ನಡೆಸಿ ಗುಣಮಟ್ಟದ ಫಲಿತಾಂಶಕ್ಕೆ ಪ್ರಯತ್ನ ಮಾಡಿದ್ದೆವು. ಆದರೆ ನೀವು ಫಲಿತಾಂಶ ಹಾಳುಗೆಡವಿದ್ದೀರಿ. ಶಾಲೆ ತಪಾಸಣೆಗಾಗಿ ಕಾಂಪೌಂಡ್ ಹಾರಿ ಹೋಗುವುದು.ಕದ್ದು ನೋಡುವುದನ್ನು ಬಿಟ್ಟು ಗುಣಮಟ್ಟದ ಸುಧಾರಣೆಗೆ ಗಮನ ಹರಿಸಿ ಎಂದು ಬಿಇಒ ಸಿ.ನಾಗರಾಜರನ್ನು ತರಾಟೆಗೆ ತೆಗೆದುಕೊಂಡರು.

ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾದ 4.19ಕೋಟಿ ಕಾಮಗಾರಿಗಳ ಸಚಿವರು ಕೇಳಿದಾಗೆಂಜಿನಿಯರ್ ಡಿ.ಜಯರಾಮ್ನಾಯ್ಕ ಪ್ರತಿಕ್ರಿಯೆಸಿ ಬಿಡುಗಡೆಯಾದ ಅನುದಾನದಲ್ಲಿ 1.35ಕೋಟಿ ಹಣವನ್ನು ಇಲಾಖೆಯ ಆಯುಕ್ತರು ವಿದ್ಯುತ್ ಬಿಲ್ ಬಾಕಿಗೆ ವರ್ಗಾವಣೆ  ಮಾಡಿದ್ದಾರೆ. ಇದರಿಂದ ಕ್ರಿಯಾ ಯೋಜನೆ ಪರಿಷ್ಕರಣೆ ಮಾಡಬೇಕಿದ ಎಂದರು. ಸಚಿವರು ಇಲಾಖೆಯ ನಿದರ್ೇಶಕರ ಜತೆ ದೂರವಾಣಿಯಲ್ಲಿ ಮಾತನಾಡಿ ಬರ ಹಿನ್ನೆಲೆಯಲ್ಲಿ ಸರ್ಕಾರ ಕುಡಿಯುವ ನೀರಿಗೆ ವಿಶೇಷ ಆದ್ಯತೆ ನೀಡಿದೆ.ಸರ್ಕಾರದಿಂದ  ಬಿಡುಗಡೆಯಾದ ಅನುದಾನವನ್ನು ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡಬೇಡಿ ಎಂದರು.

ಸಭೆಗೆ ಬಹಿಸ್ಕಾರ: 

ಸರ್ಕಾರಿ  ಯೋಜನೆಗಳ ಅನುಷ್ಠಾನ ಮಾಹಿತಿಯನ್ನು ಮುಂಚಿತವಾಗಿ ನೀಡಬೇಕು.ಸಭೆಯಲ್ಲಿ ಪ್ರಗತಿವರದಿ ನೀಡುವುದರಿಂದ ಚಚರ್ಿಸಲು ಆಗುವುದಿಲ್ಲ ಎಂದು ಜಿ.ಪಂ.ಸದಸು ಪಿ.ವಿಜಯಕುಮಾರ ಆರಂಭದಲ್ಲೇ ಸಭೆ ಬಹಿಷ್ಕರಿಸಿ ಹೊರ ನಡೆದರು. ಸದಸ್ಯರಾದ ಎಸ್.ಕೊಟ್ರೇಶ, ಎಸ್.ಎಂ.ಲಲಿತಾಬಾಯಿ,ಎಂ.ವೀಣಾ ತಮ್ಮ ಕ್ಷೇತ್ರಗಳ ಸಮಸ್ಯೆ ಬಗ್ಗೆ ಚಚರ್ಿಸಿದರು.

ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ಶಾರದಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ತಹಶೀಲ್ದಾರ ಕೆ.ರಾಘವೇಂದ್ರರಾವ್, ತಾ.ಪಂ.ಇಒ ಯು.ಎಚ್.ಸೋಮಶೇಖರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.