ಲೋಕದರ್ಶನ ವರದಿ
ಹೊಸಪೇಟೆ 06: ಅಮರಾವತಿ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪತ್ರಿಕಾ ಘೋಷ್ಟಿ ಹಮ್ಮಿಕೊಳ್ಳಲಾಗಿದೆ. ಘೋಷ್ಟಿಯನ್ನು ಉದ್ದೇಶಿಸಿ ರಾಜ್ಯ ಪ್ರಧಾನ ಕಾರ್ಯದಶರ್ಿಯಾದ ಜೆ.ಕಾರ್ತಿಕ್, ಮಾತನಾಡಿ ರಾಜ್ಯದಲ್ಲಿ 17 ಜಿಲ್ಲೆಗಳಲ್ಲಿ ನೆರೆಹಾವಳಿಗೆ ತುತ್ತಾಗಿರತಕ್ಕಂತ ಜಿಲ್ಲೆಗಳಿಗೆ ಪರಿಹಾರ ವಿತರಿಸುವುದರಲ್ಲಿ ಸಕರ್ಾರ ವಿಫಲವಾಗಿದೆ ಎಂದರು.
ಕಳೆದು ಅಕ್ಟೋಬರ್ 10ನೇ ತಾರೀಖಿನಂದು ವಿದಾನಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ಖುದ್ದಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು, ನಮ್ಮ ರಾಜ್ಯಾಧ್ಯಕ್ಷರ ಹತ್ತಿರ ಮಾತನಾಡಿ 15 ದಿವಸ ಕಾಲಾವಕಾಶ ಕೊಡಿ ನೆರೆ ಪ್ರವಾಹದ ಪ್ರದೇಶದ ಜನರಿಗೆ ಸೂಕ್ತ ಪರಿಹಾರನೀಡಿ ಆ ಪ್ರದೇಶದಲ್ಲಿರತಕ್ಕಂತ ಸಮಸ್ಯೆಗಳನ್ನು ಬಗೆಹರಿಸುತ್ತೇವೆಂದು ಖುದ್ದಾಗಿ ಮುಖ್ಯಮಂತ್ರಿಗಳೇ ಹೇಳಿದ್ದರು. ಆದರೆ ಇಲ್ಲಿಯವರೆಗೂ ನೆರೆ ಪ್ರವಾಹಕ್ಕೆ ತುತ್ತಾಗಿರತಕ್ಕಂತ ಪ್ರದೇಶಗಳ ಕಡೆಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಕೂಡ ತಲೆಹಾಕದೇ ನೆರೆ ಪ್ರವಾಹದ ಜನರನ್ನೂ ಸಕರ್ಾರ ಮರೆತಿದೆ.
ತಾಲೂಕಿನಲ್ಲಿ ಸುಮಾರು 4ಲಕ್ಷದ 20 ಸಾವಿರ ಟನ್ ಕಬ್ಬು ರೈತರು ಬೆಳೆದಿದ್ದು ಈ ಭಾಗದಲ್ಲಿ ಸಣ್ಣ (ಒಂದು ಎಕರೆ), ಅತೀ ಸಣ್ಣ (ಅರ್ಧ ಎಕರೆ) ರೈತರು 60% ರಷ್ಟಿದ್ದಾರೆ. ಇವರು ಬೇರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುವಂತಹ ಶಕ್ತರಿರುವುದಿಲ್ಲ. ಬೇರೆ ಕಾರ್ಖಾನೆಗೆ ಸರಬರಾಜು ಮಾಡಿದರೆ ಒಂದು ಟನ್ಗೆ 600 ರೂಪಾಯಿಗಳು ನಷ್ಟವಾಗುತ್ತಿದ್ದು. ಅದಕ್ಕಾಗಿ ಸಣ್ಣ, ಅತೀ ಸಣ್ಣ ರೈತರು ಸ್ಥಳಿಯ ಗಾಣಗಳಿಗೆ 1 ಟನ್ ಕಬ್ಬನ್ನು 1350 ರಿಂದ 1450 ರೂಪಾಯಿಗಳಿಗೆ ಮಾರಿಕೊಳ್ಳುತ್ತಿದ್ದು, ಇದು ರೈತರ ದುರದೃಷ್ಟ ಸಂಗತಿ. ತುಂಗಭದ್ರ ಜಲಾಶಯದಿಂದ ಇಲ್ಲಿಯವರೆಗೆ 212 ಟಿ.ಎಂ.ಸಿ. ನೀರು ನದಿಗೆ ಬಿಡಲಾಗಿದೆ.
ಜಿಲ್ಲೆಯ ಕೆರೆಗಳು ಮಾತ್ರ ಖಾಲಿ ಇದ್ದು, ಇದನ್ನು ನೋಡಿದರೆ ಜಿಲ್ಲೆಯಲ್ಲಿ ರಾಜಕೀಯ ಇಚ್ಚಾಶಕ್ತಿ ಕೊರತೆ ಎದ್ದುಕಾಣುತ್ತಿದೆ. ಸರ್ಖಾರ ಕೂಡಲೇ ಜಿಲ್ಲೆಯಲ್ಲಿರುವ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಕೈಗೊಳ್ಳಬೇಕು. ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ದಿನಾಂಕ:07.11.2019 ರಂದು ಗುರುವಾರದಂದು ಬೆಂಗಳೂರಿನ ಮೌರ್ಯ ಸರ್ಕಲ್ನಿಂದ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ ಎಂದರು.