ಹೊಸಪೇಟೆ 25: ಕಮಲಾಪುರದಲ್ಲಿ ರೈತ ಸಂಘದ ನಾಮಫಲಕ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ. ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಮಲಾಪುರದಲ್ಲಿ ನಾಮಫಲಕ ಉದ್ಘಾಟನೆ ಮಾಡಲಾಯಿತು. ಮತ್ತು ವೀರಶೈವ ಕಲ್ಯಾಣ ಮಂಟಪದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು.
ರೈತರ ಸಭೆಯನ್ನು ಉದ್ದೇಶಿಸಿ ಜೆ.ಕಾರ್ತಿಕ್ ರಾಜ್ಯ ಪ್ರಧಾನ ಕಾರ್ಯದಶರ್ಿಗಳು, ಇವರು ಮಾತನಾಡಿ ರೈತರು ಬೆಳೆದಂತಹ ಬೆಳೆಗಳಿಗೆ ಸರಿಯಾದ ಪರಿಷ್ಕೃತ ಬೆಲೆ ಇಲ್ಲದಂತಾಗಿದೆ. ಸಾಲದ ಸುಳಿಯಲ್ಲಿ ರೈತರು ಸಿಲುಕಿದ್ದು ಸಕರ್ಾರ ಕೂಡಲೇ ನೆರವಿಗೆ ಬರಬೇಕು ರೈತ ಸಂಘದ ಹೋರಾಟದಿಂದ ಇಂದು ಕಮಲಾಪುರ ಕೆರೆ ತುಂಬಿದೆ ಇವತ್ತು ಭತ್ತ ಖರೀದಿ ಕೇಂದ್ರ ಹೆಸರಿಗಷ್ಟೇ ಇದೆ ಆದರೆ ಒಂದು ಚೀಲ ಭತ್ತವೂ ಕೂಡ ಖರೀದಿಯಾಗಿಲ್ಲ ಬೆಸಿಗೆ ಭತ್ತದ ಬೆಳೆಯನ್ನು ಖರೀದಿ ಮಾಡಲು ಮಾರ್ಚ 1ರಿಂದ ಭತ್ತ ಖರೀದಿ ಕೇಂದ್ರವನ್ನು ಜಿಲ್ಲಾಡಳಿತ ತೆಗೆಯಬೇಕು ಹಾಗೂ ಹಿಂದೆ ಇರುವಂತಹ ಷರತ್ತುಗಳನ್ನು ತೆಗೆದು ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಭತ್ತವನ್ನು ಖರೀದಿ ಮಾಡಬೇಕು ಎಂದರು.
ಜಿಲ್ಲಾಧ್ಯಕ್ಷರಾದ ಪಿ.ನಾರಾಯಣ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಬಯೋಪ್ರಾಡೆಕ್ಟ್ (ಸಕರ್ಾರದ ಪರವಾನಿಗೆ ಇಲ್ಲದ್ದು) ಕ್ರಿಮಿನಾಶಕ ಔಷಧಿ, ರಸಗೊಬ್ಬರ ಅತೀ ಹೆಚ್ಚಾಗಿ ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದು. ಇದರ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳು, ನೋಡಿ ನೋಡದೇನೆ ಕಣ್ಣು ಮುಚ್ಚಿಕುಳಿತಿದ್ದಾರೆ. ಆದ ಕಾರಣ ಈ ಕಳಪೆ ಕ್ರಿಮಿನಾಷಕ ಔಷಧಿಗಳು ರಸಗೊಬ್ಬರ ರೈತರು ಖರೀದಿ ಮಾಡುತ್ತಿದ್ದು ಇದು ರೈತರಿಗೆ ಆಗುತ್ತಿರುವ ಮೋಸ. ಕೂಡಲೇ ಬಯೋಪ್ರಾಡೆಕ್ಟ್ ಮಾರಾಟ ಮಾಡುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬಿ.ವಿ.ಗೌಡ, ರಮೇಶ್, ಹನುಮಂತಪ್ಪ, ರಮೇಶ, ಎಲ್.ಎಸ್.ರುದ್ರಪ್ಪ, ಜೆ.ರಾಘವೇಂದ್ರ, ರೇವಣಸಿದ್ದಪ್ಪ, ಅಯ್ಯಣ್ಣ, ಉದ್ದಾನಯ್ಯ ಸ್ವಾಮಿ, ಸಂಗಪ್ಪ, ಹಲವು ರೈತರು ಉಪಸ್ಥಿತರಿದ್ದರು.