ಹೊಸಪೇಟೆ; ಸದೃಢ ದೇಹ ಉತ್ತಮ ಆರೋಗ್ಯಕ್ಕೆ ಕ್ರೀಡೆ ಅತ್ಯವಶ್ಯ: ಭೀಮನಾಯ್ಕ್

ಲೋಕದರ್ಶನ ವರದಿ

ಹೊಸಪೇಟೆ 19: ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸದೃಢ ದೇಹ ಮತ್ತು ಉತ್ತಮವಾದ ಆರೋಗ್ಯವನ್ನು ಕೊಂಡಕೊಳ್ಳುವುದಕ್ಕೆ ಸಾಧ್ಯ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಎಸ್.ಭೀಮನಾಯ್ಕ್ ಹೇಳಿದರು.

ಭಾನುವಾರ ಹನುಮನಹಳ್ಳಿ ಗ್ರಾಮದಲ್ಲಿ ಜಿಸಿಸಿ ಸಂಘದ ಯವಕರು ಹಮ್ಮಿಕೊಂಡಿದ್ದ ಕ್ರಿಕೇಟ್ ಟೂನರ್ಿಮೆಂಟ್ ಬ್ಯಾಟಿಂಗ್ ಆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಕ್ರಿಯವಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೇಹ ಮತ್ತು ಮನಸ್ಸು ಶಾಂತರೀತಿಯಿಂದ ಇರುತ್ತದೆ, ನಮ್ಮಲ್ಲಿರುವ ಆತ್ಮ ಸ್ಥೈರ್ಯವನ್ನು ಗಟ್ಟಿಗೊಳಿಸುತ್ತವೆ ಮತ್ತು ಮನೋ ಬಲ ಹೆಚ್ಚಾಗುತ್ತದೆ. ಯಾವುದೇ ಕ್ರೀಡೆಗಳಲ್ಲಿ ಸೋಲು-ಗೆಲವು ಮುಖ್ಯವಲ್ಲ ಆಟದಲ್ಲಿ ಭಾಗವಹಿಸುವುದು ಮುಖ್ಯವಾಗುತ್ತದೆ. ಯಾವೊಬ್ಬ ಆಟಗಾರನೂ ಸೋಲನ್ನು ಅಥವಾ ಗೆಲುವನ್ನು ವೈಯಕ್ತಿಕ ದ್ವೇಷವಾಗಿ ಪರಿಗಣಿಸಬಾರದು, ಸೋಲು-ಗೆಲವು ಎರಡನ್ನು ಸಮನಾಗಿ ಸೀಕರಿಸಬೇಕೆಂದು ಕ್ರಿಕೇಟ್ ಪಟುಗಳಿಗೆ ಕಿವಿ ಮಾತು ಹೇಳಿದರು.

ಮುಂದಿನ ದಿನಗಳಲ್ಲಿ ಮರಿಯಮ್ಮನಹಳ್ಳಿ ಹೋಬಳಿಯ ವ್ಯಾಪ್ತಿಗೆ ಕ್ರಿಕೇಟ್ ಆಟದ ಮೈದಾನವನ್ನು ನಿರ್ಮಾಣ ಮಾಡುತ್ತೇನೆಂದರು.

ಈ ಟೂನರ್ಿಮೆಂಟ್ಲ್ಲಿ ವ್ಯಾಸನಕೆರೆ, ವೆಂಕಟಾಪುರ, ಅಯ್ಯನಹಳ್ಳಿ, ಡಾಣಾಪುರ, ಮರಿಯಮ್ಮನಹಳ್ಳಿ, ಮರಿಯಮ್ಮನಹಳ್ಳಿ ತಾಂಡ, ದೇವಲಾಪುರ, ಗುಂಡಾ, ಜಿ.ನಾಗಲಾಪುರ. ಜಿ.ಗರಗ, ಮತ್ತು ಗಾಳೆಮ್ಮನಗುಡಿ ಒಟ್ಟು 25 ತಂಡಗಳು ಭಾಗವಹಿಸಿದ್ದವು.

ಶಾಸಕ ಎಸ್.ಭೀಮನಾಯ್ಕ್ ಡಣಾಪುರ ಮತ್ತು ಗೌರೀಪುರ ಕ್ರಿಕೇಟರ್ಸ್ ಕ್ಲಬ್ ಎ ತಂಡಗಳಿಗೆ ಟಾಸ್ ತೂರುವ ಮೂಲಕ ಚಾಲನೆ ನೀಡಿದರು. ಡಣಾಪುರ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿ 10 ವೋವರ್ಗಳಿಗೆ 47 ರನ್ ಗಳಿಸಿತ್ತು. ನಂತರ ಗೌರೀಪುರದ ಜಿಸಿಸಿ ಎ ತಂಡ 7 ವೋವರ್ಗಳಿಗೆ 4 ವಿಕೇಟ್ ನಷ್ಟಕ್ಕೆ 48 ರನ್ಗಳನ್ನು ಬಾರಿಸಿ ಗೌರೀಪುರದ ಜಿಸಿಸಿ ಎ ತಂಡದ ನಾಯಕ ಬಿಎಮ್ಎಸ್ ಸಂತೋಷ್ ನೇತೃತ್ವದ ತಂಡ ವಿಜಯ ಸಾಧಿಸಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ, ಧರ್ಮದರ್ಶಿ  ಸತ್ಯನಾರಾಯಣ, ಪ.ಪಂ ಮಾಜಿ ನಾಮ ನಿದರ್ೇಶಿತ ವಿಜಯಕುಮಾರ, ಮಾಜಿ ತಾ.ಪಂ ಸದಸ್ಯ ಸೋಮಪ್ಪ ಉಪ್ಪಾರ, ಇಂಡಿ ತಾ.ಪಂ ಅಧ್ಯಕ್ಷ ಶೇಖರ್ ನಾಯ್ಕ್, ಮುಖಂಡರಾದ ಉರುಕಳ್ಳಿ ಮಂಜಪ್ಪ, ತಾಯಪ್ಪ, ರಾಜಪ್ಪ, ರಾಮನಾಯ್ಕ್ ಇನ್ನಿತರರಿದ್ದರು.