ಪರಿಸರ ಸಮತೋಲನೆಗೆ ಗಿಡ, ಮರಗಳ ಅವಶ್ಯಕ: ಎಂ.ಎಸ್.ಗುರುಮೂತರ್ಿ


ಕಂಪ್ಲಿ03: ಪರಿಸರ ಸಮತೋಲನೆಗೆ ಗಿಡ, ಮರಗಳ ಅವಶ್ಯಕತೆ ಇದ್ದು, ಅದಕ್ಕಾಗಿ ಪ್ರತಿಯೊಬ್ಬರು ಗಿಡ, ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಗ್ರಾಪಂ ಉಪಾಧ್ಯಕ್ಷ ಹಾಗೂ ಶಿಕ್ಷಣ ಪ್ರೇಮಿ ಎಂ.ಎಸ್.ಗುರುಮೂತರ್ಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಸಮೀಪದ ಹೊಸ ದರೋಜಿ ಗ್ರಾಮದ ಸಕರ್ಾರಿ ಪ್ರೌಢ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಜಾಗತಿಕ ತಾಪಮಾನ ನಿಯಂತ್ರಿಸಲು ಪ್ರತಿಯೊಬ್ಬರೂ ಹಸಿರೀಕರಣಕ್ಕೆ ಹೆಚ್ಚು ಆಧ್ಯತೆ ನೀಡಬೇಕು. ಕಾಖರ್ಾನೆ, ವಾಹನಗಳ ಹೊಗೆಯ ಹೆಚ್ಚಳದಿಂದ ಪರಿಸರ ವಿನಾಶಕ್ಕೆ ಕಾರಣವಾಗುತ್ತಿದೆ. ಕೈಗಾರಿಕೆಯಂತಹ ಉತ್ಪನ್ನಗಳ ಬಳಕೆಯ ದೃಷ್ಠಿಯಿಂದ ಪರಿಸರ ನಾಶ ಮಾಡುತ್ತಿದ್ದೇವೆ. ಇದೇ ರೀತಿ ಕೈಗಾರಿಕೆಗಳು ಹೆಚ್ಚಾಗುತ್ತಾ ಸಾಗಿದರೆ ಮುಂದಿನ ದಿನಮಾನದಲ್ಲಿ ಮನುಷ್ಯರು ಮನುಷ್ಯನ ಉಸಿರಾಟದ ಮೇಲೆ ಪರಿಣಾಮ ಬೀರುವ ಜೊತೆಗೆ ಸಂಕಷ್ಟದ ಪರಿಸ್ಥಿತಿ ಅನುಭವಿಸುಬೇಕಾಗುತ್ತದೆ. 

ಪ್ರತಿಯೊಬ್ಬ ನಾಗರೀಕರು ಗಿಡ ಮರಗಳನ್ನು ಬೆಳೆಸುವ ಮೂಲಕ ಹಸಿರೀಕರಣಕ್ಕೆ ಮುಂದಾಗಬೇಕು. ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಾದರೆ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಬದ್ಧರಾಗಬೇಕಿದೆ ಎಂದು ತಿಳಿಸಿದರು. ನಂತರ ಉಪ ಪ್ರಾಚಾರ್ಯ ಆರ್.ಶಿವಕುಮಾರ್ ಅವರು ಮಾತನಾಡಿ, ಪರಿಸರ ಕಾಪಾಡುವಂತೆ ವಿದ್ಯಾಥರ್ಿಗಳಿಗೆ ಕಿವಿಮಾತನ್ನ ಹೇಳಿದರು. 

ಈ ಸಂದರ್ಭದಲ್ಲಿ ಶಿಕ್ಷಕರಾದ ಮಹಾರುದ್ರಪ್ಪ, ಪರಶುರಾಮ, ಬಸವರಾಜ, ಕೆ.ಪರಸಪ್ಪ, ಜ್ಯೋತಿ, ದ್ಯಾವಮ್ಮ ಸೇರಿ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.