ಧಾರವಾಡ 20: ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಹಾಕಿ ಸಾಮಾಜಿಕ ಸಮಾನತೆ ತಂದುಕೊಟ್ಟವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಸಾಮಾಜಿಕ ಸಮತೋಲನದ ಹರಿಕಾರರು ಕೂಡಾ ಆಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಹೇಳಿದರು.
ಇಂದು ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಿ.ದೇವರಾಜ ಅರಸು ಅವರ 104ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವರಾಜ ಅರಸು ಅವರು ರಾಜ್ಯದ ನೇತೃತ್ವ ವಹಿಸಿದ ನಂತರ ಸಾಮಾಜಿಕ, ಆಥರ್ಿಕ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು. ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಹೆಸರಾಂತ ಕಾನೂನು ತಜ್ಞ ಎಲ್.ಜಿ. ಹಾವನೂರ ಅವರ ನೇತೃತ್ವದಲ್ಲಿ ಆಯೋಗ ರಚಿಸಿದರು. ಮತ್ತು ಅದು ನೀಡಿದ ವರದಿಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು ಒಂದು ಐತಿಹಾಸಿಕ ಸಾಧನೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಮಕ್ಕಳಿಗೆ ವಸತಿ ನಿಲಯ, ಶಿಕ್ಷಣ ಸಂಸ್ಥೆಗಳು, ವಿದ್ಯಾಥರ್ಿ ವೇತನಗಳು ಜಾರಿಗೆ ಬಂದಿದ್ದರಿಂದ ಶೈಕ್ಷಣಿಕ ಕ್ರಾಂತಿ ಮೂಡಿತು. ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ, ಕೃಷಿಕರಿಗೆ, ಸಾಂಪ್ರದಾಯಿಕ ಉದ್ಯೋಗಿಗಳಿಗೆ ಆಥರ್ಿಕ ಸಹಾಯಧನದ ಯೋಜನೆಗಳು ಹಿಂದುಳಿದ ವರ್ಗಗಳಲ್ಲಿ ಅಭಿವೃದ್ಧಿ ಮೂಡಿಸಿ ಆತ್ಮವಿಶ್ವಾಸ ತಂದಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅತಿಯಾದ ಮಳೆ ಹಾಗೂ ನೆರೆಹಾವಳಿಯಿಂದ ಉತ್ತರ ಕನರ್ಾಟಕ ಇಂದು ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ನೊಂದವರ ಧ್ವನಿಯಾಗಿ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ್ದ ಸಮಾನತೆಯ ಹರಿಕಾರ ದೇವರಾಜ ಅರಸು ಅವರ ಜಯಂತಿಯನ್ನು ಸರಳವಾಗಿ ಆಚರಿಸಾಗುತ್ತಿದೆ. ಜಯಂತಿ ಆಚರಣೆಗೆ ಮೀಸಲಿಟ್ಟ ಹಣವನ್ನು ನೆರೆ ಸಂತ್ರಸ್ತರ ನಿಧಿಗೆ ನೀಡಲಾಗುವುದು ಎಂದು ಹೇಳಿದರು.
ಪ್ರಾಥಮಿಕ ಹಂತದಿಂದ ಪಿಎಚ್ಡಿವರಗೆ ವಿದ್ಯಾಭ್ಯಾಸ ಪಡೆಯುವ ಎಲ್ಲ ವಿದ್ಯಾಥರ್ಿಗಳು ದೇವರಾಜ ಅರಸು ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿ ಅವರ ಜೀವನದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮತ್ತು ತಮ್ಮ ಕುಟುಂಬ ನೆರೆಹೊರೆಯವರಿಗೆ, ಸಮಾಜಕ್ಕೆ ನಿಸ್ವಾರ್ಥ ಮನೋಭಾವದಿಂದ ನೆರವಾಗಬೇಕು ಎಂದು ಸೊಗಲದ ತಿಳಿಸಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮಣ ಬಕ್ಕಾಯಿ ಮಾತನಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪತ್ರಾಂಕಿತ ವ್ಯವಸ್ಥಾಪಕಿ ಸರೋಜಾ ಹಳಕಟ್ಟಿ, ಧಾರವಾಡ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವೈ.ಬಿ.ನಂದಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿದರ್ೇಶಕ ನವೀನ ಶಿಂತ್ರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಗುರುರಾಜ ಕುಲಕಣರ್ಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಬ್ದುಲ್ ರಶೀದ್ ಮಿರ್ಜಣ್ಣವರ ಹಾಗೂ ವಿವಿಧ ಸಮಾಜ ಮುಖಂಡರಾದ ಶಿವಣ್ಣ ಬಡಿಗೇರ, ಗುರುನಾಥ್ ಹುಲಗೂರ, ರಾಜು ಓಲೇಕಾರ ಉಪಸ್ಥಿತರಿದ್ದರು.
ನಿಲಯ ಪಾಲಕ ಆನಂದ ಪಾಟೀಲ ಸ್ವಾಗತಿಸಿದರು. ರವಿ ಕುಲಕಣರ್ಿ ನಿರೂಪಿಸಿ, ವಂದಿಸಿದರು. ಹಾಗೂ ವಿದ್ಯಾಥರ್ಿಗಳು, ನಿಲಯ ಪಾಲಕರು, ಸಾರ್ವಜನಿಕರು ಭಾಗವಹಿಸಿದ್ದರು.