ಬ್ಯಾಡಗಿ: ಬೆಳೆವಿಮೆ ಬಿಡುಗಡೆ, ವನ್ಯಜೀವಿಗಳಿಂದ ರೈತರ ಸಂರಕ್ಷಣೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಪುಟ್ಟಣಯ್ಯ ಬಣ) ಕಾರ್ಯಕರ್ತರು ಸೋಮವಾರದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಯಾವುದೇ ಪ್ರತಿಫಲ ಕಾಣದೇ ಎರಡನೇ ದಿನಕ್ಕೆ ಮುಂದುವರೆದಿದೆ.
ಬೆಳಿಗ್ಗೆ ಪಟ್ಟಣದ ವೀರಭದ್ರೇಶ್ವರ ದೇವಾಲಯದಿಂದ ಮೆರವಣಿಗೆ ಮೂಲಕ ಸಾಗಿಬಂದ ರೈತ ಸಂಘದ ಸಾವಿರಾರು ಕಾರ್ಯಕರ್ತರು, ಪಟ್ಟಣದ ಸುಭಾಸ ವೃತ್ತದಲ್ಲಿ ಮಾನವ ಸರಪಳಿ ನಿಮರ್ಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಕರ್ಾರ ಸೇರಿದಂತೆ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಕೃಷಿ ಇಲಾಖೆ ಹಾಗೂ ವಿಮಾ ಕಂಪನಿಗಳ ವಿರುದ್ಧ ಘೋಷಣೆ ಕೂಗಿದರು.
ಅಪೂರ್ಣಗೊಂಡ ಯಾದಿಯನ್ನು ಮುಖಕ್ಕೆ ಎಸೆದ ರೈತರು. ಬೆಳೆವಿಮೆ ಹಣ ಬಿಡುಗಡೆಯಾಗದಿರುವ ರೈತರ ಯಾದಿಯನ್ನು ಪ್ರಕಟಿಸಬೇಕು ಮೂರು ವರ್ಷಗಳಾದರೂ ಅವರ ಖಾತೆಗಳಿಗೆ ಬೆಳೆವಿಮೆ ಜಮಾ ಏಕೆ ಮಾಡಿಲ್ಲ..? ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಪ್ರತಿಭಟನಾಕಾರರು ಕೆಸಿಸಿ ಬ್ಯಾಂಕ್ ಅಧಿಕಾರಿಗೆ ಆಗ್ರಹಿಸಿದರು, ಈ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ್ ಅಧಿಕಾರಿ ಕೇವಲ ಒಂದು ಸೊಸೈಟಿ 19 ಜನರ ಯಾದಿಯನ್ನಷ್ಟೇ ನೀಡಿದಾಗ ಆಕ್ರೋಶಗೊಂಡ ರೈತರು ಎಲ್ಲ ಸೊಸೈಟಿಗಳಲ್ಲಿನ ಬಾಕಿದಾರರ ಯಾದಿಯನ್ನು ನೀಡುವಂತೆ ಆಗ್ರಹಿಸಿದರಲ್ಲದೇ ಕೊಟ್ಟಿರುವ ಯಾದಿಯನ್ನು ಉಪ್ಪು ಹಾಕಿಕೊಂಡು ನೆಕ್ಕಬೇಕೆ ಎಂದು ಮರು ಪ್ರಶ್ನಸಿದರು..
ರೈತರು ಬೆಳೆವಿಮೆ ತುಂಬುವುದಿಲ್ಲ: ಪ್ರಧಾನ ಕಾರ್ಯದಶರ್ಿ ಮಲ್ಲಿಕಾಜರ್ುನ ಬಳ್ಳಾರಿ ಮಾತನಾಡಿ, ಕಳೆದ 2015-16 ಮತ್ತು 2016-17 ರಲ್ಲಿ ರೈತರು ತುಂಬಿದ್ದ ಬೆಳೆವಿಮೆ ಪಡೆಯದೇ ಉಳಿದುಕೊಂಡಿರುವ ಫಲಾನುಭವಿಗಳ ಯಾದಿಯನ್ನೇ ಪಡೆಯಲು 3 ವರ್ಷಗಳ ಕಾಲಾವಕಾಶ ಬೇಕಾಯಿತು, ರೈತರಿಗೆ ವಿತರಣೆಯಾಗದ ಸುಮಾರು 11 ಕೋಟಿ ರೂ.ಗಳಷ್ಟು ಹಣ ಬ್ಯಾಂಕಿನಲ್ಲಿ ಉಳಿದುಕೊಂಡಿದ್ದು ರೈತರಿಗೆ ಬಡ್ಡಿ ಸಮೇತ ವಿತರಣೆ ಮಾಡಬೇಕು ಅಲ್ಲಿಯವರೆಗೂ ಜಿಲ್ಲೆಯಲ್ಲಿರುವ ರೈತರ್ಯಾರು ಬೆಳೆವಿಮೆ ತುಂಬುವುದಿಲ್ಲ ಎಂದರು.
ಬಿಡುಗಡೆಯಾದ ಬೆಳೆವಿಮೆ ಯಾರ ಜೋಬಿಗೆ. ರಾಜ್ಯ ರೈತ ಸಂಘವು ಕೇವಲ ಹೋರಾಟಕ್ಕಷ್ಟೇ ಸೀಮಿತವಲ್ಲ, ಆದರೆ ಅಧಿಕಾರಿಗಳು ತಪ್ಪು ಮಾಡಿದಾಗ ಅವರನ್ನು ಎಚ್ಚರಿಸುವ ಕೆಲಸ ನಾವು ಮಾಡಲೇಬೇಕಾಗುತ್ತದೆ, ಬೆಳೆವಿಮೆ ಯಾವುದೇ ಹಣ ಬಾಕಿ ಉಳಿದಿಲ್ಲ ಎಂಬುದಾಗಿ ವಿಮೆ ಕಂಪನಿಯರು ಹೇಳುತ್ತಾರೆ, ಹಾಗಿದ್ದರೆ ಬಿಡುಗಡೆಯಾದಂತಹ ಬೆಳೆವಿಮೆ ಹಣ ಯಾರ ಜೋಬಿಗೆ ಹೋಯಿತು..? ಎಂಬುದೇ ಅರ್ಥವಾಗದ ವಿಷಯ ಎಂದರು.
ನಿಮ್ಮ ಪ್ರಾಣಿಗಳನ್ನು ನೀವೇ ಹಿಡಿದಿಟ್ಟುಕೊಳ್ಳಿ: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಜಿಂಕೆಗಳ ಹಾವಳಿಯಿಂದ ಉತ್ತರ ಕನರ್ಾಟಕದ ಬಹುತೇಕ ರೈತರು ಕಂಗಾಲಾಗಿದ್ದಾರೆ, ಅವುಗಳನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಾಗದ ವಿಷಯ, ಅಲ್ಲದೇ ಅರಣ್ಯ ಇಲಾಖೆ ರೈತರಿಗೆ ನೀಡುತ್ತಿರುವ ಪರಿಹಾರದ ಮೊತ್ತ ದುಡಿದಿದ್ದರಲಿ ಬಿತ್ತನೆ ಕಾರ್ಯಕ್ಕೆ ಬಳಸಿದ ಹಣವೂ ಮರಳಿ ಸಿಗದಂತಾಗಿದೆ, ಹೀಗಿರುವಾಗ ನಿಮ್ಮ ಪರಿಹಾರ ನಮಗೆ ಬೇಡ ಆದರೆ ನಿಮ್ಮ ಪ್ರಾಣಿಯಗಳನ್ನು ರೈತರ ಹೊಲಗಳಿಗೆ ನುಗ್ಗದಿದ್ದರೇ ಸಾಕು ಎಂದರು.
ಮಾತುಕತೆ ವಿಫಲ: ಸಹಾಯಕ ಕೃಷಿ ನಿದರ್ೇಶಕ ಅಮೃತೇಶ್ ಬಾಕಿ ಉಳಿದಂತಹ ರೈತರ ಯಾದಿಯನ್ನು ತಹಶೀಲ್ದಾರ ಹಾಗೂ ಸಿಪಿಐ ಸಮ್ಮುಖದಲ್ಲಿ ಒಪ್ಪಿಸಿದರಾದರೂ, ಪ್ರತಿಭಟನಾಕಾರರು ಮಾತ್ರ ಇದಕ್ಕೆ ಒಪ್ಪಲಿಲ್ಲ ನೀವು ನೀಡಿದ ಪ್ರತಿಯಲ್ಲಿ ಬಾಕಿ ಉಳಿದ ರೈತರಾರು..? ಅವರಿಗೆ ಬಿಡುಗಡೆಯಾದ ವಿಮೆ ಹಣವೆಷ್ಟು ಮತ್ತು ಯಾವ ಬ್ಯಾಂಕಿಗೆ ಪರಿಹಾರದ ಮೊತ್ತ ಜಮಾ ಆಗಿದ್ದರ ಕುರಿತು (ಯುಟಿಆರ್ ನಂಬರ್ ಸಹಿತ) ಎಲ್ಲ ವಿವರಗಳನ್ನು ನೀಡುವಂತೆ ಬಿಗಿಪಟ್ಟು ಹಿಡಿದರು.
ಶಮನವಾಗದ ಬಿಕ್ಕಟ್ಟು: ತಹಶೀಲ್ಧಾರ ಎಸ್.ಎ.ಪ್ರಸಾದ್, ಸಿಪಿಐ ಚಿದಾನಂದ, ಪಿಎಸ್ಐ ರಘು ಸೇರಿದಂತೆ ಕೃಷಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಬೆಳೆವಿಮೆ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಿಕೊಂಡರಾಯ್ತು ಒಂದೇ ದಿನದಲ್ಲಿ ಎಲ್ಲವೂ ಅಸಾಧ್ಯ ಮೂರು ವರ್ಷ ತಡೆದುಕೊಂಡಿದ್ದೀರಿ ಇನ್ನು ಮೂರ್ನಾಲ್ಕು ದಿನಗಳಲ್ಲಿ ಎಲ್ಲವನ್ನೂ ಪರಿಹರಿಸುವುದಾಗಿ ಮನವಿ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ, ಬೆಳೆವಿಮೆ ಹಣವನ್ನು ಪಡೆದುಕೊಂಡೇ ಇಲ್ಲಿಂದ ತೆರಳುವುದಾಗಿ ಘೋಷಿಸಿ ರೈತರು ಪ್ರತಿಭಟನೆಯನ್ನು ಎರಡನೇ ದಿನಕ್ಕೆ ಮುಂದುವರೆಸಿದರು.
ಬಸವರಾಜ ಸಂಕಣ್ಣನವರ, ಚಿಕ್ಕಪ್ಪ ಛತ್ರದ, ಡಾ.ಕೆ.ವಿ.ದೊಡ್ಡಗೌಡ್ರ, ಗಿರೀಶ್ ಮುದ್ದಿಶೆಟ್ಟರ, ಮೌನೇಶ ಬಡಿಗೇರ, ಶೇಖಪ್ಪ ಕಾಶಿ, ಮಲ್ಲೇಶಪ್ಪ ಡಂಬಳ, ಹನುಮಂತಪ್ಪ ಬಾಕರ್ಿ, ಮಂಜು ತೋಟದ, ಪರಮೇಶ ನಾಯಕ್, ಪೀಠದ ಸೇರಿದಂತೆ ಇನ್ನಿತರ ಮುಖಂಡರು ಪ್ರತಿಭಟನೆಯಲ್ಲಿ ಪಾಲೊಂಡಿದ್ದರು.
ರೈತರ ಮಕ್ಕಳಾಗಿದ್ದರೇ ನಮ್ಮ ನೋವಿಗೆ ಸ್ಪಂದಿಸಿ: ಬೆಳೆವಿಮೆ ರೈತನ ಹಕ್ಕು, ಆದರೆ ನಯವಾಗಿ ರೈತರಿಂದ ವಿಮೆ ಹಣ (ಪ್ರೀಮಿಯಂ) ತುಂಬಿಸಿಕೊಳ್ಳುವ ವಿಮೆ ಕಂಪನಿಗಳು ಪರಿಹಾರ ನೀಡುವಾಗ ಇಲ್ಲದ ಸಬೂಬುಗಳನ್ನು ನೀಡಿ ಸತಾಯಿಸುತ್ತಿವೆ, ಇಷ್ಟೆಲ್ಲಾ ನಡೆದರೂ ರಾಜಕಾರಣಿಗಳು ಮತ್ತು ಅಧಿಕಾರಿಗಳು ವಿಮೆ ಕಂಪನಿಗಳ ಏಜೆಂಟ್ರಂತೆ ವತರ್ಿಸುತ್ತಿರುವುದು ದುರಂತದ ವಿಷಯ ರೈತರ ಮಕ್ಕಳಾಗಿದ್ದರೇ ನಮ್ಮ ನೋವಿಗೆ ಸ್ಪಂದಿಸಿ.