ಕೋಲ್ಕತಾ, ಮೇ 28, ಪ್ರತಿಕೂಲ ವಾತಾವರಣದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಎರಡು ವಿಮಾನ ನಿಲ್ದಾಣಗಳಿಂದ ಗುರುವಾರ ವಾಣಿಜ್ಯ ವಿಮಾನಗಳ ಸೇವೆ ಆರಂಭಗೊಂಡಿದೆ.ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ಪುನಾರಂಭಗೊಂಡಿದೆ. ಇದರ ಜೊತೆಗೆ, ವಿಮಾನ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. ವಿಮಾನ ಪ್ರಯಾಣಿಕರಿಗಾಗಿಯೇ ವಿಶೇಷವಗಿ ವಿಮಾನದ ಹಳೆಯ ಟರ್ಮಿನಲ್ ನಲ್ಲಿ 400 ಹಾಸಿಗೆಯ ಕ್ವಾರಂಟೈನ್ ಕೇಂದ್ರವನ್ನು ಆರಂಭಿಸಲಾಗಿದೆ. ಇದು ಶುಕ್ರವಾರದಿಂದ ಕಾರ್ಯನಿರ್ವಹಿಸಲಿದೆ. ಪ್ರಯಾಣಿಕರು ತಮ್ಮ ಸ್ವಯಂ ಘೋಷಿತ ಆರೋಗ್ಯ ವಿವರ ನೀಡಬೇಕು. ವಿಮಾನದಿಂದ ಹೊರಬಂದ ನಂತರ ಆರೋಗ್ಯ ತಪಾಸಣೆಗೆ ಒಳಪಡಬೇಕು. ಸೋಂಕಿನ ಲಕ್ಷಣಗಳಿಲ್ಲದ ಜನರಿಗೆ 14 ದಿನಗಳ ಕಾಲ ಸ್ವಯಂ ನಿಗಾ ವಹಿಸುವಂತೆ ಸೂಚಿಸಿ ಕಳುಹಿಸಲಾಗುವುದು ಎಂಬಿತ್ಯಾದಿ ನಿಯಮಗಳನ್ನು ಮಾರ್ಗಸೂಚಿ ತಿಳಿಸಿದೆ.ಪಶ್ಚಿಮ ಬಂಗಾಳದಲ್ಲಿ ಇತ್ತೀಚಿಗೆ ಕಾಡಿದ ಅಂಫಾನ್ ಚಂಡಮಾರುತಕ್ಕೆ ಇಲ್ಲಿಯವರೆಗೆ 86 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಇಲ್ಲಿನ ಡಮ್ ಡಮ್ ವಿಮಾನ ನಿಲ್ದಾಣಕ್ಕೆ ಕೂಡ ಭಾರಿ ಹಾನಿಯಾಗಿತ್ತು.