ಲೋಕದರ್ಶನ ವರದಿ
ಬಾಗಲಕೋಟೆ 08: ಸರಕಾರ ಯೋಜನೆಗಳನ್ನು ರೈತರ ಮನೆ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ 6 ದಿನಗಳ ಕೃಷಿ ಅಭಿಯಾನದ ಸಂಚಾರಿ ವಾಹನಕ್ಕೆ ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನವನಗರದ ಸಹಾಯಕ ಕೃಷಿನಿರ್ದೇಶಕರ ಕಾರ್ಯಾಲಯದ ಆವರಣದಲ್ಲಿ ಕೃಷಿ ಅಭಿಯಾನದ ಜೊತೆಗೆ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ಹಚ್ಚಿ ನಂತರ ಮಾತನಾಡಿದ ಅವರು ತಾಲೂಕಿನ ರೈತ ಭಾಂದವರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವದಲ್ಲದೇ ತಮಗೆ ಒದಗಿ ಬಂದ ಸಮಸ್ಯೆಗಳನ್ನು ಅಧಿಕಾರಿಗಳ ಎದುರು ಹೇಳಿ ಪರಿಹಾರ ಪಡೆದುಕೊಳ್ಳಬೇಕು ಎಂದರು. ಕೃಷಿಯೇತರ ಚಟುವಟಿಕೆಗಳಾದ ಮೇಕೆ, ಕುರಿ, ಕೋಳಿ ಪಶುಸಾಗಾಣಿಕೆಯಂತಹ ಕಾರ್ಯಗಳನ್ನು ಮಾಡಿ ಪಶುಸಂಗೋಪನ ಇಲಾಖೆಯ ವೈದ್ಯರನ್ನು ಸಂಪಕರ್ಿಸಿ ಪ್ರಾಣಿಗಳ ಸುರಕ್ಷತೆ ಅನುಸರಿಸಬೇಕು. ರೈತರು ತಮ್ಮ ಜಮೀನುಗಳಲ್ಲಿ ಹಣ್ಣಿನ ಮರಗಳನ್ನು ನೆಟ್ಟು ಅದಕ್ಕಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪಕರ್ಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯದಾರ ಶೋಬಾ ಪಾಟೀಲ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ದಡ್ಡಿ, ಹನಮವ್ವ ಕರಿಹೊಳ್ಳಿ, ತಾ.ಪಂ ಅಧ್ಯಕ್ಷ ಚನ್ನನಗೌಡ ಪರನಗೌಡ, ತಾ.ಪಂ ಸದಸ್ಯ ಪರಶುರಾಮ ಛಬ್ಬಿ, ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಮುತ್ತನಗೌಡ ಗೌಡರ, ಉಪಾದ್ಯಕ್ಷ ದುರುಗಪ್ಪ ಸಿದ್ದಾಪೂರ, ತಾಲೂಕ ಮಟ್ಟದ ಅಧಿಕಾರಿಗಳಾದ ಡಾ.ಆರ್.ಎಸ್.ಪದರಾ, ಎಂ.ಬಿ.ಮೇಟಿ, ಜಂಬುನಾಥ ಸರಗನಾಚಾರಿ, ಪಾಂಡಪ್ಪ ಲಮಾಣಿ ಸೇರಿದಂತೆ ಇತರರು ಇದ್ದರು.