ಉತ್ತರ ಕನ್ನಡ ಜಿಲ್ಲಾ ಪಂಚಾಯತನಲ್ಲಿ ಕೋಲಾಹಲ: ಕಾಮಗಾರಿ ಮಾಡದೆ 36 ಲಕ್ಷ ರೂ.ಬಿಲ್ : ತನಿಖೆಯ ಭರವಸೆ ನೀಡಿದ ಸಿಇಒ ಪ್ರಿಯಾಂಗ
ಕಾರವಾರಜ.22 ; ಉತ್ತರ ಕನ್ನಡ ಜಿಲ್ಲಾ ಪಂಚಾಯತನಲ್ಲಿ ಸದಸ್ಯ ಅಲ್ಬರ್ಟ ಡಿಕೋಸ್ಟಾ ಸಣ್ಣ ನೀರಾವರಿ ಇಲಾಖೆಯ ಹಗಲು ದರೋಡೆಯ ಬಗ್ಗೆ ಧ್ವನಿ ಎತ್ತಿದರು. ಕಾಮಗಾರಿ ಮಾಡದೆ ಬಿಲ್ ಮಾಡಿರುವುದಕ್ಕೆ ಟ್ರಜೂರಿ( ಜಿಲ್ಲಾ ಖಾಜನೆ) ಯಿಂದ ಹಣ ಪಾವತಿಯ ಸಾಕ್ಷಿ ಸಹ ತಂದಿದ್ದರು.ಇದು ಶುಕ್ರವಾರ ಜಿಲ್ಲಾ ಪಂಚಾಯತನಲ್ಲಿ ನಡೆದ ಅಚ್ಚರಿಯ ಘಟನೆ.
ಅಲ್ಬರ್ಟ ಹೊನ್ನಾವ ತಾಲೂಕಿನ 7 ಕಾಮಗಾರಿಗಳನ್ನು ಮುಗಿಸದೇ ಬಿಲ್ ಮಾಡಲಾಗಿದೆ. ಒಂದು ಕಾಮಗಾರಿಗೆ 36 ಲಕ್ಷ ರೂ.ಬಿಲ್ ಹಾಕಲಾಗಿದೆ ಎಂದು ಅಪಾಸಿದದರು.ಇದಕ್ಕೆ ಜಿ.ಪಂ.ಆಡಳಿತ ವ್ಯವಸ್ಥೆ ಕಾರಣ.ತನಿಖೆ ಮಾಡಿದ, ಸಮತಿಯ ಶಿಫಾರಸ್ಸು ಮಾಡಿದ ಒಬ್ಬ ಅಧಿಕಾರಿಗೂ ಇಲ್ಲಿ ಶಿಕ್ಷೆಯಾಗಿಲ್ಲ. ಅಧ್ಯಕ್ಷರ ಸಹಕಾರ ಇಲ್ಲದೆ ಹೀಗೆ ನಡೆಯಲು ಸಾಧ್ಯವಿಲ್ಲ. ಕಾಮಗಾರಿ ಮಾಡದೆ ಹಣ ನುಂಗುವ ಹಂತಕ್ಕೆ ನಾವು ಬಂದುಮುಟ್ಟಿದ್ದೇವೆ ಎಂದು ಅಲ್ಬರ್ಟ ಆಕ್ರೋಶದಿಂದ ನುಡಿದರು.ಸಿಇಒ ತನಿಖೆ ಮಾಡಿ ಸಂಬಂಧಿಸಿದ ಅಧಿಕಾರಿಯ ಮನೆಗೆ ಕಳಿಸಿ ಎಂದರು.ಸದಸ್ಯ ಎಲ್ .ಟಿ.ಪಾಟೀಲ ಧ್ವನಿ ಗೂಡಿಸಿದರು . ಉತ್ತರ ಕನ್ನಡದಲ್ಲಿ ಈ ಪದ್ಧತಿ ಈಗ ವರ್ಷ ದಿಂದ ಶುರಯವಾಗಿದೆ. ಮುಂಡಗೋಡನಲ್ಲಿ 86 ಲಕ್ಷ ದೂಚಲಾಗಿದೆ ಎಂದರು..ಮುಂಡಗೋಡ ತಾ.ಪಂ.ಅಧ್ಯಕ್ಷರು ತಮ್ಮ ಅನುಭವ ಹೇಳಿ, ಅಧಿಕಾರಿಯ ಅಮಾನತ್ ಮಾಡಿ ಎಂದರು. ಅಧಿಕಾರಿ ಕೆಲಸ ಪ್ರಾರಂಭಿಸುವ ಸಮಜಾಯಿಷಿ ನೀಡಲು ಯತ್ನಿಸಿದರು.ಒಂದು ಕಾಮಗಾರಿ ಮುಗಿದಿದೆ.ಎರಡು ಪ್ರಾರಂಭವಾಗಿವೆ. ನಾಲ್ಕು ಇನ್ನೂ ಪ್ರಾರಂಭವಾಗಿಲ್ಲ ಎಂದರು. ಒಂದು 36 ಲಕ್ಷದ್ದು ಬಿಲ್ ಆಗಿದ್ದು ಹೇಗೆ ಎಂಬುದಕ್ಕೆ ಅಧಿಕಾರಿ ಎಂಜಿನಿಯರ್ ಉತ್ತರಿಸಲು ತಡವರಿಸಿದರು. ಇದನ್ನು ಗಮನಿಸಿದ ಸಿಇಒ ಪ್ರಿಯಾಂಗ ಸಮಗ್ರ ತನಿಖೆ ಮಾಡುವುದಾಗಿ ಹೇಳಿದರು.ಶಿಸ್ತು ಕ್ರಮ ಖಚಿತ ಎಂಬ ಭರವಸೆಯನ್ನು ಜಿಲ್ಲಾ ಪಂಚಾಯತ ಸಮಾನ್ಯಸಭೆಗೆ ನೀಡಿದರು.