ಜಗದಾಳ ವಸತಿ ನಿಲಯಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕರ ಭೇಟಿ

ಜಗದಾಳ ವಸತಿ ನಿಲಯಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕರ ಭೇಟಿ Zilla Panchayat Chief Executive Officer visits Jagadala hostel

ಲೋಕದರ್ಶನ ವರದಿ 

ರಬಕವಿ-ಬನಹಟ್ಟಿ  03: ಬಾಗಲಕೋಟೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಜಾನನ ಬಾಲೆ ತಾಲೂಕಿನ ಜಗದಾಳ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ. ಆರ್‌. ಅಂಬೇಡ್ಕರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.  

ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಹಾಗೂ ಮಕ್ಕಳ ಬೇಟಿಗೆ ಬಂದ ಪಾಲಕರೊಂದಿಗೆ ಚರ್ಚಿಸಿ ವಸತಿ ನಿಲಯ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್ ಎಸ್‌. ಎಲ್‌. ಸಿ ವಿದ್ಯಾರ್ಥಿಗಳು ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಅಂಕಗಳಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ತಿಳಿಸಿದರು.  ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿ ಮಧ್ಯಾಹ್ನದ ಊಟ ಸವಿದರು.  

ಈ ಸಂದರ್ಭದಲ್ಲಿ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ, ತೋಟಗಾರಿಕೆ ಅಧಿಕಾರಿ ಅನೀಲ ಮಾಚಕನೂರ, ಸಮಾಜ ಕಲ್ಯಾಣ ಅಧಿಕಾರಿಗಳಾದ ಜಗದೇವ ಪಾಸೋಡಿ, ಪಿಡಿಓ ಡಿ. ಕೆ. ಸಾವಳಗಿ, ತಾ. ಪಂ. ಸಹಾಯಕ ನಿರ್ದೇಶಕರಾದ ಬಸವರಾಜ ಮುನ್ನೊಳ್ಳಿ, ವಸತಿ ನಿಲಯದ ಮೇಲ್ವಿಚಾರಕರಾದ ಮಂಜುನಾಥ ಆಲಗೂರ ಉಪಸ್ಥಿತರಿದ್ದರು.