ಅಭಿವೃದ್ಧಿ ಶೂನ್ಯ, ಕೆಸರೆರಚಾಟವೆ ಹೆಚ್ಚು- ಛಲವಾದಿ ನಾರಾಯಣಸ್ವಾಮಿ ಆರೋಪ
Zero development, more mudslinging - alleges fraudster Narayanaswamy
ಕೊಪ್ಪಳ 16: ಇಡೀ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕೇವಲ ಕೆಸರೆರಚಾಟದಲ್ಲೇ ಸರ್ಕಾರ ಕಾಲ ಕಳೆಯುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದ್ದಾರೆ. ಶುಕ್ರವಾರ ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಹಳಷ್ಟು ಅಭಿವೃದ್ಧಿ ಆಗಬೇಕಿತ್ತು. ಕೇವಲ 5 ಗ್ಯಾರಂಟಿಗಳ ಹೆಸರಿನಲ್ಲೇ 5 ವರ್ಷ ಅಧಿಕಾರ ಮುಗಿಸಬಹುದು ಎಂಬ ಪರಿಸ್ಥಿತಿ ಇದೆ. ಯಾವುದನ್ನು ಕೇಳಿದರೂ ನೋಡುತ್ತೇವೆ; ಮಾಡುತ್ತೇವೆ ಎನ್ನುತ್ತಾರೆಯೇ ಹೊರತು ಮಾಡಿದ್ದಿಲ್ಲ. ಎಲ್ಲೇ ಹೋದರೂ ಸಾವಿರ ಕೋಟಿ, ಎರಡು ಸಾವಿರ ಕೋಟಿ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತೇವೆ; ಅಭಿವೃದ್ಧಿ ಪ್ರಾರಂಭವಾಗುತ್ತದೆ ಎನ್ನುತ್ತಾರಷ್ಟೇ ಎಂದು ಟೀಕಿಸಿದರು.
ಕಳೆದ ಎರಡೂವರೆ ವರ್ಷಗಳಲ್ಲಿ ಈ ಸರಕಾರ 4 ಬಾರಿ ಗುಲ್ಬರ್ಗಕ್ಕೆ ಹೋಗಿದೆ. ಸಚಿವಸಂಪುಟದ ವಿಶೇಷ ಸಭೆಯನ್ನೂ ಮಾಡಿದ್ದಾರೆ. ಒಂದು ಸಾರಿ 17 ಸಾವಿರ ಕೋಟಿಯ ಅಭಿವೃದ್ಧಿ ಕಾರ್ಯಕ್ಕೆ ಶಂಕುಸ್ಥಾಪನೆ ಎಂದು ಪ್ರಕಟಿಸಿದ್ದರು. ಮತ್ತೊಂದು ಸಾರಿ 6 ಸಾವಿರ ಕೋಟಿ ರೂ. ಬಿಡುಗಡೆ ಎಂದಿದ್ದರು. ಇನ್ನೊಂದು ಸಾರಿ 4,500 ಕೋಟಿ ಬಿಡುಗಡೆ ಎಂದರು. ಮೊನ್ನೆ ಹೋಗಿ 1700 ಕೋಟಿ ರೂ. ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಎಲ್ಲ ಸೇರಿ ಸುಮಾರು 24 ಸಾವಿರ ಕೋಟಿಗೂ ಮೀರಿದೆ. 24 ಸಾವಿರ ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ದೂರಿದರು. ಇದೊಂದು ರೀತಿಯ ಬೊಗಳೆ ಸರಕಾರ. ಜನರನ್ನು ದಾರಿ ತಪ್ಪಿಸುವುದು, ಏನೂ ಮಾಡದೇ ಚಪ್ಪಾಳೆ ಗಿಟ್ಟಿಸುವ ಕಾರ್ಯವನ್ನು ಈ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಅದರಿಂದಲೇ ಜನರು ಇವರನ್ನು ದಿನೇದಿನೇ ಮರೆತು ಹೋಗುವ ಕಾಲ ಬಂದಿದೆ ಎಂದು ನುಡಿದರು.ಇವರ ದರ್ ಹೆಚ್ಚಾಗಿದೆ. ಕ್ಷುಲ್ಲಕ ಕಾರಣಗಳಿಗೆ ಇವತ್ತು ಯಾವ ರೀತಿ ಈ ಸರಕಾರ ನಡೆದುಕೊಳ್ಳುತ್ತಿದೆ ಎಂಬುದನ್ನು ನೀವು ನೋಡಿದ್ದೀರಿ. ದಲಿತರ ಮೇಲೆ ಅತಿ ಹೆಚ್ಚು ಅತ್ಯಾಚಾರ ಆದ ಕಾಲ ಇದು. ಹಸುಳೆಗಳ ಮೇಲೆ ಅತ್ಯಾಚಾರ ಆಗಿ ಅವರನ್ನು ಕೊಲೆ ಮಾಡಿದ ಅನೇಕ ನಿದರ್ಶನಗಳು ಇವತ್ತು ಇವೆ ಎಂದು ಆರೋಪಿಸಿದರು. ಕೊಲೆಗಳು, ದರೋಡೆಗಳು ಆಗುತ್ತಿವೆ. ಈ ಕಾಲದಲ್ಲೂ ಬ್ಯಾಂಕ್ಗಳಿಗೆ ನುಗ್ಗಿ ದರೋಡೆ ನಡೆಯುತ್ತಿದೆ. ಎಲ್ಲಿ ನೋಡಿದರೂ ಕ್ಯಾಮೆರಾಗಳಿವೆ. ಮತ್ತೆ ಇದನ್ನು ಮಾಡುತ್ತಿರುವುದು ಯಾರು ಎಂದು ಪ್ರಶ್ನಿಸಿದರು. ದರೋಡೆ ಎಂಬುದು ಜಂಟಿ ಉದ್ಯಮವೇ? ಬೆಂಗಳೂರಿನಂಥ ಪ್ರದೇಶದಲ್ಲಿ ರಸ್ತೆಯಲ್ಲಿ ಹೋಗಬೇಕಾದರೆ, ಅಷ್ಟೂ ಟ್ರಾಫಿಕ್ ಇರುವಾಗ ವಾಹನದಲ್ಲಿ ಹಣ ತೆಗೆದುಕೊಂಡು ಹೋಗುವಾಗ 11 ಕೋಟಿ ರೂಪಾಯಿಯನ್ನು ಯಾರೋ ವಾಹನದಲ್ಲಿ ಬಂದು ದರೋಡೆ ಮಾಡಿದ್ದಾರೆ. ಪೊಲೀಸಿನವರೇನು ಕಡ್ಲೆಪುರಿ ತಿನ್ನುತ್ತಿದ್ದರೇ ಎಂದು ಪ್ರಶ್ನಿಸಿದರು. ತನಿಖೆ ಮಾಡಿ ಹಿಡಿದಾಗ ಯಾರೋ ಪೊಲೀಸಿನವರೇ ಮಾಡಿಸಿದ್ದು ಗೊತ್ತಾಗಿದೆ. ಈ ರೀತಿಯ ದರೋಡೆಗೆ ಪೊಲೀಸ್ ಇಲಾಖೆ, ಸರಕಾರ ಜಂಟಿ ಉದ್ಯಮ ಮಾಡುತ್ತಿವೆಯೇ ಎಂಬ ಅನುಮಾನ ನನ್ನದು ಎಂದು ತಿಳಿಸಿದರು.
ಬೆಳೆ ಹಾನಿ ಪರಿಹಾರದ ವರದಿ ಕೊಟ್ಟಿದ್ದು, ಪರಿಹಾರದ ಮೊತ್ತ ಬಂದಿಲ್ಲ ಎಂದು ತಹಸೀಲ್ದಾರ್ ತಿಳಿಸಿದ್ದಾಗಿ ಹೇಳಿದರು.ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ದಡೇಸುಗೂರ, ಮುಖಂಡರಾದ ಚಂದ್ರಶೇಖರ್ ಪಾಟೀಲ್, ನವೀನ್ ಗುಳಗಣ್ಣವರ, ಸಂಸದ ಸ್ಥಾನದ ಪರಾಜಿತ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಸೇರಿದಂತೆಪ್ರಮುಖರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 