ವಿವಿಧ ಕಾಮಗಾರಿಗಳ ಜಿ.ಪಂ. ಸಿ.ಇ.ಓ ರಿಷಿ ಆನಂದ ಪರೀಶೀಲನೆ

ವಿವಿಧ ಕಾಮಗಾರಿಗಳ ಜಿ.ಪಂ. ಸಿ.ಇ.ಓ ರಿಷಿ ಆನಂದ ಪರೀಶೀಲನೆ  Z.P. CEO Rishi Anand Verification various works

ಜಿಲ್ಲೆಯ ಬಸವನ ಬಾಗೇವಾಡಿ ಮತ್ತು ನಿಡಗುಂದಿ ತಾಲೂಕುಗಳ  

ವಿಜಯಪುರ 28: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಸೋಮವಾರ ಜಿಲ್ಲೆಯ ಬಸವನ ಬಾಗೇವಾಡಿ ಮತ್ತು ನಿಡಗುಂದಿ ತಾಲ್ಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ವಿವಿಧ ಕಾಮಗಾರಿಗಳ ಪರೀಶೀಲನೆ ನಡೆಸಿದರು. 

ಬಸವನ ಬಾಗೇವಾಡಿ  ತಾಲೂಕಿನ ಮಣ್ಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೂರ, ಮಣ್ಣೂರ ಹಾಗೂ ಹಂಗರಗಿ  ಹಾಗೂ ನಿಡಗುಂದಿ ತಾಲೂಕಿನ ಚಿಮ್ಮಲಗಿ ಎಲ್ ಟಿ, ಮರಿಮಟ್ಟಿ,  ಆಲಮಟ್ಟಿ, ಆಲಮಟ್ಟಿ ವಸ್ತಿ, ಬೇನಾಳ ಆರ್‌.ಸಿ, ಗುಡದಿನ್ನಿ, ಹುಣಶ್ಯಾಳ್ ಪಿ ಸಿ,  ಬೀರಲದಿನ್ನಿ ಹಾಗೂ ಗೊಳಸಂಗಿ ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳ ಸ್ಥಳ ವೀಕ್ಷಣೆ ಮಾಡಿದ ಅವರು, ಮನೆ ಮನೆಗಳಿಗೆ ಅಳವಡಿಸಲಾಗಿರುವ ನಳಗಳ ಸಂಪರ್ಕ ಬಗ್ಗೆ ಫಲಾನುಭವಿಗಳೊಂದಿಗೆ ಚರ್ಚೆ ಮಾಡಿದರು.  

ಮಣ್ಣೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗೂರ  ಗ್ರಾಮದಲ್ಲಿನ 422 ಈಊಖಿಅ ಗಳನ್ನು ಒದಗಿಸುವ  ಕಾಮಗಾರಿ ವೀಕ್ಷಿಸಿ ಮನೆಗಳಿಗೆ ಅಳವಡಿಸಿರುವ ನಳಗಳನ್ನು ಪರೀಕ್ಷಿಸಿ ನೀರಿನ ಗುಣಮಟ್ಟವನ್ನು ಪರೀಶೀಲಿಸಿದ ಅವರು, ಸಮರ​‍್ಕವಾಗಿ ನೀರು ಪೂರೈಕೆಯಾಗುತ್ತಿರುವ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.  

ಮಣ್ಣೂರ ಗ್ರಾಮದಲ್ಲಿ 430ಎಫ್ ಎಚ್ ಟಿ ಸಿ ಗಳನ್ನು ಒದಗಿಸುವ  ಗುರಿಯನ್ನು ಹೊಂದಿದ್ದು ಪ್ರಗತಿ ಹಂತದಲ್ಲಿರುವ ಕಾಮಗಾರಿ ವೀಕ್ಷಿಸಿ ಕಾರ್ಯಾತ್ಮಕ ನಳಗಳನ್ನು ಅಳವಡಿಸಲು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಅಭಿಯಂತರರಿಗೆ ಹಾಗೂ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಬಳಿಕ ಜೆಜೆಮ್ ಕಾಮಗಾರಿಯನ್ನು ಪರೀಶೀಲನೆ ಮಾಡಿದರು. 

ಮಣ್ಣೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಂಗರಗಿ ಗ್ರಾಮದಲ್ಲಿ  498 ಈಊಖಿಅ ಗುರಿ  ಎದುರು, ಅಳವಡಿಕೆಯಾಗಿರುವ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ಗ್ರಾಮದಲ್ಲಿನ ಮನೆಗೆ ಅಳವಡಿಸಿರುವ ನಳ ಸಂಪರ್ಕದ ಕುರಿತು ಸ್ಥಳೀಯ ಫಲಾನುಭವಿಗಳ ಜೊತೆ ಚರ್ಚೆ ಮಾಡಿ  ಸಮರ​‍್ಕ ನೀರು ಪೂರೈಕೆಯಾಗುತ್ತಿರುವ ಕುರಿತು ಮಾಹಿತಿ ಪಡೆದ ಅವರು, ನೀರನ್ನು ಪೋಲು ಮಾಡದೆ ವ್ಯವಸ್ಥಿತವಾಗಿ ಬಳಸಬೇಕು. ಪೋಲಾಗುತ್ತಿರುವ ನಲ್ಲಿಗಳಿಗೆ ತುರ್ತಾಗಿ ನಲ್ಲಿಗಳ ಜೋಡಣೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.  

“ಮಕ್ಕಳೊಂದಿಗೆ ಬಿಸಿಯೂಟ ಸವಿದ ಸಿಇಒ ರಿಷಿ ಆನಂದ” : ನಿಡಗುಂದಿ ತಾಲೂಕಿನ ವಂದಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಣಶ್ಯಾಳ ಪಿಸಿ ಗ್ರಾಮದ  ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ  ಭೇಟಿ ನೀಡಿ, ಮಧ್ಯಾಹ್ನದ ಬಿಸಿಯೂಟ ಗುಣಮಟ್ಟ ಪರೀಶೀಲಿಸಿ ಮಕ್ಕಳದೊಂದಿಗೆ  ಬಿಸಿಯೂಟ ಸವಿದರು.  

ಶಾಲೆಯಲ್ಲಿನ ಕಟ್ಟಡದ ಸ್ಥಿತಿ-ಗತಿ, ಪಾಠ ಬೋಧನೆ, ಸರ್ಕಾರದಿಂದ ಮಕ್ಕಳಿಗೆ ಒದಗಿಸುವ ಸಮವಸ್ತ್ರ, ಪುಸ್ತಕ, ಕ್ಷೀರಭಾಗ್ಯದಡಿ ಹಾಲು ವಿತರಣೆ ಮುಂತಾದ ಯೋಜನೆಗಳ ಅನುಷ್ಠಾನದ ಬಗ್ಗೆ ಶಾಲಾ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ಶಾಲೆಯ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾದಡಿ ಅನುಷ್ಠಾನಗೊಂಡ ಕಾಂಪೌಂಡ್ ನಿರ್ಮಾಣ, ಅಡುಗೆ ಕೋಣೆ ಹಾಗೂ ಹೈಟೆಕ್ ಶೌಚಾಲಯವನ್ನು ಪರೀಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ನಿಡಗುಂದಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೆಂಕಟೇಶ ವಂದಾಲ, ಬಸವನ ಬಾಗೇವಾಡಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ  ಪ್ರಕಾಶ ದೇಸಾಯಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ  ಕಾರ್ಯನಿರ್ವಾಹಕ ಅಭಿಯಂತರರಾದ  ಬಸವರಾಜ ಕುಂಬಾರ, ಸಹಾಯಕ ಅಭಿಯಂತರ ವಿ.ಬಿ.ಗೊಂಗಡಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಶ್ರೀನಿವಾಸ, ಪಿಡಿಒ ರವಿ ಗುಂಡಳ್ಳಿ, ಆಲಮಟ್ಟಿ ಗ್ರಾಮ ಪಂಚಾಯತಿ ಪಿಡಿಒ ಜಿ.ಬಿ.ಕಲ್ಯಾಣಿ, ವಂದಾಲ ಗ್ರಾಮ ಪಂಚಾಯತಿ ಪಿಡಿಒ ಮಲ್ಲಿಕಾರ್ಜುನ ಹಾವರಗಿ, ಬೇನಾಳ ಗ್ರಾಮ ಪಂಚಾಯತಿ ಪಿಡಿಒ ಎ.ಎ.ಕೀಜಿ, ಬೇನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ ವಂದಾಲ, ಮಣ್ಣೂರು ಗ್ರಾಪಂ ಪಿಡಿಒ  ಎಸ್ .ವೈ. ಕುಂಬಾರ ಹಾಗೂ ಇತರರು ಉಪಸ್ಥಿತರಿದ್ದರು.