ಮುಂಬೈ, ಸೆ 29 : ಇತ್ತೀಚಿಗಷ್ಟೆೆ
ಭಾರತ ತಂಡದಿಂದ ಕೈ ಬಿಡಲಾಗಿದ್ದ ಕಹಿ ಘಟನೆಗಳನ್ನು ಕೆದಕಿ ಸದ್ದಿಯಾಗಿದ್ದ ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು
ಕ್ಲೀನ್ ಶೇವ್ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಭಾರತದ ಟೆನಿಸ್ ಸ್ಟಾರ್ ಆಟಗಾರ್ತಿ ಸಾನಿಯಾ
ಮಿರ್ಜಾ ಅವರು ಯುವಿ ಕ್ಲೀನ್ ಶೇವ್ ಬಗ್ಗೆ ಕಾಮೆಂಟ್ ಮಾಡಿ ಸಿಕ್ಸರ್ ಸರದಾರನ ಕಾಲು ಎಳೆದಿದ್ದಾರೆ.
2011ರ ವಿಶ್ವಕಪ್ ಸರಣಿ ಪ್ರಶಸ್ತಿ ವಿಜೇತ ಯುವ ರಾಜ್ ಸಿಂಗ್ ಅವರು ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಕ್ಲೀನ್ ಶೇವ್ ಮಾಡಿಕೊಂಡಿರುವ ಫೋಟೊವೊಂದನ್ನು ಪೋಸ್ಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇದನ್ನು ಗಮನಿಸಿದ್ದ ಅಭಿಮಾನಿಗಳು ಮತ್ತೊಮ್ಮೆ ಗಡ್ಡ ಬೆಳೆಸುವಂತೆ ಯುವಿಗೆ ಒತ್ತಾಯ ಮಾಡಿದ್ದಾರೆ. ಇದಕ್ಕೆ ಸಾನಿಯಾ ಮಿರ್ಜಾ ಕೂಡ ತಾಳ ಹಾಕಿದ್ದಾರೆ.
‘ನ್ಯೂ ಲುಕ್ ಚಿಕ್ನೆ ಚಮೆಲಾ!! ಅಥವಾ ಮತ್ತೆ ಗಡ್ಡ ಬೆಳೆಸಬೇಕೇ ಎಂದು? ಎಂದು ಯುವಿ ಪೋಸ್ಟ್ ಮಾಡಿದ್ದಾರೆ. ತಾವು ಮಾತನಾಡಿದ
ಗಲ್ಲದ ಕೆಳಗೆ ಗಲ್ಲವನ್ನು ಮರೆಮಾಚಲು ಮೊಂಡುತನ ತೋರುತ್ತಿದ್ದೀರಾ ? ಮತ್ತೆ ಗಡ್ಡವನ್ನು ಬೆಳೆಸಿ
ಎಂದು ಸಾನಿಯಾ ಮಿರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚಿಗಷ್ಟೇ ಯುವರಾಜ್
ಸಿಂಗ್ ಆಜ್‌ತಕ್ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಕೊನೆಯ
ದಿನಗಳಲ್ಲಿ ನಡೆದಿದ್ದ ಕಹಿ ಘಟನೆಗಳನ್ನು ತೋಡಿಕೊಂಡಿದ್ದರು. 2017ರಲ್ಲಿ ಯೊ-ಯೊ ಟೆಸ್ಟ್ ಪಾಸ್ ಮಾಡಿದ್ದರೂ
ನನ್ನನ್ನು ಭಾರತ ತಂಡಕ್ಕೆೆ ಆಯ್ಕೆ ಮಾಡಿರಲಿಲ್ಲ ಸೇರಿದಂತೆ
ಹಲವು ಕಹಿ ಘಟನೆಗಳನ್ನು ಕೆದಕುವ ಮೂಲಕ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.