23 ವರ್ಷದ ಎಂಜಿನಿಯರ್ ಪದವೀಧರೆ ಯವತಿ ಗೆಲುವು
ಕಾರವಾರ : ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಮುಡಗೇರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಅದೃಷ್ಟ ಪರೀಕ್ಷೆಗಿಳಿದಿದ್ದ ಯುವತಿ ಈಗ ಪಂಚಾಯತ್ ಗೆ ಗೆದ್ದು ಬಂದ ಅತೀ ಕಿರಿಯ ವಯಸ್ಸಿನ ಯುವತಿ. ೨೩ ವರ್ಷದ ಯುವತಿ ಈಗ ಪಂಚಾಯತ ಆಡಳಿತದ ಅನುಭವ ಪಡೆಯಲಿದ್ದಾರೆ.
ಕಾರವಾರ ತಾಲೂಕಿನ ಮುಡಗೇರಿ ಗ್ರಾಮ ಪಂಚಾಯತ್‌ನ ವಾರ್ಡ್‌ವೊಂದರಲ್ಲಿ ಸ್ಪರ್ಧಿಸಿದ್ದ ಯುವತಿ ವೆಲಿಂಡಾ ಡಿಸೋಜಾ ಗೆಲುವಿನ ನಗೆ ಬೀರಿದ್ದಾರೆ.
ಗೆಲುವಿನ ನಗೆ ಬೀರಿದ ಎಂಜಿನಿಯರಿಂಗ್ ಪದವೀಧರೆ
ಇವರು ಕಾರವಾರದ ನೆವೆಲ್ ಬೇಸ್ನ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೆಲಿಂಡಾ ಡಿಸೋಜಾ 268 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ ಎದುರಾಳಿಯ ಎದುರು 12 ಮತ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಇವರು ಅತಿ ಕಿರಿಯ ವಯಸ್ಸಿನಲ್ಲಿಯೇ ಗ್ರಾಮ ಪಂಚಾಯತ್‌ಗೆ ಸ್ಪರ್ಧಿಸಿದ್ದು, ಮೊದಲ ಯತ್ನದಲ್ಲೇ ಗೆಲುವು ಸಾಧಿಸಿದ್ದಾರೆ. ವೆಲಿಂಡಾ ಎಂಜಿನಿಯರಿಂಗ್ ಪದವೀಧರೆಯಾಗಿದ್ದಾರೆ.