ಹುಬ್ಬಳ್ಳಿಯ ಮರ್ಯಾದಾ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಯುವ ಕರ್ನಾಟಕ ಭೀಮ್ ಸೇನೆ ಸಂಘಟನೆಯಿಂದ ಆಗ್ರಹ
Yuva Karnataka Bhim Army demands strict punishment for Hubballi honor killing accused
ಗದಗ : ಇತ್ತೀಚಿಗೆ ಹುಬ್ಬಳ್ಳಿಯ ತಾಲೂಕಿನ ಇನಾಮ ವೀರಾಪುರ ಗ್ರಾಮದಲ್ಲಿ ತುಂಬು ಗರ್ಭಿಣಿ ಮಾನ್ಯ ಅವರನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಙ ಶಿಕ್ಷೆ ನೀಡಬೇಕೆಂದು ಕರ್ನಾಟಕ ಭೀಮ್ ಸೇನೆ ಸಂಘಟನೆಯಿಂದ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ರಾಮು ಬಾಗಲಕೋಟಿ ಅವರು ಮಾತನಾಡಿ, ಇನಾಮ ವೀರಾಪೂರ ಗ್ರಾಮಾದಲ್ಲಿ ಮಾನ್ಯ ಎಂಬ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವತಿ, ಅದೇ ಗ್ರಾಮದ ವಿವೇಕಾನಂದ. ದೊಡ್ಡಮನಿ ಎಂಬ ಮಾದಿಗ ಸಮಾಜಕ್ಕೆ ಸೇರಿದ ಯುವಕನ ಜೊತೆ ಪ್ರೇಮ ವಿವಾಹವಾಗಿದ್ದರು.
ಮೂರು ವರ್ಷದಿಂದ ಒಬ್ಬರಿಗೊಬ್ಬರು ಪ್ರೀತಿಸಿ, ಕಾನೂನು ಪ್ರಕಾರ ಉಪ-ನೋಂದಣಿ ಇಲಾಖೆಯಲ್ಲಿ ಮದುವೆ ಆಗಿ ಜೀವನ ನಡೆಸುತ್ತಿದ್ದರು. ಪ್ರಾಣ ಭಯದಿಂದ ಹಾವೇರಿಯಲ್ಲಿ ಸತಿ-ಪತಿಗಳು ತಮ್ಮ ಜೀವನ ನಡೆಸುತ್ತಿದ್ದರು. ಮಾನ್ಯ ಎಂಬ ಯುವತಿಯು ಏಳು ತಿಂಗಳ ತುಂಬು ಗರ್ಭಿಣಿಯಾಗಿದ್ದರಿಂದ ಹುಬ್ಬಳ್ಳಿಯ ಆಸ್ಪತ್ರೆಗೆಂದು ಬಂದಾಗ ಸುದ್ದಿ ತಿಳಿದ ಮಾನ್ಯಳ ಕುಟುಂಬಸ್ಥರು ಹುಡುಗನ ಮನೆಗೆ ನುಗ್ಗಿ ಕೊಡಲಿ, ಬಡಿಗೆ, ಮಚ್ಚಿನಿಂದ ಕೊಚ್ಚಿ ಮಾನ್ಯಳ ಎಂಬ ಯುವತಿಗೆ ಪ್ರಕಾಶಗೌಡ ಪಾಟೀಲ ಮತ್ತು ವೀರನಗೌಡ ಪಾಟೀಲ, ಅರುಣಗೌಡ ಪಾಟೀಲ ಹಾಗೂ ಅನೇಕರು ಗುಂಪು ಕಟ್ಟಿಕೊಂಡು ಬಂದು ಸಿಕ್ಕವರ ಮೇಲೆ ಕಬ್ಬಿಣದ ಸಲಾಕೆ ಮಚ್ಚಿನಿಂದ ಕೊಚ್ಚಿ, ಕೊಲೆ ಮಾಡಿದ್ದು ಅಮಾನವಿಯ ಘಟನೆ ನಡೆದಿದೆ.
ಆ ಹುಡುಗನ ತಂದೆ-ತಾಯಿಗೆ ಇನ್ನೂ ಅನೇಕರಿಗೆ ಜೀವ ಹೋಗುವ ರೀತಿ ಶಸ್ತ್ರಾಸ್ತ್ರ ಬಳಸಿ ಮಾರಣಾಂತಿಕ ಹಲ್ಲೆ ಮಾಡಿದ್ದು ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಾಗಿದೆ. ಈಗಾಗಲೇ ಇದರ ಬಗ್ಗೆ ಹುಬ್ಬಳ್ಳಿಯ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಅಟ್ರಾಸಿಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧನವಾಗಿರು ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ. ನೊಂದ ಕುಟುಂಬಸ್ಥರಾದ ವಿವೇಕಾನಂದ ದೊಡ್ಡಮನಿಯವರಿಗೆ ಸರ್ಕಾರ ಪೊಲೀಸ ರಕ್ಷಣೆ ನೀಡಬೇಕು ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಅಲ್ಲದೆ, ಕರ್ನಾಟಕ ರಾಜ್ಯದಲ್ಲಿ ಜಾತಿ ವಿಚಾರಕ್ಕೆ ತಂದೆ ತನ್ನ ಮಗಳನ್ನ ಕೊಚ್ಚಿ ಕೊಲೆ ಮಾಡಿದ್ದು ನೋಡಿ ಇನ್ನೂ, ಅಸ್ಪೃಶ್ಯತೆ, ಅಸಮಾನತೆ, ಕೆಳ ಜಾತಿ, ಮೇಲ್ವಾತಿ ಅಂತ ಬೇದ ಭಾವವಿರುವುದು ಮನುಷ್ಯನಲ್ಲಿದಿದ್ದು ಈ ಘಟನೆಗೆ ಮುಖ್ಯ ಕಾರಣವಾಗಿದೆ. ಗೋಮುಖ ವ್ಯಾಘ್ರ ಮಾನ್ಯಳ ತಂದೆಯನ್ನು ಹಾಗೂ ಸಹಚರರಿಗೆ ಗಲ್ಲುಶಿಕ್ಷೆ ನೀಡಬೇಕೆಂದು ರಾಮು ಬಾಗಲಕೋಟಿ ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಯುವ ಕರ್ನಾಟಕ ಭೀಮ್ ಸೇನೆ ಸಂಘಟನೆಯ ಉಪಾಧ್ಯಕ್ಷ ಖಾಜಾಸಾಬ ಗಬ್ಬೂರ, ತಾಲ್ಲೂಕಾದ್ಯಕ್ಷ ಶಬ್ಬಿರ ತಹಶೀಲ್ದಾರ, ಸಾಧಿಕ ಧಾರವಾಡ, ಇರ್ಫಾನ್ ಶಿರಹಟ್ಟಿ, ಜಭಿವುಲ್ಲಾ ಬೋದ್ಲೆಖಾನ, ಇದ್ರೀಸ್ ಮುಲ್ಲಾ, ಖಾದರ ನವಲಗುಂದ, ಶಾಬುದ್ದಿನ ಧಾರವಾಡ, ವೆಂಕಪ್ಪ ತಾಳದವರು, ರಪೀಕ ಕರೇಕಾಯಿ, ಯಾಕೂಬಸಾಬ್ ಅಂತೂರ, ಅಬ್ದುಲ್‌ರಶೀದ ನಾಗರದಿನ್ನಿ, ನಜೀರ ಬಳ್ಳಾರಿ, ಮುಸ್ತಾಕ ಹಣಗಿ, ಪಯಾಜ್ ಕಬಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 