ಕನ್ನಡದ ಅಭಿಮಾನ ಬೆಳೆಸಲು ಯುವಕರು ಮುಂದಾಗಬೇಕು: ಡಾ. ತಿಪ್ಪೇರುದ್ರ ಸಂಡೂರು

ಕನ್ನಡದ ಅಭಿಮಾನ ಬೆಳೆಸಲು ಯುವಕರು ಮುಂದಾಗಬೇಕು: ಡಾ. ತಿಪ್ಪೇರುದ್ರ ಸಂಡೂರು Youth should take the initiative to cultivate respect for Kannada: Dr. Tipperudra Sandur

ಕುರುಗೋಡು 07:  ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ, ಕನ್ನಡದ ಕಂಪನ್ನು ಮನೆ ಮನೆಗಳಿಗೆ ಪಸರಿಸುವ ಮಹತ್ವದ ಜವಾಬ್ದಾರಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊತ್ತಿದೆ ಎಂದು ಸಹಾಯಕ ಪ್ರಾಧ್ಯಾಪಕ ಡಾ. ತಿಪ್ಪೇರುದ್ರ ಸಂಡೂರು ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.ಯುವಕರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯುವ ಮೂಲಕ ಕನ್ನಡದ ಅಭಿಮಾನ ಬೆಳೆಸಿಕೊಳ್ಳಬೇಕು. ಸಾಹಿತ್ಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕನ್ನಡದ ಕವಿಗಳು, ಕೃತಿಗಳು ಹಾಗೂ ವಿಚಾರಧಾರೆಗಳನ್ನು ಅರಿತುಕೊಳ್ಳಬೇಕು. ಕನ್ನಡವು ಕೇವಲ ಮೂರು ಅಕ್ಷರಗಳ ಭಾಷೆಯಲ್ಲ, ಅದು ಮುಕ್ಕೋಟಿ ದೇವತೆಗಳ ಮನದ ಭಾವನೆ ಎಂದು ಬಣ್ಣಿಸಿದರು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಶಾಂತಲಾ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಮಸೂತಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಟಿ. ಶೇಖಣ್ಣ ಮಾತನಾಡಿದರು.ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಿಕ್ಷಕ ಎನ್‌. ಬಸವರಾಜ ಹಾಗೂ ಸಿಆರ​‍್ಿ ಹೆಚ್‌. ಜಡೇಶ್ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಸಂಶೋಧಕ ಕೆ. ವೀರಭದ್ರಗೌಡ, ಚಿತ್ರಕಲಾ ಶಿಕ್ಷಕ ಮಣ್ಣೂರು ಬಸವರಾಜ, ವಿ. ಈರೇಶಪ್ಪ, ಉದಯಕುಮಾರ, ಕಸಾಪ ಸದಸ್ಯರು, ಕನ್ನಡಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಚಿತ್ರ: ಕುರುಗೋಡು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆಯನ್ನು ಪ್ರಾಂಶುಪಾಲೆ ಡಾ. ಶಾಂತಲಾ ಉದ್ಘಾಟಿಸಿದರು.