ಆಧುನಿಕ ರಂಗ ಪರಂಪರೆಗೆ ವೇದಿಕೆಯನ್ನು ಕಲ್ಪಿಸಿಕೊಟ್ಟವರು ಎಂಪಿ ಪ್ರಕಾಶ್
MP Prakash was the one who provided the platform for the modern theatre tradition
ಲೋಕದರ್ಶನ ವರದಿ
ಹೂವಿನಹಡಗಲಿ 7: ಆಧುನಿಕ ರಂಗ ಪರಂಪರೆಗೆ ವೇದಿಕೆಯನ್ನು ಕಲ್ಪಿಸಿಕೊಟ್ಟವರು ದಿ. ಎಂ.ಪಿ. ಪ್ರಕಾಶ್ ಎಂದು ಕೃಷ್ಣದೇವರಾಯ ವಿಜಯನಗರ ವಿಶ್ವವಿದ್ಯಾಲಯದ ಕಲೆ ನಾಟಕ ವಿಭಾಗದ ಪ್ರಾಧ್ಯಾಪಕ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಹೇಳಿದರು.ರಂಗಭಾರತಿ ಆಯೋಜಿಸಿರುವ ಬೇಸಿಗೆ ಚಿಣ್ಣರ ಮೇಳ 2026್ಷಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಇಂದು ಸಾಂಸ್ಕೃತಿಕ ಕ್ಷೇತ್ರ ಬಡವಾಗುತ್ತಿದೆ ಮಕ್ಕಳಿಗೆ ಸೂಕ್ಷ್ಮ ತೆಯನ್ನು ಕಲಿಸಬೇಕಾಗಿದೆ, ಮಕ್ಕಳು ಬೀಳದಿದ್ದರೆ ಎದ್ದು ನಿಲ್ಲಲು ಸಾಧ್ಯವಿಲ್ಲ ಎಂದರು. ನಿರಂತರ ಕಲಿಕೆಯ ಮೂಲಕ ರಂಗಭೂಮಿಯನ್ನು ಮಕ್ಕಳಿಗೆ ಕಲಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ವಿಶ್ರಾಂತ ಪ್ರಾಚಾರ್ಯ ಪ್ರೊ.ಶಾಂತಮೂರ್ತಿ.ಬಿ.ಕುಲಕರ್ಣಿ ಅಧ್ಯಕ್ಷತೆವಹಿಸಿ ಮಾತನಾಡಿ ಕಲಿಕೆಗೆ ಅಂತ್ಯವಿಲ್ಲ ನಾಟಕ, ಸಂಗೀತ, ನೃತ್ಯ, ಸಾಂಸ್ಕೃತಿಕತೆ ಮನುಷ್ಯನ ಜೀವನಕ್ಕೆ ಬಹಳ ಅವಶ್ಯಕ ಎಂದರು.ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ.ಸುಮಾ ವಿಜಯ್ ಮಾತನಾಡಿ ಮಕ್ಕಳಲ್ಲಿ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ, ಮಕ್ಕಳನ್ನು ಅತಿಯಾಗಿ ಮುದ್ದು ಮಾಡಬೇಡಿ ಶಿಸ್ತು ಕಲಿಸುವ ಕಡೆ ಗಮನ ಕೊಡಿ ಎಂದರು. ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಪಿ. ಎಂ..ಶಿವಪ್ರಕಾಶ್ ಮಾತನಾಡಿ ರಂಗಭಾರತಿಯು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಾಜ್ಯ ರಾಷ್ಟ್ರಮಟ್ಟದ ಕಲಾವಿದರನ್ನ, ಸಾಧಕರನ್ನ, ಶ್ರೇಷ್ಠ ವ್ಯಕ್ತಿಗಳನ್ನ ಹೂವಿನಹಡಗಲಿಗೆ ಕರೆತಂದು ಪರಿಚಯಿಸಿದ ಕೀರ್ತಿ ಪ್ರಕಾಶರಿಗೆ ಸಲ್ಲುತ್ತದೆ ಎಂದರು.
ವಕೀಲ ಅಟವಾಳಗಿ ಕೊಟ್ರೇಶ್, ರಾಘವೇಂದ್ರ ರಾಯ್ಕರ್ ಇದ್ದರು. ಅನುಷಾ ಪ್ರಾರ್ಥನೆ ಹಾಡಿದರು. ಪ್ರಭು ಸೊಪ್ಪಿನ್ ಸ್ವಾಗತಿಸಿದರು. ಶ್ರೀಮತಿ ಶ್ರೀಲತಾ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರ್ಪ ವಂದಿಸಿದರು.ಪಂಚತಂತ್ರ ಕಥೆ ಆಧಾರಿತ "ಅರಾವಳಿ" ಹಾಗೂ "ಹಿಡಿಂಬಾಸುತ" ದಾನಪ್ಪ ತಳಗೇರಿ, ಆಸಿಫ್ ಹಡಗಲಿ ನಿರ್ದೇಶನದಲ್ಲಿ ಚಿಣ್ಣರು ನಾಟಕ ಪ್ರದರ್ಶಿಸುವರು.ಎಂ.ಪಿ.ಸುಮಾ ವಿಜಯ್ ನೃತ್ಯ ನಿರ್ದೇಶನದಲ್ಲಿ ವೈವಿಧ್ಯಮಯ ನೃತ್ಯ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಚಿಣ್ಣರ ಮೇಳದ ಶಿಬಿರಾರ್ಥಿಗಳಾದ ಮಕ್ಕಳು ಪ್ರದರ್ಶಿಸಿದ ನೃತ್ಯಗಳು ಜನಮನ ಸೆಳೆದವು.
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ, 