ವಿದ್ಯುತ್ ಅವಘಡದಿಂದ ನಮ್ಮ ನಿಮ್ಮಲ್ಲರ ಸುರಕ್ಷತೆಗೆ ಮೊದಲ ಆದ್ಯತೆ: ಮಂಜುನಾಥ ಕರೆ
Your safety is our top priority due to short circuit: Call Manjunath
ಗಂಗಾವತಿ: ಗುಲಬರ್ಗಾ ವಿದ್ಯುತ್ ಚ್ಚಕ್ತಿ ಸರಬರಾಜು ಕಂಪನಿ ನಿಯಮಿತ ಹಾಗೂ ಕಾರ್ಯ ಮತ್ತು ಪಾಲನ ವಿಭಾಗ ಗಂಗಾವತಿ ಸಹಯೋಗದಲ್ಲಿ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಜೆಸ್ಕಾಂ ಸಿಬ್ಬಂದಿಗಳಿಗೆ ಹೆಲ್ಮೆಟ್ ವಿತರಣೆ ಮಾಡಲಾಯಿತು.
ನಂತರ ಮಾತನಾಡಿದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅಧಿಕಾರಿ ಮಂಜುನಾಥ ನಮ್ಮ ಜೆಸ್ಕಾಂ ಸಿಬ್ಬಂದಿಗಳು ಕೆಲಸ ನಿರ್ವಹಿಸುವಾಗ ಸುರಕ್ಷತಾ ಸಾಧನಗಳಾದ ಹೆಲೈಟ್, ಲೈನ್ ಟೆಸ್ಟರ್, ಅರ್ಥಿಂಗ್ ರಾಡ್, ಇತ್ಯಾದಿಗಳನ್ನು ಬಳಸುವಾಗ ಹಾಗೂ ನೀವು ಸಹ ಪವರ್ ಮ್ಯಾನ್ಗಳಿಗೂ ಬಳಸುವಂತೆ ಉತ್ತೇಜಿಸಿ ನಿಮಗಾಗುವ ಅಪಘಾತವನ್ನು ತಪ್ಪಿಸಿಕೊಳ್ಳಲು ನಿಮ್ಮ ಕುಟುಂಬವನ್ನು ಮತ್ತು ಕಂಪನಿಯನ್ನು ಅಪಘಾತ ರಹಿತವಾಗಿಸುವಲ್ಲಿ ಸರ್ವ ಪ್ರಯತ್ನವನ್ನು ಮಾಡುತ್ತೀರಿಸೂಕ್ತ ಮಾರ್ಗಯಿಲ್ಲದೆ ಯಾವುದೇ ಕೆಲಸಗಳನ್ನು ನಿರ್ವಹಿಸುವುದಿಲ್ಲ ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳನ್ನು ಸೂಕ್ತ ಸುರಕ್ಷತಾ ವಲಯವನ್ನಾಗಿ ನಿರ್ಮಿಸಿಕೊಂಡು ನಿಗಮದ ಕೆಲಸ-ಕಾರ್ಯಗಳನ್ನು ನಿರ್ವಹಿಸುತ್ತೇವೆ ಹಾಗೂ ಗ್ರಾಹಕರಿಗೆ ಅಡಚಣೆ ರಹಿತ ಗುಣಮಟ್ಟದ ವಿದ್ಯುಚ್ಛಕ್ತಿಯನ್ನು ಸರಬರಾಜು ಮಾಡುತ್ತೇವೆ ನಾವು ನೀವು ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಕೆಲಸವನ್ನು ಮಾಡಿಸುತ್ತಿದ್ದೇವೆ ಎಂದು ಹೇಳಿದರು,ನಂತರ ಜೆಸ್ಕಾಂ ಸ್ಥಳೀಯ ಸಮಿತಿ ಅಧ್ಯಕ್ಷ ಅಬ್ದುಲ್ ರಫೀಕ್ ಮಾತನಾಡಿ ಜೆಸ್ಕಾಂ ಇಲಾಖೆ ಸುರಕ್ಷತೆ ವಲಯಕ್ಕಾಗಿ ಕಟ್ಟನಟ್ಟಿನ ಕ್ರಮಗಳನ್ನು ಕೈಗೊಂಡಿದೆ ನಾವು ಸಹ ಇಲಾಖೆಯ ಅಡಿಯಲ್ಲಿ ಮತ್ತುಅಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ತಮವಾದ ಕೆಲಸವನ್ನು ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಭಿಯಂತರರು ರಿಯಾಜ್ ಅಹ್ಮದ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಎಸ್. ಡಿ.ಹಿರೇಮನಿ, ಖಾಜ ಮೋಹಿನುದ್ದಿನ್, ಲೆಕ್ಕಾಧಿಕಾರಿ ರಫೀಕ್ ಅಹ್ಮದ್,ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ನಂದಕಿಶೋರ್, ಕಾರ್ಯದರ್ಶಿ ಬಸವರಾಜ, ಹಾಗೂ ಎಲ್ಲಾ ಶಾಖಾಧಿಕಾರಿಗಳು ಮತ್ತು ಪವರ್ ಮ್ಯಾನ್ ಗಳು ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 