ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕುರಿತು ಯುವ ಜನತೆ ಅರಿತುಕೊಳ್ಳಿ: ಈರಣ್ಣಾ ಕಡಾಡಿ

ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕುರಿತು ಯುವ ಜನತೆ ಅರಿತುಕೊಳ್ಳಿ: ಈರಣ್ಣಾ ಕಡಾಡಿ  Young people should learn about the history of the Indian freedom struggle: Iranna Kadadi

ಯರಗಟ್ಟಿ 14: ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ವ್ಯಕ್ತಿಗಳ ಚರಿತ್ರೆಗಳ ಕುರಿತು ಯುವ ಜನತೆ ಅರಿತುಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣಾ ಕಡಾಡಿ ಹೇಳಿದರು. ಪಟ್ಟಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಬಿಜೆಪಿ ಮಂಡಳ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ತಿರಂಗ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ತ್ಯಾಗ-ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಹೀಗಾಗಿ ಇಂಥ ಸಂದರ್ಭದಲ್ಲಿ ಹುತಾತ್ಮರನ್ನು ಸ್ಮರಿಸುವುದು ಪ್ರತಿಯೊಬ್ಬರ ಭಾರತೀಯನ ಕರ್ತವ್ಯ ಎಂದರು.ಮಾಜಿ ಜಿ. ಪಂ. ಅಜೀತಕುಮಾರ ದೇಸಾಯಿ ಮಾತನಾಡಿ, ದೇಶಾದ್ಯಂತ ಬಿಜೆಪಿ ರಾಷ್ಟ್ರೀಯ ವಿಚಾರಧಾರೆಯನ್ನು ತುಂಬುವ ಮಾಡಿಕೊಂಡು ಬರುತ್ತಿದೆ. ನಮ್ಮ ದೇಶ, ನಮ್ಮ ದೇಶದ ಧ್ವಜಕ್ಕೆ ಗೌರವ ಸೂಚಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳಬೇಕು. ಸ್ವಾತಂತ್ಯ ಹೋರಾಟದಲ್ಲಿ ಭಾಗವಹಿಸಿ ಬಲಿದಾನಗೈದ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳಬೇಕು. ದೇಶ ಮೊದಲು ಎನ್ನುವ ಸಂಕಲ್ಪವನ್ನು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಬಿಜೆಪಿ ಮಂಡಳ ಅಧ್ಯಕ್ಷ ಈರಣ್ಣಾ ಚಂದರಗಿ,  ಪಂಚನಗೌಡ ದ್ಯಾಮನಗೌಡರ, ಶ್ರೇಯಸ ಮಾಮನಿ, ಜಗದೀಶ ಕೌಜಗೇರಿ, ವೆಂಕಟೇಶ ದೇವರಡ್ಡಿ, ಚಂದ್ರಶೇಖರ ಅಳಗೋಡಿ, ಮಹಾಂತೇಶ ಗೋಡಿ, ಜೆ.ರತ್ನಾಕರ ಶೆಟ್ಟಿ, ಗುರು ವಾಲಿ, ಮಲ್ಲೇಶ ಸೂಳೇಬಾವಿ ಸದಾನಂದ ಪಾಟೀಲ, ಚೇತನ ಜಕಾತಿ, ಯುವ ಮೋರ್ಚಾ ಪದಾಧಿಕಾರಿಗಳು ಮಹಾದೇವ ಮುರಗೋಡ ರಾಜು ಸಾಲಿಮಠ, ಕೃಷ್ಣಮೂರ್ತಿ ತೊರಗಲ್ಲ, ಆನಂದ ಬಾಗೋಡಿ, ಹಾಗೂ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರುಮತ್ತಿತರರಿದ್ದರು.ಸಂಗೋಳ್ಳಿ ರಾಯಣ್ಣ ವೃತ್ತದಿಂದ ಆರಂಭಗೊಂಡ ತಿರಂಗ ಯಾತ್ರೆ ಮಹಾತ್ಮ ಗಾಂಧಿ, ಬಾಗವಾ ವೃತ್ತದ ಒಂಟಿ ಗಲ್ಲಿ, ಅಗಸರ ಅಗಸರ ಓಣಿ, ಶಿವಾಜಿ ವೃತ್ತ, ಟೀಲಕ್ ಚೌಕ್ ಮಾರ್ಗವಾಗಿ ಸಾಗಿ ಬಂತು. ನೂರಾರು ಬಿಜೆಪಿ ಕಾರ್ಯಕರ್ತರು ತಿರಂಗ ಹಿಡಿದು ಜಯಘೋಷ ಹಾಕಿದರು.