ಯುವಕ, ಯುವತಿಯರು ಕ್ರೀಡೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಿ :ಮಹಾಂತೇಶ ದೊಡ್ಡಗೌಡರ
Young men and women should participate more in sports: Mahantesh Dodda Gowda
ನೇಸರಗಿ 10 : ಮೊದಲು ಗ್ರಾಮೀಣ ಮಟ್ಟದಲ್ಲಿ, ರಾಜ್ಯ, ದೇಶಿಯ ಮಟ್ಟದ, ಅಂತಾರಾಷ್ಟ್ರಿಯ ಮಟ್ಟದಲ್ಲಿ ಯುವಕ, ಯುವತಿಯರು ಅನೇಕ ಕ್ರೀಡೆಗಳಲ್ಲಿ ಪಾಲ್ಗೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು. ಅವರ ಇಲ್ಲಿಗೆ ಸಮೀಪದ ಮದನಬಾವಿಯ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಮಹಾಂತೇಶ ದೊಡ್ಡಗೌಡರ ಅಭಿಮಾನಿಗಳು ಆಯೋಜನೆ ಮಾಡಿದ್ದ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ವ್ಹಾಲಿಬಾಲ್ ಪಂದ್ಯಾವಳಿ ಉದ್ಘಾಟನೆ ನೆರವೇರಿಸಿ ಮಾತನಾಡಿ ಜಾತ್ರಾ ಸಮಯದಲ್ಲಿ ಇಂತಹ ಪಂದ್ಯಾವಳಿಗಳನ್ನು ಮದನಬಾವಿ ಗ್ರಾಮದ ಯುವಕರು ಆಯೋಜನೆ ಮಾಡುತ್ತಿರುವದು ಹೆಮ್ಮೆಯ ವಿಷಯ ವಿಷಯ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಿವಪ್ಪ ಗುಜನಾಳ, ಯಲ್ಲನಗೌಡ ದೊಡ್ಡಗೌಡರ, ಅಜ್ಜಪ್ಪ ಹಮ್ಮಿನಿ, ಈರನಗೌಡ ದೊಡ್ಡಗೌಡರ, ಚನಗೌಡ ಹಾದಿಮನಿ, ಬಸವರಾಜ ಬಂದ್ರಿ, ಸೋಮಪ್ಪ ಕೊಳದೂರ, ಅಣ್ಣಯ್ಯ ನಂಜರಗಿ, ಪ್ರದೀಪ್ ದೊಡ್ಡಗೌಡರ, ಅಡಿವಪ್ಪ ಹೊಸಮನಿ ಸೇರಿದಂತೆ ಗ್ರಾಮದ ಹಿರಿಯರು, ಗ್ರಾಮಸ್ಥರು, ಶ್ರೀ ಮಹಾಂತೇಶ ದೊಡ್ಡಗೌಡರ ಅಭಿಮಾನಿ ಬಳಗದ ಸದಸ್ಯರು, ವ್ಹಾಲಿಬಾಲ್ ಆಟಗಾರರು ಭಾಗವಹಿಸಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 