ಕುಶಾಲ್, ಕಿರಣಸ್ವಾಮಿ, ಅಭಿಷೇಕ್ಗೆ ಯುವ ವಿಜ್ಞಾನಿ ಪ್ರಶಸ್ತಿ

ಧಾರವಾಡ 20: ನಗರದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ  ಕುಶಾಲ್ಕುಮಾರ್, ರಾಷ್ಟ್ರೋತ್ಥಾನ್ ವಿದ್ಯಾಕೇಂದ್ರದ ಕಿರಣಸ್ವಾಮಿ ಮತ್ತು ಅಭಿಷೇಕ್ ಹೂಗಾರ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿ ರಾಜ್ಯ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತು, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಕೆ.ಎಲ್.ಇ ಸಂಸ್ಥೆಯ ಆರ್.ಎಲ್.ಎಸ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ-2019 ಸ್ಪರ್ಧೆಗಳಲ್ಲಿ ಈ ಆಯ್ಕೆ ಜರುಗಿತು. 

ಪ್ರಶಸ್ತಿ ವಿತರಿಸಿ ಮಾತನಾಡಿದ ಡಿಡಿಪಿಐ ಕಛೇರಿಯ ವಿಜ್ಞಾನ ವಿಷಯ ಪರಿವೀಕ್ಷಕ ಸಂಜಯ ಮಾಳಿ, ವಿದ್ಯಾರ್ಥಿ ಗಳಲ್ಲಿ ವೈಜ್ಞಾನಿಕ ಸಂವಹನ, ಚಿಕಿತ್ಸಕ ಬುದ್ಧಿ ಮತ್ತು ಸಮಯೋಚಿತ ಪ್ರಜ್ಞಾವಂತಿಕೆಗಳಿರಬೇಕು. ಓದಿದ್ದನ್ನು ಮರಳಿ ಮನನ ಮಾಡುತ್ತಿರಬೇಕು. ಸ್ವಯಂ ಕಲಿಕೆಗೆ ಅಧಿಕ ಒತ್ತು ನೀಡಿ ಪ್ರಾಯೋಗಿಕ ಅಧ್ಯಯನಕ್ಕೆ ಮುಂದಾಗಬೇಕು ಎಂದರು.

       ಅಧ್ಯಕ್ಷತೆವಹಿಸಿದ್ದ ಕ.ರಾ.ವಿ.ಪ. ಜಿಲ್ಲಾಧ್ಯಕ್ಷ ಸಂಜೀವಕುಮಾರ ಭೂಶೆಟ್ಟಿ ಮಾತನಾಡಿ, ಮೂಲ ಜನ ಸಾಮಾನ್ಯರ ದೈನಂದಿನ ಸಮಸ್ಯೆಗಳೇ ವಿಜ್ಞಾನಿಗಳ ಸಂಶೋಧನೆಗೆ ನಾಂದಿಯಾಗುತ್ತವೆ. ಶಕ್ತಿ ಸಂಪನ್ಮೂಲಗಳ ಆಧುನಿಕರಣ, ಆಹಾರ ಕಲಬೆರಕೆ, ಕಟ್ಟಡ ವಿನ್ಯಾಸ, ಬಹಳ ಮುಖ್ಯವಾಗಿ ನೈಸಗರ್ಿಕ ವಿಕೋಪಗಳ ನಿರ್ವಹಣೆ ಮತ್ತು ನಿವಾರಣೆಗಳಂತಹ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ನಮ್ಮ ದೇಶದ ಹಿರಿಮೆ-ಗರಿಮೆ ಹೆಚ್ಚಿಸಿ, ನೆಲ-ಜಲ-ನಾಡು-ನುಡಿಗಳ ರಕ್ಷಣೆಯ ಮನೋಧರ್ಮವನ್ನು ವಿಜ್ಞಾನದ ಮೂಲಕ ಮಾಡಲು ಕಂಕಣಬದ್ಧರಾಗಬೇಕು ಎಂದರು. 

ಕನರ್ಾಟಕ ವಿಜ್ಞಾನ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರೊ.ಕೆ.ಕೊಟ್ರೆಶ್, ಪ್ರೊ.ಗಾಯತ್ರಿ ಹುದ್ದಾರ, ವ್ಹಿ.ಎಸ್.ಪಾಟೀಲ ನಿರ್ಣಾ ಯಕರಾಗಿದ್ದರು. ವನಮಾಲಾ ಹೆಗಡೆ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಪ್ರೊ. ಶಿವಾನಂದ ಹಡಪದ ನಿರೂಪಿಸಿದರು. ಎ.ಝಡ್. ಸಕರ್ಾಜಿ ವಂದಿಸಿದರು. ಧಾರವಾಡ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಂದ 25 ವಿದ್ಯಾಥರ್ಿಗಳು ಸ್ಪಧರ್ೆಯಲ್ಲಿ ಪಾಲ್ಗೊಂಡಿದ್ದರು.