ನನಗೆಳತಿ ನನಗೆಳತಿ ಗಿಟಾರ್ ವಾದನದ ಯೂಟ್ಯೂಬ್ ಬಿಡುಗಡೆ

ಬಾಗಲಕೋಟೆ 17: ನವನಗದ ಸಜೀವಿ ಅಂಧ ಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ವಿದ್ಯಾಗಿರಿಯ ಪುಟ್ಟು ಹಿರೇಮಠ ಹಾಗೂ ತಂಡದವರಿಗೆ ನನಗೆಳತಿ ನನಗೆಳತಿ ಗಿಟಾರ್ ವರ್ಷನ್ ಯೂಟೂಬ್ ವಿಡಿಯೋವನ್ನು ಬಿಡುಗಡೆಗೊಳಿಸಲಾಯಿತು. 

ಕಾರ್ಯಕ್ರಮವನ್ನು ಉದ್ದೇಶಿಸಿ ವಿ.ಜಿ. ಪಾಟೀಲ ಅವರು ಮಾತನಾಡುತ್ತಾ ಪುಟ್ಟು ಹಿರೇಮಠ ಅವರು ಯಾವುದೇ ಸಂಗೀತ ಕಾರ್ಯಕ್ರಮವನ್ನು ಪ್ರಾರಂಭಿಸಬೇಕಾದರೆ ಅಂಧ ಮಕ್ಕಳ ಸಮ್ಮುಖದಲ್ಲಿ ನಡೆಸುತ್ತಾ ಬಂದಿರುವುದು ತುಂಬಾ ಸಂತೋಷದಾ ವಿಚಾರ, ಈ ಯುವ ಕಲಾವಿದ ಯೂಟೂಬ್ ಮೂಲಕ ಗಿಟಾರ್ ಕಲಿತು ಅನೇಕ ಬಡ ಮಕ್ಕಳಿಗೆ ಉಚಿತವಾಗಿ ಗಿಟಾರ್ ಕಲಿಸುತ್ತಾ ಸಮಾಜಕ್ಕೆ ಏನಾದರೊಂದು ಒಳ್ಳೆಯ ಕೊಡುಗೆ ನೀಡಬೇಕೆಂಬ ಉದ್ದೇಶ ಹೊಂದಿದ್ದಾರೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉದಪುಡಿ, ವಿ.ಜಿ. ಪಾಟೀಲ, ಸುರೇಶ ವಸ್ತ್ರದ, ಮಹಾಂತೇಶ ಕೋಟಿ ಹಾಗೂ ಅನು ಮ್ಯೂಜಿಕ್ ತಂಡದ ಸದಸ್ಯರು, ಸದರಿ ಯೂಟೂಬ್ ವಿಡಿಯೋ ವೀಕ್ಷಿಸಬೇಕಾದರೆ ಪುಟ್ಟು ಹಿರೇಮಠ ಎಂದು ಟೈಪ್ ಮಾಡಿದರೆ ತಾವು ವೀಕ್ಷಿಸಬಹುದು.