ಜಿಂದಾಲ್ ನಿಂದ ನೀವೆಷ್ಟು ಕಮಿಷನ್ ಪಡೆದಿದ್ದೀರಿ ಮುಖ್ಯಮಂತ್ರಿಗೆ ಸಿ ಟಿ ರವಿ ಪ್ರಶ್ನೆ

ಬೆಂಗಳೂರು,ಜೂ 13:  ಬಿಜೆಪಿ-ಜಡಿಎಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೇ ಜಿಂದಾಲ್  ಕಂಪನಿಗೆ  ಜಮೀನನ್ನು ಗುತ್ತಿಗೆ-ಮಾರಾಟ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆಗ ತಾವೆಷ್ಟು ಕಮಿಷನ್ ಪಡೆದು ಒಪ್ಪಂದಕ್ಕೆ ಒಪ್ಪಿಗೆ ನೀಡಿದ್ದಿರೀ,ಅಂತೆಯೇ ಈಗ ಅದಕ್ಕಿಂತ ದೊಡ್ಡಮೊತ್ತದ ಹಣವನ್ನು ಪಡೆದೇ ಮಾರಾಟ ಮಾಡುತ್ತಿದ್ದೀರಿ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಮುಖ್ಯಮಂತ್ರಿಗೆ ತಿರುಗೇಟು ನೀಡಿದ್ದಾರೆ 

ನಗರದ ಕೇಶವ ಕೃಪಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿಮ್ಮ ಮೈತ್ರಿ ಪಕ್ಷಗಳ ಮುಖಂಡರು ಜಿಂದಾಲ್ ಸ್ಟೀಲ್ ಕಂಪನಿಗೆ ಭೂ ಮಾರಾಟದ ವಿರುದ್ಧ ಮಾತನಾಡುತ್ತಿದ್ದಾರೆ. ಮಾನ್ಯತಾ ಸಂಸ್ಥೆಗೆ ಭೂಮಿ ಮಾರಾಟ ಮಾಡಿದಾಗಲೂ ತಾವೇ  ಮುಖ್ಯಮಂತ್ರಿಯಾಗಿದ್ದವರು. ಈ ಬಗ್ಗೆ ವಿಧಾನಸಭೆಯಲ್ಲಿ ಚಚರ್ೆಗೆ ನಾವು ಸಿದ್ದ ಎಂದು ಮುಖ್ಯಮಂತ್ರಿಗೆ ಸಿ ಟಿ ರವಿ ಸವಾಲು ಹಾಕಿದ್ದಾರೆ. 

ಬಳ್ಳಾರಿಯ ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನಿನ ಗುತ್ತಿಗೆ ಮುಂದುವರಿಕೆಗೆ ನಮ್ಮ ಆಕ್ಷೇಪಣೆ ಇಲ್ಲ.ಆದರೆ ಮಾರಾಟಕ್ಕೆ ತೀವ್ರ ವಿರೋಧವಿದೆ. ಮಾರಾಟಕ್ಕೂ ಮೊದಲ ಜಮೀನಿನಲ್ಲಿ ಇದೆ ಎನ್ನಲಾದ ಅದಿರಿನ ನಿಕ್ಷೇಪದ ಪ್ರಮಾಣದ ಬಗ್ಗೆ ಸಮೀಕ್ಷೆ ಮಾಡಿ ನಂತರ ಅದಕ್ಕೆ ದರ ನಿಗದಿ ಮಾಡಬೇಕು.  

ಕೈಗಾರಿಕೆಗಳಿಗೆ ತೊಂದರೆ ನೀಡುವ ಉದ್ದೇಶ ನಮಗಿಲ್ಲ ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು,ಮಾಜಿ ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಗಲೂ ತಮ್ಮ ನಿಲುವನ್ನು ಬದಲಿಸಿಕೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ತಮ್ಮ ಪಕ್ಷದ ಉಪಾಧ್ಯಕ್ಷರು,ಮಾಜಿ ಸಭಾಪತಿಯಾದ ಬಸವರಾಜ ಹೊರಟ್ಟಿ  ಪರಭಾರೆ ವಿರುದ್ಧ ದನಿ ಎತ್ತಿದಾಗ ನೀವು ಮಾತ್ರ ಜಿಂದಾಲ್ ಪರವಾಗಿ ಇದ್ದೀರಿ ಎಂಬುದು ನಿಮ್ಮ ಮೇಲೆ ಶಂಕೆಗೆ ಆಸ್ಪದ ನೀಡಿದೆ ಎಂದು ಸಿ ಟಿ ರವಿ ಮುಖ್ಯಮಂತ್ರಿ ವಿರುದ್ದ ನೇರ ವಾಗ್ದಾಳಿ ನಡೆಸಿದರು. 

ಕೇಶವ ಕೃಪಾದಲ್ಲಿನ ಸಭೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಂಘ ಪರಿವಾರ ಪ್ರತಿ 6 ತಿಂಗಳಿಗೊಮ್ಮೆ ಸಭೆ ಸೇರಿ  ಉತ್ತರ ಕರ್ನಾಟಕ  , ದಕ್ಷಿಣ ಕರ್ನಾಟಕ ಸೇರಿದಂತೆ ರಾಷ್ಟ್ರಮಟ್ಟದ ಪಕ್ಷ ಸಂಘಟನೆ,ಚುನಾವಣೆ ಸೋಲು ಗೆಲುವಿನ ಚಚರ್ೆ,ಹಾಗೂ ಪರಾಮರ್ಶೆ  ನಡೆಸಲಾಗುತ್ತದೆ ಎಂದರು. 

 ರಾಜ್ಯದ ಹಲವೆಡೆ ಬರಗಾಲ ಸ್ಥಿತಿಯಿಂದಾಗಿ  ಕುಡಿಯುವ ನೀರಿನ ತೀವ್ರ  ಸಮಸ್ಯೆ ಎದುರಿಸುತ್ತಿದೆ. ಇದರ ಪರಿಹಾರಕ್ಕೆ ಸಮಾಜ ಹೇಗೆ ಸ್ಪಂದಿಸಬೇಕು ಒಂದು ಕಡೆ ಸರ್ಕಾರದ  ಯೋಜನೆ ಮತ್ತೊಂದು ಕಡೆ ಸಮಾಜದ ಸ್ಪಂದನೆ ಬಗ್ಗೆಯೂ ಸಭೆಯಲ್ಲಿ ಚಚರ್ಿಸಲಾಗುವುದು. ಸಕರ್ಾರದ ಯೋಜನೆಗಳ ಯಶಸ್ವಿಯಾಗಬೇಕಾದರೆ ಸಮಾಜ ಪೂರಕವಾಗಿ ಸ್ಪಂದಿಸಿದಾಗ ಮಾತ್ರ ಅನುಷ್ಠಾನ ಸಫಲವಾಗುವುದು.ಆ ನಿಟ್ಟಿನಲ್ಲಿ ಸಮಾಜವನ್ನು ಹೇಗೆ ಸಿದ್ಧಗೊಳಿಸಬೇಕು ಎನ್ನುವ ಕುರಿತು ಚಿಂತನೆ ಚಚರ್ೆ ನಡೆದಿದೆ ಎಂದು ಅವರು ಸಿ.ಟಿ. ರವಿ  ವಿವರಿಸಿದರು.