ಉತ್ತಮ ಆರೋಗ್ಯ ಪಡೆಯಲು ಯೋಗಾಭ್ಯಾಸ ಅವಶ್ಯಕ
Yoga practice is essential for good health
ಗದಗ 19 : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಯತ್, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಗರಸಭೆ ಗದಗ ಬೆಟಗೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜೂನ್ 21 ರಂದು 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಜೂನ್ 19 ರಂದು ನಗರದ ಮುನ್ಸಿಪಲ್ ಆವರಣದಿಂದ ಸಾಮೂಹಿಕ ಯೋಗ ನಡಿಗೆಗೆ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಚಾಲನೆ ನೀಡಿದರು
ನಂತರ ಮಾತನಾಡಿದ ಅವರು ಯೋಗವು ಮನುಷ್ಯನ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯದ ಸರಳ ಸೂತ್ರವಾಗಿದೆ. ಇಡೀ ಮನುಷ್ಯ ಜನಾಂಗದ ಏಳಿಗೆಗೆ , ಸಂತೋಷಕ್ಕೆ, ನೆಮ್ಮದಿಗೆ ತೃಪ್ತಿಗೆ ಬೇಕಾಗುವ ಬಹುದೊಡ್ಡ ಸಾಧನವೇ ಯೋಗವಿದ್ಯೆಯಾಗಿದೆ ಎಂದು ಹೇಳಿದರು
ವಿಧಾನ ಪರಿಷತ್ತ ಎಸ್ ವಿ ಸಂಕನೂರ ಮಾತನಾಡಿ ಜೀವ ಜಗತ್ತಿಗೆ ಭಾರತ ದೇಶವು ನೀಡಿದ ಅತ್ಯದ್ಭುತ ಕೊಡುಗೆಯೆಂದರೆ “ಯೋಗ “ ವಾಗಿದೆ. ಯೋಗವು ಪ್ರಾಚೀನ ಭಾರತೀಯ ತತ್ವ ಶಾಸ್ತ್ರವಾಗಿದ್ದು ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ. ಯೋಗವು ಋಷಿಮುನಿಗಳ ಕೊಡುಗೆ ಯಾಗಿದೆ ಎಂದು ಹೇಳಿದರು.
2015 ರಿಂದ ಭಾರತ ಸರಕಾರವು ಯೋಗ ವನ್ನು ಜಗತ್ತಿಗೆ ಪರಿಚಯಿಸಿದೆ. ಪತಂಜಲಿ ಮಹರ್ಷಿಗಳನ್ನು ಯೋಗದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಅವರು ಯೋಗ ಸೂತ್ರಗಳನ್ನು ರಚಿಸಿದರು. ಯೋಗದಿಂದ ಮನಸ್ಸಿನ ಕಲ್ಮಶಗಳನ್ನು,ಪದಗಳಿಂದ ಭಾಷೆಯ ದೋಷಗಳನ್ನು ಮತ್ತು ವೈದ್ಯಕೀಯದಿಂದ ಶರೀರದ ದೋಷಗಳನ್ನು ನಿವಾರಿಸಿದೆ ಎಂದು ಹೇಳಿದರು
ನಗರದ ಮುನ್ಸಿಪಲ್ ಕಾಲೇಜು ಆವರಣದಿಂದ ಸಾಮೂಹಿಕ ಯೋಗ ನಡಿಗೆಯಲ್ಲಿ ಘೋಷವಾಕ್ಯ ‘’ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ‘ಉತ್ತಮ ಆರೋಗ್ಯಕ್ಕೆ ಸಂಜೀವಿನಿ ಯೋಗ” ಸದೃಡ ಆರೋಗಕ್ಕೆ ಯೋಗ ರಾಮಭಾಣ” “ಶರೀರ ಮತ್ತು ಮನಸ್ಸನ್ನು ಸದೃಡಗೊಳಿಸುವ ಏಕೈಕ ಸಾಧನವೆ ಯೋಗ” ಎಂಬ ಶ್ಲೋಘನ ಕೂಗುತ್ತಾ ಸಾಗಿದರು ಹಾಗೂ ಯೋಗದ ಕೂರಿತು ಬ್ಯಾನರ ಹಾಗೂ ಶ್ಲೋಘನ ಇಡಿದು ವಿದ್ಯಾರ್ಥಿಗಳು ನಾಗರಿಕರಿಗೆ ಯೋಗದ ಕುರಿತು ಜಾಗೃತಿ ಮುಡಿಸುತ್ತಾ ನಗರಸಭೆ ಕಾಲೇಜು ಮೈದಾನದಿಂದ ಗಾಂಧಿ ವೃತ್ತ, ಶಹಾಪುರ್ ಪೇಟೆ, ಮಹೇಂದ್ರಕರ ವೃತ್ತ, ಹುಯಿಲಗೋಳ ನಾರಾಯಣ ರಾವ್ ವೃತ್ತ, ರೋಟರಿ ವೃತ್ತ, ಗಾಂಧಿ ವೃತ್ತದ ಮೂಲಕ ನಗರಸಭೆ ಕಾಲೇಜು ಮೈದಾನದವರೆಗೆ ಜಾಗೃತಿಗಾಗಿ ಯೋಗ ನಡಿಗೆ ಮುಕ್ತಾಯ ಗೋಂಡಿತು
ಈ ಸಧರ್ಬದಲ್ಲಿ ಜಿಲಾ ್ಲಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಜಿಲ್ಲಾ ಆಯುಷ್ ಅಧಿಕಾರಿಗಳು ಜಿಲ್ಲಾ ಆಯುಷ್ ಇಲಾಖೆ ಜಯಪಾಲಸಿಂಗ ಪಿ ಸಮೋರೆಕರ, ತಾಲೂಕು ಗ್ಯಾರಂಟಿ ಯೊಜನೇಯ ತಾಲೂಕು ಸಮಿತಿ ಅಧ್ಯಕ್ಷರು ಅಶೋಕ ಮಂದಾಲಿ, ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯರು ಕೃಷ್ಣಗೌಡ ಪಾಟೀಲ, ಯೋಗ ಪರಿಣಿತರು ಗದಗನ ಡಿ ಜಿ ಎಮ್ ಆಯುರ್ವೇಧಿಕ ಕಾಲೇಜು ವಿದ್ಯಾರ್ಥಿಗಳು ರೋಣದ ಡಿ.ಜಿ.ಎಮ್ ಕಾಲೇಜಿನ ಬಿ.ಎ.ಎಮ್.ಎಸ್ ವಿದ್ಯಾರ್ಥಿಗಳು ನಗರದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಮತ್ತು ವಿವಿಧ ಹಲವಾರು ಸಂಘ ಸಂಸ್ಥೆಗಳು ಶಾಲಾ ಕಾಲೇಜು ಪ್ರಾಧ್ಯಪಕರು ಉಪಸ್ಥಿತರಿದ್ದರು
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 