ಯೋಗವು ಭಾರತೀಯ ಸಂಸ್ಕೃತಿಯ ಹಿರಿಮೆ: ಶ್ರೀಗಳು
Yoga is the greatness of Indian culture: Shri
ಸಿಂದಗಿ 22: ಯೋಗವು ದೇಹ, ಮನಸ್ಸು ಮತ್ತು ಆತ್ಮಗಳೊಡನೆ ಬೆಸೆಯುವಲ್ಲಿ ಸಹಕರಿಸುತ್ತದೆ. ಕಳೆದ 11 ವರ್ಷಗಳ ಹಿಂದೆ ಆರಂಭವಾದ ಯೋಗ ದಿನಾಚರಣೆ ಈಗ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಸಿಂದಗಿ ಪಟ್ಟಣದ ಸಾರಂಗಮಠದ ಸಭಾಮಂಟಪದಲ್ಲಿ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ, ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥೆಯ ಅಡಿಯಲ್ಲಿರುವ ಎಲ್ಲ ಸಂಗ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಅಂತರ ರಾಷ್ಟ್ರೀಯ ಯೋಗ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗವು ಭಾರತೀಯ ಸಂಸ್ಕೃತಿಯ ಹಿರಿಮೆ, ಗರಿಮೆಗಳ ಸಾಕಾರ ರೂಪವಾಗಿದೆ. ಯೋಗಭ್ಯಾಸ ಒತ್ತಡವನ್ನು ನಿವರಿಸುತ್ತದೆ. ಪ್ರತಿ ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಯೋಗ ಸಾಧಕರನ್ನು ಗಮನಿಸಿದರೆ ತಿಳಿಯುತ್ತದೆ. ಯೋಗ ದಿನಾಚರಣೆಯಂದು ಕಲಿತಿರುವ ಆಸನಗಳನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಯೋಗ ದಿನದ ಆಚರಣೆಯ ಆಶಯಕ್ಕೆ ಸ್ಪಂದಿಸುವಂತಾಗಬೇಕು ಎಂದರು.
ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ಸಾರಂಗಮಠದಲ್ಲಿ ಯಾದಗಿರಿ ಜಿಲ್ಲೆಯ ಗೋಗಿ ಜ್ಞಾನಯೋಗ ಮಂದಿರ ಯೋಗ ಸಾಧಕರು ಹಾಗೂ ಮಾರ್ಗದರ್ಶಕ ಯೋಗಿ ಜಯಗುರುದೇವ ಸ್ವಾಮೀಜಿ ಅವರಿಂದ ಜೂ.21 ರಿಂದ ಜೂ.29 ರವೆರೆಗೆ ಪ್ರತಿನಿತ್ಯ ಬೆಳಿಗ್ಗೆ 6-7ಗಂಟೆಯವರೆಗೆ ಅಷ್ಟಾಂಗ ಯೋಗ, ಸಾಯಂಕಾಲ 7-8ಗಂಟೆವರೆಗೆ ಪ್ರಣವ ಧ್ಯಾನ ಯೋಗ ನಡೆಯುತ್ತದೆ ಇದರ ಸದುಪಯೋಗವನ್ನು ಸಿಂದಗಿ ಜನತೆ, ಶ್ರೀಮಠದ ಭಕ್ತರು ಹಾಗೂ ಮಕ್ಕಳ ಪಡೆದುಕೊಳ್ಳಬೇಕು ಎಂದರು.
ಯಾದಗಿರಿ ಜಿಲ್ಲೆಯ ಗೋಗಿ ಜ್ಞಾನಯೋಗ ಮಂದಿರ ಯೋಗ ಸಾಧಕರು ಹಾಗೂ ಮಾರ್ಗದರ್ಶಕರಾದ ಯೋಗಿ ಜಯಗುರುದೇವ ಸ್ವಾಮೀಜಿಗಳು ಅಷ್ಟಾಂಗ ಯೋಗದ ಬಗ್ಗೆ ತಿಳಿಸಿ ಆಸನಗಳನ್ನು ಮಾಡಿಸಿದರು. ಬಳಿಕ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಯೋಗ ಸಪ್ತಾಹದಲ್ಲಿ ಪಾಲ್ಗೊಂಡ ಯೋಗಾಸಕ್ತರಿಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಯಿತು.
ಆಡಳಿತ ಮಂಡಳಿ ಸದಸ್ಯ ಅಶೋಕ ವಾರದ, ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಶಕುಂತಲಾ ಹಿರೇಮಠ, ಮಡಿವಾಳಮ್ಮ ಗದಗಿಮಠ, ಶಿಕ್ಷಕಿ ಕವಿತಾ, ಭಾಗ್ಯಶ್ರೀ ನಂದಿಮಠ, ಮುಕ್ತಾಯಕ್ಕ ಕತ್ತಿ ಶ್ರೀದೇವಿ ದುದ್ದಗಿ, ಬಸಮ್ಮ ಧರಿ ಸೇರಿದಂತೆ ಶ್ರೀಮಠದ ಭಕ್ತರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 