ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಯೋಗ ಅಗತ್ಯ
Yoga is essential for the all-round development of a person
ಧಾರವಾಡ 04 : ಯೋಗ ವಿದ್ಯೆ ವಿಶ್ವ ಸಂಸ್ಕೃತಿಗೆ ಭಾರತದ ಅಮೂಲ್ಯ ಕೊಡುಗೆ. ಇದೊಂದು ಚಿರಪುರಾತನ, ನಿತ್ಯ ನೂತನ ಮಾರ್ಗವಾಗಿದೆ ಎಂದು ಪಶುಪಾಲನಾ ಇಲಾಖೆ ವಿಶ್ರಾಂತ ಉಪನಿರ್ದೇಶಕ ಡಾ. ವಿಲಾಸ ಕುಲಕರ್ಣಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಡಾ. ದಿನೇಶ ಪರಡ್ಡಿ ಸ್ಮರಣಾರ್ಥ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಯೋಗ ವಿಜ್ಞಾನ’ ’ ವಿಷಯ ಕುರಿತು ಉಪನ್ಯಾಸ ನೀಡಿದರು.
ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಯೋಗ ಅಗತ್ಯವಾಗಿದೆ. ಯೋಗವು ನಮ್ಮ ಜೀವನವನ್ನು ಉಜ್ಜೀವನಗೊಳಿಸುವುದಲ್ಲದೇ ದೇಹ-ಮನಸ್ಸುಗಳನ್ನು ಸಂಸ್ಕಾರಗೊಳಿಸುತ್ತದೆ. ಯೋಗಪಥಗಳಲ್ಲಿ ರಾಜಯೋಗವು ಹೊರ ಹೋಗುವ ಮನಸ್ಸನ್ನು ನಿಲ್ಲಿಸಿ ಒಳಮುಖವನ್ನಾಗಿ ತಿರುಗಿಸುತ್ತದೆ. ಪತಂಜಲಿ ಮಹರ್ಷಿಗಳು ತಿಳಿಸಿದ ಅಷ್ಟಾಂಗ ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮಗಳು ಬಹಿರಂಗ ಯೋಗಗಳಾದರೆ, ಧಾರಣ, ಧ್ಯಾನ, ಸಮಾಧಿ ಯೋಗಗಳು ಅಂತರಂಗದ ಯೋಗಗಳಾಗಿವೆ. ಪತ್ಯಾಹಾರವು ಇಂದ್ರಿಯಗಳನ್ನು ಅಂತರ್ಮುಖಗೊಳಿಸುತ್ತದೆ.
ನಾವು ಮನಸ್ಸಿನಿಂದ ರೋಗ ನಿರ್ಮೂಲನೆ ಮಾಡಬೇಕೆ ವಿನಹ ಓಷಧಿಯಿಂದಲ್ಲ. ಯೋಗ ಬಲ್ಲವರಿಗೆ ಯಾವುದೇ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳು ಬರುವುದಿಲ್ಲ. ಇಂದು ಯೋಗವಿದ್ಯೆ ವಿಶ್ವವ್ಯಾಪಿಯಾಗಿದ್ದು ಇದರ ಬಗ್ಗೆ ಇರುವ ತಪ್ಪು ಕಲ್ಪನೆ ಬಿಡಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವಿಯ ಯೋಗ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಹಾದೇವ ಆರೇರ ಮಾತನಾಡಿ, ದಿ. ಡಾ. ದಿನೇಶ ಪರಡ್ಡಿ ಯೋಗ ವಿದ್ಯೆಯ ಮಹಾನ್ ಸಾಧಕರು. ಅವರದು ಪಾರದರ್ಶಕ, ಕ್ರೀಯಾಶೀಲ ವ್ಯಕ್ತಿತ್ವ. ಅಂತಾರಾಷ್ಟ್ರೀಯ ಮಟ್ಟದ ಯೋಗಪಟುವಾದ ಇವರು ಜೀವಿಸಿದ್ದು ಅಲ್ಪಾವಧಿಯಾದರೂ ಸಾಧನೆ ಮಾತ್ರ ಬಹಳ ದೊಡ್ಡದು. ಮನಸ್ಸಿನಲ್ಲಿ ಬರುವ ಹತ್ತಾರು ಯೋಚನೆ ಲಯವಾಗಿ ಮನಸ್ಸು ಶಾಂತವಾಗಲು ಯೋಗ ಬೇಕು ಎಂದರು.
ವೇದಿಕೆಯಲ್ಲಿ ದತ್ತಿದಾನಿಗಳ ಪರವಾಗಿ ಅನೀಲ ಪರಡ್ಡಿ ಇದ್ದರು. ಶಂಕರ ಕುಂಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.
ಸಕಾರ್ಯಕ್ರಮದಲ್ಲಿ ಸತೀಶ ತುರಮರಿ, ಕೆ.ಎಚ್. ನಾಯಕ, ಮಹೇಶ ಹುಲ್ಲಣ್ಣವರ, ಅನೀಲ ಮುಗಳಿ, ಅನ್ನಪೂರ್ಣ ಮುಗಳಿ, ಸೀಮಾ ಪರಡ್ಡಿ, ಶಾಂತಾ ಪರಡ್ಡಿ, ಸತೀಶ ತುರಮರಿ ಸೇರಿದಂತೆ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 