ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯೋಗ ಅವಶ್ಯ: ಷಡಕ್ಷರಯ್ಯ

ಧಾರವಾಡ 24: ಮನಸ್ಸು ಮತ್ತು  ಶರೀರದ ಸಂಪೂರ್ಣ ಶಕ್ತಿಯನ್ನು ಜಾಗೃತಗೊಳಿಸುವ ಸಾಧನೆಯೇ ಯೋಗ, ಮನಸ್ಸು ನಿರ್ಮಲಗೊಳಿಸಲು ಆರೋಗ್ಯ ಬೇಕು. ಇದಕ್ಕೆ ತಕ್ಕಂತೆ ಯೋಗ ಮತ್ತು ಧ್ಯಾನ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಿವೃತ್ತ ಪ್ರಾಧ್ಯಾಪಕರಾದ ಡಾ. ಆರ್. ಎಂ. ಷಡಕ್ಷರಯ್ಯ ತಿಳಿಸಿದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕಲ್ಯಾಣ ನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಬಸವ ಸಮಿತಿ, ಕ್ಷೇಮಾಭಿವೃದ್ಧಿ ಸಂಘ, ಚಿನ್ಮಯ ಮಿಷನ್ ಹಾಗೂ ಟಿ.ಎಸ್. ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿದ ಯೋಗ ಕುರಿತು ವಿಶೇಷ ಉಪನ್ಯಾಸದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಆರೋಗ್ಯಕರ ಸಮಾಜ ನಿರ್ಮಾಣ ಹಾಗೂ ಒಳ್ಳೆಯ ಬದುಕಿಗಾಗಿ ಯೋಗ ಅವಶ್ಯವೆಂದ ಅವರು, ಪ್ರತಿನಿತ್ಯವು ಯೋಗ ಚಿಂತನೆ ನಡೆಯಬೇಕೆಂದರು. ಇಂದು 140 ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ಆಚರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದೆ ಎಂದರು.

ಭಾರತ ಸ್ವಾಭಿಮಾನ ಟ್ರಸ್ಟ್ನ ಯೋಗ ಶಿಕ್ಷಕ ವಿ.ಜಿ. ಹಿರೇಮಠ ಯೋಗದ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, 3 ವರ್ಷದಿಂದ ಜೀವನದುದ್ದಕ್ಕೂ ಎಲ್ಲರೂ ಯೋಗಭ್ಯಾಸ ಮಾಡಬಹುದು ಸೊರೆಸಿಸ್ನಂತಹ ಕಾಯಿಲೆಗಳು ಯೋಗದಿಂದ ಗುಣಪಡಿಸಬಹುದು. ಯೋಗ ಜೀವನದ ಪದ್ಧತಿಯಾಗಬೇಕು. ಗ್ರಾಮೀಣ ಭಾಗಗಳಲ್ಲಿ ಯೋಗದ ಬಗ್ಗೆ ಜಾಗ್ರತಿ ಮೂಡಿಸಿ ಪ್ರತಿಯೊಂದು ಮನೆಯಲ್ಲಿ ಯೋಗ ನಡೆಯಬೇಕು ಎಂದರು.  ಹಲವಾರು ಯೋಗದ ಪದ್ಧತಿಗಳನ್ನು ತಿಳಿಸಿದ ಅವರು ಯಾವುದೇ ಬೇಧವಿಲ್ಲದೆ ಎಲ್ಲ ಸಮುದಾಯದವರು ಯೋಗದ ಬಗ್ಗೆ ಅಭ್ಯಾಸ ಮಾಡಿ ಮಾನಸಿಕ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕೆಂದರು.

ವಾಸ್ತು-ಯೋಗ-ರೇಖಿ ತಜ್ಞರಾದ ಸೋಮನಾಥ ದಂಡವತಿ ರೇಖಿ ಮತ್ತು ಯೋಗ, ವಾಸ್ತು ಕುರಿತು ಉಪನ್ಯಾಸ ನೀಡಿ ಮಾತನಾಡಿ, ರೇಖಿ ಅಂದರೆ ಆಧ್ಯಾತ್ಮಿಕತೆಯ ಅರಿವಿನಿಂದ ಕೂಡಿರುವ ಜೀವನದ ಶಕ್ತಿ ಆಗಿದೆ. ಯಾವುದೆ ರೀತಿಯ ಔಷಧಿಗಳ ಪ್ರಯೋಜನೆಗಳಿಲ್ಲದೆ ದೈವತ್ವದಿಂದಲೇ ರೋಗಗಳನ್ನು ಶಮನಗೊಳಿಸಬಹುದೆಂದರು. ವಿನಾಶಕಾರಕ ದುರಭ್ಯಾಸಗಳನ್ನು ರೇಖಿಯ ಉಪಯೋಗದಿಂದ ದೂರೀಕರಿಸಬಹುದು. ಅಲ್ಲದೆ ಮಾನಸಿಕ, ಭಾವನಾತ್ಮಕ ವಿಚಾರಗಳನ್ನು ಸಕಾರಾತ್ಮಕವಾಗಿ ಬೆಳೆಸಬಹುದು ಎಂದರು. ಸ್ವಯಂ ಚಿಕಿತ್ಸೆ, ದೂರಗಾಮಿ ಚಿಕಿತ್ಸೆ ಹಾಗೂ ಸಂಕಲ್ಪ ಶಕ್ತಿವರ್ಧನ ಮೂರು ರೇಖಿ ಹಂತಗಳಿವೆ. ಈ ಚಿಕಿತ್ಸೆಗಳಿಂದ ಮನುಷ್ಯ ಆರೋಗ್ಯ ಹಾಗೂ ಮನ:ಶಾಂತಿಯಿಂದ ಇರಲು ಸಾಧ್ಯವೆಂದರು.

ಚಿನ್ಮಯ ಮಿಷನ್ ಅಧ್ಯಕ್ಷ ದಿನೇಶ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಯೋಗ  ಜನರ ಕಡೆಗೆ ತೆಗೆದುಕೊಂಡು ಹೊಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ತಿಳಿಸಿಕೊಡುವ ಕೆಲಸ ನಡೆಯಬೇಕೆಂದು ಹೇಳಿ ಪ್ರತಿಯೋಬ್ಬರು ಆಹಾರ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕೆಂದರು.

ಬಸವ ಸಮಿತಿಯ ಸಂಯೋಜಕ ಎಂ.ಜಿ. ಮುಳಕೂರ ಸಮಿತಿಯಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮ ಹೇಳಿ ಶ್ರಾಮಣ ಮಾಸದಲ್ಲಿ ಮನೆ ಮನೆಗಳಲ್ಲಿ ವಚನ, ಚಿಂತನ ಹಮ್ಮಿಕೊಳ್ಳಲಾಗುದೆಂದರು.

ಬಸವ ಸಮಿತಿಯ ಸಂಯೋಜಕ ಹಾಗೂ ಪ್ರಕೃತಿ ಚಿಕಿತ್ಸಾ ತಜ್ಞ ಎಂ.ಜಿ. ಮುಳಕೂರ ಅವರನ್ನು ಸನ್ಮಾನಿಸಲಾಯಿತು.

ಸಂಗೀತ ಶಿಕ್ಷಕ ಅರುಣಕುಮಾರ ಪ್ರಾರ್ಥನೆಗೈದರು. ಮಂಗಳಾ ಮತ್ತು ನಿರ್ಮಲಾ ಚಿಗಟಗೇರಿ ವಚನಗಾಯನ ಮಡೆಸಿಕೊಟ್ಟರು. ದಾನಮ್ಮ ಅಂಗಡಿ ಸ್ವಾಗತಿಸಿದರು.   ಸುರೇಖಾ ಮಠದ ಅತಿಥಿ ಪರಿಚಯ ಮಾಡಿದರು. ಚಿನ್ಮಯಿ ಪಾಟೀಲ ನಿರೂಪಿಸಿದರು. ಕೀರ್ತಿ  ನಕರ್ೆ ವಂದಿಸಿದರು.

ಪ್ರೊ. ಜಿ.ಎ. ಕಲ್ಲೂರ, ಪ್ರೊ. ಎಸ್.ಎಸ್. ಬೀಳಗಿ, ಪಿ.ಎಸ್. ಹೀರೆಮಠ, ಎಂ.ಆರ್. ಈಶಣ್ಣ, ಬಸವ ಸಮಿತಿಯ ಚೌಧರಿ, ಎಂ.ಪಿ. ಹಳ್ಳಿಕೇರಿ ಹಾಗೂ ಕಲ್ಯಾಣನಗರದ ಶರಣ ಶರಣೆಯರು ಉಪಸ್ಥಿತರಿದ್ದರು.