ಯೋಗದಿಂದ ಹಲವಾರು ಸಮಸ್ಯೆಗಳಿಗೆ ಪರಿಹಾರ: ಜಯಗುರುದೇವಶ್ರೀ
Yoga is a solution to many problems: Jayagurudevashree
ಸಿಂದಗಿ 28: ಯೋಗದಿಂದ ನಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಆರೋಗ್ಯ ಸುಧಾರಣೆ ಸಾಧ್ಯ ಜತೆಗೆ ನಮ್ಮ ದೇಹ ಮತ್ತು ಪ್ರಜ್ಞೆಯನ್ನು ಒಗ್ಗೂಡಿಸುತ್ತದೆ ಎಂದು ಗೋಗಿ ಜ್ಞಾನಯೋಗ ಮಂದಿರದ ಯೋಗಿ ಜಯಗುರುದೇವ ಸ್ವಾಮಿಗಳು ಹೇಳಿದರು.
ಪಟ್ಟಣದ ಪ.ವಿ.ವ.ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಯೋಗ ಮತ್ತು ಆರೋಗ್ಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಮ್ಮ ಮನಸ್ಸು ಶುದ್ಧವಾಗಿದ್ದರೆ ನಮ್ಮ ಭಾರತವೂ ಪರಿಶುದ್ಧವಾಗುತ್ತದೆ. ನೀವು ಜೀವಂತವಾಗಿರುವವರೆಗೆ ನಿಮ್ಮ ದೇಹವನ್ನು ಕಾಳಜಿ ವಹಿಸಿ ಮತ್ತು ಪ್ರೀತಿಸಿ, ಜೀವನವನ್ನು ಆನಂದಿಸಿ, ಯಾವಾಗಲೂ ಗುಣಮಟ್ಟದ ಜೀವನವನ್ನು ನಡೆಸಲು ಹಾಗೂ ಆರೋಗ್ಯಕರವಾಗಿರಲು ಯೋಗವು ಬಹುಮುಖ್ಯವಾಗಿದೆ. ಎಂದರಲ್ಲದೇ ಯೋಗದಲ್ಲಿನ ನಿಂತು ಮಾಡುವ ಆಸನಗಳು, ಕುಳಿತು ಮಾಡುವ ಆಸನಗಳು, ಧ್ಯಾನಗಳ ಮಹತ್ವ ಮತ್ತು ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿ, ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ನಿವಾರಣೆಗೆ ಯೋಗದ ಮೊರೆ ಹೋಗುತ್ತಿದ್ದಾರೆ ಎಂದರು.
ಉಪಪ್ರಾಚಾರ್ಯ ಪಿ.ವ್ಹಿ.ಮಹಲಿನಮಠ, ನಿವೃತ್ತ ಪ್ರಾಚಾರ್ಯ ವ್ಹಿ.ವ್ಹಿ.ಜಿರ್ಲಿ, ಬಿ.ಬಿ.ಜಮಾದಾರ, ಶಿವಶರಣ ಬೂದಿಹಾಳ, ಡಾ. ಶರಣಬಸವ ಜೋಗೂರ, ರೋಹಿತ್ ಸುಲ್ಪಿ, ರಾಹುಲ ನಾರಾಯಣಕರ್, ಪ್ರಸನ್ ಜೋಗೂರ್, ಎನ್.ಬಿ.ಪೂಜಾರಿ, ಗವಿಸಿದ್ದಪ್ಪ ಆನೆಗುಂದಿ, ಎನ್.ಎಂ.ಶೆಳ್ಳಗಿ, ಉದಯ ಶಿವಸಿಂಪಿಗೇರ್, ಎಸ್.ಎಸ್.ಹೂಗಾರ್, ಸುನೀಲ ಪಾಟೀಲ, ವ್ಹಿ.ಪಿ.ನಂದಿಕೋಲ, ಎಸ್.ಜಿ.ಮಾರ್ಸನಳ್ಳಿ, ಆರ್.ಎಂ.ಕೊಳ್ಳೂರೆ, ಚಂದ್ರು ಬಬಲೇಶ್ವರ್, ನೀಲಕಂಠ ಮೇತ್ರಿ, ಸೇರಿದಂತೆ ಇನ್ನಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 