ಯೋಗ ಸರ್ವರೋಗಕ್ಕೂ ರಾಮಬಾಣ: ವಿ. ಕೃಷ್ಣಮೂರ್ತಿ
Yoga is a panacea for all diseases: V. Krishnamurthy
ಬೆಳಗಾವಿ 22: ಪ್ರಾಚೀನ ಕಾಲದಿಂದಲೂ ಋಷಿಮುನಿಗಳು ಪ್ರತಿದಿನ ಯೋಗವನ್ನು ಮಾಡುತ್ತಿದ್ದರು. ಋಷಿಮುನಿಗಳ ದೀರ್ಘಾಯುಷ್ಯದ ಗುಟ್ಟು ಎಂದರೆ ಯೋಗ. ಯೋಗವು ಮನುಷ್ಯನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರನ್ನಾಗಿಸುತ್ತದೆ. ಕಾರಣ ಪಾಶ್ಚಿಮಾತ್ಯ ರಾಷ್ಟ್ರಗಳು ಯೋಗಕ್ಕೆ ಮೊರೆ ಹೋಗಿದ್ದು, ಭಾರತದ ಕೀರ್ತಿ ಹೆಚ್ಚಿದೆ ಒಟ್ಟಿನಲ್ಲಿ ಯೋಗವು ಸರ್ವರೋಗಕ್ಕೂ ರಾಮಬಾಣ ಇದ್ದಂತೆ ಎಂದು ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕ ವಿ.ಕೃಷ್ಣಮೂರ್ತಿ ಹೇಳಿದರು.
ಯೋಗ ವಿದ್ಯಾಧಾಮ ಫೌಂಡೆಶೇನ್ ಬೆಳಗಾವಿ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ದಿ. 21ರಂದು ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇವಲ ಯೋಗ ದಿನಾಚರಣೆಯ ನಿಮಿತ್ಯ ಮಾತ್ರ ಯೋಗ ಮಾಡಿದರೆ ಸಾಲದು. ಕಾರಣ ಪ್ರತಿಯೋಬ್ಬರು ಯೋಗ, ದ್ಯಾನ, ಹಾಗೂ ಪ್ರಾಣಾಯಾಮ ಇವುಗಳನ್ನು ಪ್ರತಿದಿನದ ದಿನಚರಿಗಳಲ್ಲಿ ಒಂದನ್ನಾಗಿರಿಸಬೇಕು, ಆದರೆ ಇಂದಿನ ಯುವಪೀಳಿಗೆಯು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ವಿಷಾದನಿಯ. ನಮ್ಮ ದೇಶದ ಸಂಸ್ಕೃತಿಯು ಇಡಿ ಜಗತ್ತಿನಲ್ಲಿ ಅತ್ಯುನ್ನತ ಸಂಸ್ಕೃತಿಯಾಗಿದೆ. ಭಾರತ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ವಿಜಯ ಮೋರೆ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೋಬ್ಬರು ಒತ್ತಡದಿಂದ ಬಳಲುತ್ತಿದ್ದು, ಯೋಗವು ಒತ್ತಡ ನಿವಾರಣೆ ಮಾಡಿ ದಿನವಿಡಿ ಉಲ್ಲಾಸ ಭರಿತರನ್ನಾಗಿ ಮಾಡುತ್ತದೆ. ಕಾರಣ ನಿವಾಸಿಗಳು ಕಾರಾಗೃಹದ ಸಮಯವನ್ನು ಸದೂಪಯೋಗಪಡಿಸಿಕೊಂಡು ಯೋಗ, ಧ್ಯಾನ, ಹಾಗೂ ಪ್ರಾಣಾಯಾಮ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಹಾಗೂ ತಾವೆಲ್ಲರು ಧನಾತ್ಮಕ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಿಡುಗಡೆ ನಂತರ ಸಮಾಜದಲ್ಲಿ ಹಾಗೂ ತಮ್ಮ ಕುಟುಂಬ ವರ್ಗದವರಿಗೆ ಯೋಗದ ಮಹತ್ವ ತಿಳಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಯೋಗ ಗುರು ಅಚ್ಯುತ ಮಾಹುಲಿ, ಅಶೋಕ ಕಲಬುರ್ಗಿ ಆಗಮಿಸಿದ್ದರು. ಕಾರಾಗೃಹದ ಆಡಳಿತಾಧಿಕಾರಿ ಬಿ.ಎಸ್ ಪೂಜಾರಿ, ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣುರ ಹಾಗೂ ಮುಖ್ಯ ವೈಧ್ಯಾದಿಕಾರಿ ಡಾ. ಸಂಜಯ ಡುಮ್ಮಗೋಳ ಉಪಸ್ಥಿತರಿದ್ದರು.
ಕಾರಾಗೃಹದ ವೈದ್ಯಾಧಿಕಾರಿ ಡಾ. ಸರಸ್ವತಿ, ಡಾ. ಶಾಲದಾರ ಹಾಗೂ ಯೋಗ ವಿದ್ಯಾದಾಮ ಪೌಂಡೇಶನ್ ಯೋಗ ಶಿಕ್ಷಕ ಚಿದಂಬರ, ವಿನೋದ, ರಮೇಶ, ದೀಪಾ, ಶಶಿ, ಮಹಾದೇವ ಹಾಗೂ ಕಾರಾಗೃಹದ ಜೈಲರ್‌ಗಳಾದ ಬಿ.ವಾಯ್ ಭಜಂತ್ರಿ, ಆರ್.ಬಿ ಕಾಂಬಳೆ, ಎಫ್.ಟಿ ದಂಡೈನವರ ಉಪಸ್ಥಿತರಿದ್ದರು. ಕಾರಾಗೃಹದ ಉಪಾಧ್ಯಾಯ ಶಶಿಕಾಂತ ಯಾದಗುಡೆ ನಿರೂಪಿಸಿ ವಂದಿಸಿದರು.
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ 