ಡಾ. ದಿನೇಶ ಪರಡ್ಡಿ ಸ್ಮರಣಾರ್ಥ ದತ್ತಿ: ಯೋಗ ವಿಜ್ಞಾನ ಉಪನ್ಯಾಸ ಕಾರ್ಯಕ್ರಮ
Yoga Science Lecture Program
ಧಾರವಾಡ 01: ಕರ್ನಾಟಕ ವಿದ್ಯಾವರ್ಧಕ ಸಂಘವು, ಡಾ. ದಿನೇಶ ಪರಡ್ಡಿ ಸ್ಮರಣಾರ್ಥ ದತ್ತಿ ಅಂಗವಾಗಿ ದಿ. 2-9-2025 ರಂದು ಸಂಜೆ 6 ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ಯೋಗ ವಿಜ್ಞಾನ’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಏರಿ್ಡಸಿದೆ.
ಅತಿಥಿ ಉಪನ್ಯಾಸಕರಾಗಿ ಧಾರವಾಡ ಪಶುಪಾಲನಾ ಇಲಾಖೆ ವಿಶ್ರಾಂತ ಉಪನಿರ್ದೇಶಕ ಡಾ. ವಿಲಾಸ ಕುಲಕರ್ಣಿ ಆಗಮಿಸುವರು.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯಯೋಗ ಅಧ್ಯಯನ ವಿಭಾಗದ ಸಹಾಯಕ ಅಧ್ಯಾಪಕ ಡಾ. ಮಹಾದೇವ ಎಸ್. ಆರೇರ ಅಧ್ಯಕ್ಷತೆ ವಹಿಸುವರು.
ಸಾಹಿತಿಗಳು, ಲೇಖಕರು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಡಾ. ದಿನೇಶ ಮಲ್ಲಿಕಾರ್ಜುನ ಪರಡ್ಡಿ
ದಿವಂಗತ ದಿನೇಶ ಪರಡ್ಡಿ ಪ್ರತಿಭಾನ್ವಿತ ವ್ಯಕ್ತಿಯಾಗಿದ್ದರು. ಯೋಗದಲ್ಲಿ ಸಾಕಷ್ಟು ಸಾಧನೆ ಮಾಡಿದವರು. ಹಠಯೋಗದಲ್ಲಿ ಪಿ.ಎಚ್.ಡಿ. ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದರು.
ಸಂಸ್ಕೃತದಲ್ಲಿಯೂ ಪಾಂಡಿತ್ಯವನ್ನು ಹೊಂದಿದ್ದ ಡಾ. ದಿನೇಶರವರು ಯೋಗ ಹಾಗೂ ಸಂಸ್ಕೃತ ಭಾಷೆ ಮೇಲೆ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದರು. ಹಲವಾರು ವಿಶ್ವವಿದ್ಯಾಲಯ, ಕಾಲೇಜು, ಸಂಘ-ಸಂಸ್ಥೆಗಳಲ್ಲಿ ಯೋಗ ಶಿಕ್ಷಕರಾಗಿ ತರಬೇತುದಾರರಾಗಿ ಕಾರ್ಯ ಮಾಡುವುದರ ಮೂಲಕ ಈ ಕ್ಷೇತ್ರದಲ್ಲಿ ಯೋಗ ಗುರುವಾಗಿ ಗುರುತಿಸಿಕೊಂಡಿದ್ದರು. ಯೋಗ ಅಧ್ಯಯನಕ್ಕೆ ಸಂಬಂಧಿಸಿದಂತೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಮಾವೇಶಗಳಲ್ಲಿ ಭಾಗವಹಿಸಿದ್ದರು. ಅಸಂಖ್ಯ ಯುವಕರಿಗೆ, ಮಕ್ಕಳಿಗೆ ಯೋಗ ಶಿಬಿರಗಳನ್ನು ನಡೆಸಿ ಆರೋಗ್ಯದ ಅರಿವು ನೀಡಿದವರು.
ದಿನಾಂಕ 23-2-2009 ರಂದು ಇವರ ಅಕಾಲಿಕ ಮರಣದ ನಂತರ ಇವರ ತಂದೆಯವರಾದ ಡಾ. ಮಲ್ಲಿಕಾರ್ಜುನ ಪರಡ್ಡಿಯವರು ತಮ್ಮ ಮಗ ಯೋಗದ ಮೂಲಕ ಆರೋಗ್ಯದ ಬಗ್ಗೆ ಹೊಂದಿದ್ದ ಕಾಳಜಿಯ ನೆನಪನ್ನು ಹಸಿರಾಗಿಡಲು ಮತ್ತು ಮಗನ ಹೆಸರಿನಲ್ಲಿ ಯೋಗ ಮತ್ತು ಆರೋಗ್ಯ ಪರಿಸರ ಕುರಿತಂತೆ ಉಪನ್ಯಾಸ, ತರಬೇತಿಗಳು ನಡೆಯಲೆಂದು ಅವರ ಜನ್ಮದಿನವಾದ ಸಪ್ಟಂಬರ 2 ರಂದು ಕಾರ್ಯಕ್ರಮ ನಡೆಸಲು ಸಂಘದಲ್ಲಿ ದತ್ತಿ ನಿಧಿ ಇಟ್ಟು ಅನುಕೂಲ ಮಾಡಿಕೊಟ್ಟಿದ್ದಾರೆ.
ಕಾರ್ಯಕ್ರಮಕ್ಕೆ ಬನ್ನಿ ಪ್ರಯೋಜನ ಪಡೆಯಿರಿ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 