ಸ್ವಾಮಿ ವಿವೇಕಾನಂದರ ಶಾಲೆಯಲ್ಲಿ ಯೋಗ ದಿನಾಚರಣೆ
Yoga Day celebration at Swami Vivekananda School
ಇಂಡಿ 22: ತಾಲೂಕಿನ ಹೋರ್ತಿ ಸ್ವಾಮಿ ವಿವೇಕಾನಂದರ ಶಾಲೆಯ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಾತನಾಡಿದ ಶಾಲೆಯ ಉಪಾಧ್ಯಕ್ಷ ಎಲ್ ಎಸ್ ಕಲಶೆಟ್ಟಿ ಇಂದಿನ ಒತ್ತಡದ ಜೀವನ ಪದ್ಧತಿಯಿಂದ ಹಾಗೂ ಆಹಾರ ಪದ್ಧತಿಯಿಂದಾಗಿ ದೇಹ ಸದೃಢವಾಗಿರಲು ಸಾಧ್ಯವಾಗುತ್ತಿಲ್ಲ. ಪೂರ್ಣ ಆಯಸ್ಸು ಪಡೆಯಬೇಕಾದರೆ ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಮುಖ್ಯಗುರುಮಾತೆ ಜೆ ಎಮ್ ಬಿರಾದಾರ ಮಾತನಾಡಿ ಭಾರತವು ವಿಶ್ವಕ್ಕೆ ಯೋಗದ ಮೂಲಕ ಶಾಂತಿಯನ್ನು ರಫ್ತು ಮಾಡಿದೆ. ಜೀವನದಲ್ಲಿ ಯೋಗವನ್ನು ಅಳಪಡಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಶಿಕ್ಷಕ ಡಿ ಎಮ್ ಹಿರೇಮಠ ಮಾತನಾಡಿ ಸದೃಢ ಆರೋಗ್ಯ ಹೊಂದಲು ಯೋಗ ಸಹಕಾರಿಯಾಗಿದ್ದು, ರೋಗಗಳಿಂದಲೂ ದೂರವಿರಬಹುದು. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಯೋಗವು ಮನುಷ್ಯನ ಮನಸ್ಸು ಏಕಾಗ್ರಗೊಳಿಸುವ ಶಿಕ್ಷಣ ಕ್ರಮವಾಗಿದೆ. ಯೋಗವು ಸೀಮಿತ ಧರ್ಮ, ಜಾತಿ, ಪಂಗಡ ರಾಷ್ಟ್ರೀಯತೆಗಳ ಭೇದ ಮೀರಿ ನಿಂತಿದೆ. ಇದು ಒಂದು ರಾಷ್ಟ್ರೀಯ ಭಾವೈಕ್ಯತೆ ಸಮನ್ವಯ ಜೀವನದ ಶಿಕ್ಷಣವಾಗಿದೆ ಎಂದರು.
ಶಿಕ್ಷಕರಾದ ಜೆ ಎಸ್ ಕಂದಗಲ್, ಎಸ್ ಬಿ ಮಸೂತಿ, ಎಸ್ ಎಮ್ ಖೈನೂರ, ಎ ಟಿ ದೇವಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 