ಮೇವುಂಡಿ ಸರ್ಕಾರಿ ಶಾಲೆಯಲ್ಲಿ ಯೋಗ ದಿನಾಚರಣೆ

ಮೇವುಂಡಿ ಸರ್ಕಾರಿ ಶಾಲೆಯಲ್ಲಿ ಯೋಗ ದಿನಾಚರಣೆ Yoga Day celebrated at Mevundi Government School

ಲೋಕದರ್ಶನ ವರದಿ 

ಹಾವೇರಿ 23 : ಮೇವುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ರವಿವಾರ ಆಚರಿಸಲಾಯಿತು.  ಮುಖ್ಯೋಪಾಧ್ಯಾಯರಾದ ವೀರೇಶ್ ಎಮ್ ಗಡ್ಡದೇವರಮಠ, ಸಹ ಶಿಕ್ಷಕರಾದ ಡಿ ಎಸ್ ರಿತ್ತಿ, ಬಿ ಕೆ ಶ್ರೀನಿವಾಸ ಹಾಗೂ ಶಿಕ್ಷಕಿ ಸುಜಾತಾ ಕಡಕೋಳ ಅವರು ಯೋಗದ ಮಹತ್ವದ ಕುರಿತು ಮಾತನಾಡಿದರು.  ಕುಮಾರಿ ಗಾಯತ್ರಿ ಮುಂಡರಗಿ ಹಾಗೂ ಕುಮಾರ್ ಹನುಮೇಶ್ ಭೋವಿ ಅವರ ನೇತೃತ್ವದಲ್ಲಿ ಯೋಗಾಭ್ಯಾಸ ಜರುಗಿತು.  ಕಳೆದ ಒಂದು ವಾರದಿಂದ ಯೋಗಸಪ್ತಾಹ ಕಾರ್ಯಕ್ರಮದಲ್ಲಿ ಉತ್ತಮ ಯೋಗ ಪ್ರದರ್ಶನ ನೀಡಿದ ಯೋಗಪಟುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಸವರಾಜ ಪೂಜಾರ, ಕಮಲ ಹಾವನೂರ,  ಶಬೀನಾ ನದಾಫ್, ಪ್ರದೀಪ ಬಿಜಾಪುರ, ಪುಷ್ಪಾವತಿ ಗುಂಜಾಳ ಹಾಜರಿದ್ದರು. ಕು ಭಾಗ್ಯಲಕ್ಷ್ಮೀ ಹಿರೇಮಠ ನಿರೂಪಿಸಿದರು. ಕು ಫಯಾಜ್ ನದಾಫ್ ವಂದಿಸಿದರು.