ಯೋಗ ದಿನಾಚರಣೆ: ಬೃಹತ್ ಯೋಗ ಪ್ರದರ್ಶನ

ಬಾಗಲಕೋಟೆ21: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಬೃಹತ್ ಯೋಗ ಪ್ರದರ್ಶನ ನಡೆಯಿತು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಆಯುಷ್ ಹಾಗೂ ಭಾರತ ಸೇವಾದಳದ, ವಿವಿಧ ಸಂಘ ಸಂಸ್ಥೆಗಳು, ಆಯುವರ್ೇದ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಚಾಲನೆ ನೀಡಿದರು. 

ನಂತರ ಯೋಗ ಪ್ರಾತ್ಯಕ್ಷಿಕೆಯಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾ.ಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ದುಗರ್ೇಶ ರುದ್ರಾಕ್ಷಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ, ಜಿಲ್ಲಾ ಆಯುಷ ಅಧಿಕಾರಿ ಡಾ.ಆರ್.ಜಿ.ಮೈತ್ರಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಅಲ್ಪಸಂಖ್ಯಾತರ ಮೊರಾಜರ್ಿ ದೇಸಾಯಿ ವಸತಿ ಶಾಲೆಯ 400 ಮಕ್ಕಳು ಸೇರಿದಂತೆ ವಿವಿಧ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸೇರಿ ಅಂದಾಜು 1500ಕ್ಕು ಹೆಚ್ಚು ಜನ ಪಾಲ್ಗೊಂಡಿದ್ದರು.

 ಭಾರತ ಸೇವಾ ದಳದ ಜಿಲ್ಲಾ ಸಮನ್ವಯಾಧಿಕಾರಿ ಮಹೇಶ ಪತ್ತಾರ ಹಾಗೂ ಸಂಗಡಿಗರು ಮತ್ತು ಡಾ.ಸಂಗೀತಾ ಬಳಗಾನೂರ ಅವರು ವಜ್ರಾಸನ, ವೃಕ್ಷಾಸನ, ಚಕ್ರಾಸನ, ಅರ್ಧ ಚಕ್ರಾಸನ, ಭುಜಂಗಾಸನ, ತಾಡಾಸನ, ತ್ರಿಕೋಣಾಸನ, ಉತ್ತಿತ ಪಾದಾಸನ, ಪಾದ ಹಸ್ತಾಸನ, ಭದ್ರಾಸನ, ಅರ್ಧಉಷ್ಟ್ರಾಸನ, ಶಲಭಾಸನ, ಮಕರಾಸನ, ಪವನ ಮುಕ್ತಾಸನ, ಶವಾಸನ ನಾಡಿಶೋಧನ, ಪ್ರಾಣಾಯಾಮಗಳನ್ನು ಸಾಮೂಹಿಕ ಯೋಗಬ್ಯಾಸವನ್ನು ಮಾಡಿಸಿದರು. 

        ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಆರೋಗ್ಯವೇ ಭಾಗ್ಯ ನಂತರ ಅರಿವು, ಶಿಕ್ಷಣ, ಯೋಗಾಸನಗಳನ್ನು ದಿನನಿತ್ಯ ಅಭ್ಯಾಸ ಮಾಡಿ ಸದೃಢ ದೇಹ,   ಸದೃಢ ಮನಸ್ಸು ಹಾಗೂ ಸದೃಢ ದೇಶ ಕಟ್ಟೋಣವೆಂದರು. ಯೋಗ ದೈಹಿಕ ಮಾನಸಿಕ ಆರೋಗ್ಯವನ್ನು ವೀರಿದಂತಹದಾಗಿದ್ದು, ಜೀವನದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದ, ಸಂತೋಷ, ಯಶಸ್ಸು ಎಲ್ಲವೂ ಕೈಗೂಡಬೇಕೆಂದರೆ ಯೋಗ ಅಗತ್ಯವಾಗಿದೆ ಎಂದು ತಿಳಿಸಿದರು.

ನಂತರ ತುಳಸಿಗೇರಿ ಸಕರ್ಾರಿ ಪ್ರೌಢ ಶಾಲೆ, ತುಳಸಿಗೇರಿ ಹಾಗೂ ಸಕರ್ಾರಿ ಕುವೆಂಪು ಮಾದರಿ ಪ್ರಾಥಮಿಕ ಶಾಲೆಯ 100 ಮಕ್ಕಳು ಯೋಗ ನೃತ್ಯ ಪ್ರದರ್ಶನ ಮಾಡಿ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ಐದು ನಿಮಿಷಗಳ ಕಾಲ ಜ್ಞಾನ ಮಾಡಿಸಲಾಯಿತು.

         ಇದೇ ಸಂದರ್ಭದಲ್ಲಿ ಯೋಗ ಸಾಧಕರಾದ ನಿವೃತ್ತ ಶಿಕ್ಷಕ ಬೊಮ್ಮಯ್ಯ ಹಿರೇಮಠ, ಭಾರತ ಸೇವಾದಳದ ಜಿಲ್ಲಾ ಸಮನ್ವಯಾಧಿಕಾರಿ ಮಹೇಶ ಪತ್ತಾರ, ಡಾ.ಸಂಗೀತಾ ಬಳಗಾನೂರ, ಲಕ್ಷ್ಮೀ ಗೌಡರ, ತುಳಸಿಗೇರಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಸಿ.ಕೆ.ಚನಾಳ, ಸರಕಾರಿ ಕುವೆಂಪು ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ಸಿ.ಎ.ಸಣ್ಣಪ್ಪನವರ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ನಾಗರತ್ನಾ ಅಕ್ಕನವರು  ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಆರೋಗ್ಯವೇ ಭಾಗ್ಯ ನಂತರ ಅರಿವು, ಶಿಕ್ಷಣ, ಯೋಗಾಸನಗಳನ್ನು ದಿನನಿತ್ಯ ಅಭ್ಯಾಸ ಮಾಡಿ ಸದೃಢ ದೇಹ, ಸದೃಢ ಮನಸ್ಸು ಹಾಗೂ ಸದೃಢ ದೇಶ ಕಟ್ಟೋಣವೆಂದರು. ಯೋಗ ದೈಹಿಕ ಮಾನಸಿಕ ಆರೋಗ್ಯವನ್ನು ವೀರಿದಂತಹದಾಗಿದ್ದು, ಜೀವನದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದ, ಸಂತೋಷ, ಯಶಸ್ಸು ಎಲ್ಲವೂ ಕೈಗೂಡಬೇಕೆಂದರೆ ಯೋಗ ಅಗತ್ಯವಾಗಿದೆ ಎಂದು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ್ ಅವರು ಯೋಗದಿಂದ ಮಾನಸಿಕ ಸ್ವಾಸ್ಥ್ಯ, ಶಾರೀರಿಕ ಸ್ವಾಸ್ಥ್ಯ, ಮಾನಸಿಕ ಒತ್ತಡಗಳನ್ನು ದೂರ ಮಾಡಲು ಹಾಗೂ ಏಕಾಗ್ರತೆ ಬರಲು ಯೋಗ, ಧ್ಯಾನ ಅಗತ್ಯವಾಗಿದೆ ಎಂದರು.

  ನಂತರ ಮನೆಮದ್ದು ವಸ್ತು ಪ್ರದರ್ಶನವನ್ನು ಉದ್ಘಾಟನೆ ಮಾಡಿದರು. ಜಿಲ್ಲಾಧಿಕಾರಿ ಆರ್.ರಾಂಚಂದ್ರನ್ ಮನೆಮದ್ದು ದ್ರವ್ಯಗಳು ಹಾಗೂ ಸಿರಿಧಾನ್ಯಗಳ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸುವುದರೊಂದಿಗೆ ಕೆಲವೊಂದು ಮನೆಮದ್ದು ವಸ್ತುಗಳ ಬಗ್ಗೆ ಸ್ವತಃ ಜಿಲ್ಲಾಧಿಕಾರಿಗಳೆ ವಿವರಣೆ ನೀಡಿದರು. ಆಯುಷ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ರಕ್ಕಸಗಿ ವಂದಿಸಿದರು.