'ಉಪಚುನಾವಣೆ ಬಳಿಕ ಯಡಿಯೂರಪ್ಪ ರಾಜೀನಾಮೆ'

ಬೆಂಗಳೂರು,ಅ 27:     ಉಪಚುನಾವಣೆ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಖಚಿತ. ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15 ಎಲ್ಲಿ 10  ಸ್ಥಾನ ಗೆಲ್ಲಲಿದೆ. ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಭವಿಷ್ಯ ನುಡಿದಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ. ಅನರ್ಹರ ಬಗ್ಗೆ ಈಗಾಗಲೇ ಕ್ಷೇತ್ರಗಳಲ್ಲಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಗೆಲ್ಲುವುದಿಲ್ಲ.ಆದ್ದರಿಂದ ಯಡಿಯೂರಪ್ಪ ಸರ್ಕಾರಕ್ಕೆ ಬಹುಮತ ಪಡೆಯುವುದಿಲ್ಲ. ಮುಂದೆ ಯಡಿಯೂರಪ್ಪ ರಾಜೀನಾಮೆ ಕೊಡುವ ಸಂದರ್ಭ ಬರಬಹುದು. 

ನಂತರ ಮಾರ್ಚ್ 2020ಕ್ಕೆ ಸಾರ್ವತ್ರಿಕ ಚುನಾವಣೆ ಎದುರಾದರೂ ಆಶ್ಚರ್ಯ ಇಲ್ಲ ಎಂದು ತಿಳಿಸಿದ್ದಾರೆ. ನಗರದ ಡಾಲರ್ಸ್ ಕಾಲೋನಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧಿಸಬಹುದೆಂದು ಚುನಾವಣಾ ಆಯೋಗ ಹೇಳಿರುವುದು ಸಂಶಯಕ್ಕೀಡು ಮಾಡಿದೆ ಎಂದರು. ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅನರ್ಹ ಶಾಸಕರ ವಿಚಾರದಲ್ಲಿ ಸರಿಯಾಗಿಯೇ ತೀರ್ಮಾನ ಕೈಗೊಂಡಿದ್ದಾರೆ. ಸೆಂಟ್ರಲ್ ಎಲೆಕ್ಷನ್ ಕಮಿಷನ್ ಕಕ್ಷಿದಾರ ನಲ್ಲದಿದ್ದರೂ ಸ್ವಯಂಪ್ರೇರಣೆಯಿಂದ ನ್ಯಾಯಾಲಯದ ಮುಂದೆ ಬಂದು ಚುನಾವಣೆ ಮುಂದೂಡುವುದಾಗಿ ಹೇಳಿದ್ದು ಅನುಮಾನಕ್ಕೀಡುಮಾಡಿದೆ.

ಶಾಸಕರು ರಾಜೀನಾಮೆ ಕೊಟ್ಟ ತಕ್ಷಣ ಸ್ಪೀಕರ್ ರಾಜೀನಾಮೆಯನ್ನು ಅಂಗೀಕರಿಸಬೇಕೆಂಬ ನಿಯಮವಿಲ್ಲ. ಅನರ್ಹರು ರಾಜೀನಾಮೆಯನ್ನು ಗುಂಪು ಗುಂಪಾಗಿ ಕೊಟ್ಟಿದ್ದರಿಂದ ಸ್ಪೀಕರ್ ಆಗಿದ್ದ ರಮೇಶ್ ಕುಮಾರ  ರಾಜೀನಾಮೆ ಅಂಗೀಕರಿಸಲಿಲ್ಲ ಎಂದರು. ರಾಜೀನಾಮೆ, ಅನರ್ಹತೆ, ಸುಪ್ರೀಂ ಕೋರ್ಟ್ನ ಆದೇಶದ ಬಗ್ಗೆ ಜನ ಚರ್ಚೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾಜಿ ಸ್ಪೀಕರ್ ಆಗಿ,  ಕಾನೂನು ತಿಳಿದವನಾಗಿ, ಜನತೆಗೆ ತಿಳಿಸಲು ಈ ಸುದ್ದಿಗೋಷ್ಠಿ ಕರೆಯಲಾಗಿದೆ ಎಂದು ಕೋಳಿವಾಡ  ತಮ್ಮ ಸುದ್ದಿಗೋಷ್ಠಿಗೆ ಕಾರಣ ನೀಡಿದರು. ರಾಜೀನಾಮೆಯನ್ನು ಶಾಸಕ ಕೊಟ್ಟಾಕ್ಷಣ ಅಂಗೀಕಾರ ಮಾಡಬೇಕೆಂದು ಏನಿಲ್ಲ. 

ಜೆನಿಯಯನ್ ಹಾಗೂ ವಾಲಂಟರಿ ಎಂಬ ಶಬ್ದಗಳಿವೆ. ಅನರ್ತೆ  ವಿಷಯ ಬಂದಿದ್ದರಿಂದ ರಾಜೀನಾಮೆ ತಕ್ಷಣಕ್ಕೆ ಅಂಗೀಕಾರ ಅಸಾಧ್ಯ.ಸ್ವಯಂಪ್ರೇರಣೆಯಿಂದ ರಾಜೀನಾಮೆ ಕೊಡಬೇಕಾದರೆ ಅದು ಕೈಬರಹದಲ್ಲಿರಬೇಕು ಎಂದರು ರಾಣೆಬೆನ್ನೂರಿನ ಜಿಲ್ಲಾ ಪಂಚಾಯತ್ ಸದಸ್ಯನ ಪ್ರಕರಣ ಉಲ್ಲೇಖಿಸಿದ ಕೋಳಿವಾಡ ಸ್ಪೀಕರ್ ಕಾನೂನು ಪ್ರಕಾರವೇ ಶಾಸಕರನ್ನು ಅನರ್ಹಗೊಳಿಸಿದ್ದಾರೆ.ಸ್ಪೀಕರ್ ಪರಮಾಧಿಕಾರವನ್ನು ಪ್ರಶ್ನಿಸಲಾಗದು.ಸ್ಪೀಕರ್ ಆದೇಶದ ವಿರುದ್ಧ ನ್ಯಾಯಾಲಯ ಮಧ್ಯೆ ಪ್ರವೇಶಿಸಲು ಬರುವುದಿಲ್ಲ. 

ಆದರೆ ಬೈ ರಿಟ್ ಜ್ಯೂಡಿಸಿಯಲ್ ರಿವ್ಯೂ ಇದೆ.ಸಂವಿಧಾನದ ರಕ್ಷಣೆಗೆ ಕೋರ್ಟ್ ಇದೆ.ರಿಟ್ ರೈಸ್ ಇನ್ ಹೈ ಕೋರ್ಟ್ ನಾಟ್ ಸುಪ್ರಿಂ ಕೊರ್ಟ್ ಎಂದರು. ಅನರ್ಹ ಶಾಸಕರು ಮತ್ತೆ ಚುನಾವಣೆ ನಿಲ್ಲಬಹುದೆಂದು ಹೇಳಿರುವುದು ಕೇಂದ್ರ ಚುನಾವಣಾ ಆಯೋಗ ದ ಮೇಲೆ ಸಂಶಯಕ್ಕೆ ಕಾರಣವಾಗಿದೆ. 

ಕೆಪಿಜೆಪಿಯ ಆರ್.ಶಂಕರ್ ಸ್ವತಃ ಕಾಂಗ್ರೆಸ್ ಸೇರ್ಪಡೆಯಾದ ಕುರಿತು ಸ್ಪೀಕರ್ ಗೆ ಪತ್ರ ಕೊಟ್ಟಿದ್ದಾರೆ.ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ ನೀಡಿ,  ದೊಡ್ಡ ಜಾಥಾವನ್ನು ನಡೆಸಿದ್ದರು.ಕಾಂಗ್ರೆಸ್ ಸೇರಿದ ಬಳಿಕ ಸಚಿವರು ಕೂಡ ಆಗಿದ್ದರು.

ಕೆಪಿಜೆಪಿ ಪಾರ್ಟಿ ಸಂಪೂರ್ಣ ಕಾಂಗ್ರೆಸ್ ಜೊತೆ ವಿಲೀನವಾದ ನಂತರ, ರಾಜ್ಯಪಾಲರಿಗೆ ಪತ್ರ ಬರೆದು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಕೋಳಿವಾಡ ವಿವರಿಸಿದರು. ಕಾಂಗ್ರೆಸ್ ನಾಯಕರೆಲ್ಲ ತಮ್ಮತಮ್ಮ ನಡುವಿನ ಎಲ್ಲಾ ಭಿನ್ನಾಭಿಪ್ರಾಯ ಮರೆತು ಒಂದಾದಲ್ಲಿ ಉಪಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಬಹುದು. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಡಿಕೆ ಶಿವಕುಮಾರ್ ಪಕ್ಷದ ಪ್ರಭಾವಿ ನಾಯಕರು.ಇವರಿಬ್ಬರು ಒಂದಾಗಿ ಹೋದಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ .ಹಾಗೆಂದ ಮಾತ್ರಕ್ಕೆ ಅವರ ನಡುವೆ ಈಗ ಸರಿ ಇಲ್ಲ ಎಂದು ಅರ್ಥ ಅಲ್ಲ ಎಂದು ಸೂಚ್ಯವಾಗಿ ಹೇಳಿದರು. ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಖಂಡಿತ ಎಲ್ಲಾ ಚುನಾವಣೆ ಗೆಲ್ಲಬಹುದು.ನನಗೂ ಭಿನ್ನಾಭಿಪ್ರಾಯಗಳು ಇದ್ದವು.ಈಗ ಭಿನ್ನಾಭಿಪ್ರಾಯಗಳನ್ನು ಮರೆತಿದ್ದೇನೆ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯನವರೂ ತಮಗೆ ಟಿಕೇಟ್ ಕೊಡಲು ಒಪ್ಪಿದ್ದಾರೆ.ನಾವೆಲ್ಲಾ ಮಾತನಾಡಿ ಭಿನ್ನಾಭಿಪ್ರಾಯ ಮರೆತಿದ್ದೇವೆ.ಸಿದ್ದರಾಮಯ್ಯನವರ ಮನೆಗೂ ಹೋಗಿದ್ದಾಗ ಅವರು ನೀವೇ ಸ್ಪರ್ಧಿಸಿ ಎಂದಿದ್ದಾರೆ ಎಂದರು.