ಲೋಕದರ್ಶನ ವರದಿ
ಯರಗಟ್ಟಿ 12: ಇಲ್ಲಿನ ಕೃಷಿ ಉತ್ಪನ್ ಮಾರುಕಟ್ಟೆ ಆವರಣದಲ್ಲಿ ಸೋಮವಾರ ರೈತ ಸಂಪರ್ಕ ಕೇಂದ್ರದಿಂದ 2019-20ನೇ ಸಾಲಿನ ಮುಂಗಾರು ಹಂಗಾಮಿನ ರೈತರಿಗೆ ರಿಯಾಯಿತಿ ದರದಲ್ಲಿ ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ ಬೀಜ ವಿತರಣೆ ಮಾಡಿದರು.
ಈ ಸಂಧರ್ಭದಲ್ಲಿ ಕೃಷಿ ಅಧಿಕಾರಿ ಎಮ್.ಎಸ್.ಬಿಚಗುಪ್ಪಿ ಮಾತನಾಡಿ ಮುಂಗಾರು ಹಂಗಾಮಿನ ಬೀತ್ತನೆ ಬೀಜಗಳು ಎಲ್ಲ ರೈತರಿಗೆ ತಲುಪುವಷ್ಟು ಬೀಜ ಇದ್ದು ಯರಗಟ್ಟಿ ಹೋಬಳಿ ಮಟ್ಟದ ಎಲ್ಲ ಗ್ರಾಮಗಳ ರೈತರು ಬೀಜಗಳನ್ನು ಖರೀದಿಸಬೇಕು ಮತ್ತು ಖರೀದಿಗಾಗಿ ಪ್ರತಿಯೊಬ್ಬರೂ ಆಧಾರ ಕಾಡರ್್ ಝರಾಕ್ಷ, ಬ್ಯಾಂಕ್ ಪಾಸ್ಬುಕ್ ಝರಾಕ್ಷ, ಒಂದು ಭಾವಚಿತ್ರ, ಖಾತೆ ಉತಾರ, ಮೋಬೈಲ್ ನಂಬರ ತರಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ಗ್ರಾ.ಪಂ.ಅದ್ಯಕ್ಷೆ ಕಸ್ತೂರಿ ಕಡೆಮನಿ, ತಾ.ಪಂ.ಸದಸ್ಯೆ ಮಂಜುಳಾ ಕರಿಗೊಣ್ಣವರ, ಎಪಿಎಮ್ಸಿ ಮಾಜಿ ಉಪಾದ್ಯಕ್ಷ ಚಂದ್ರು ಅಳಗೋಡಿ, ಆತ್ಮ ಸಿಬ್ಬಂದಿ ಉಮೇಶ ಯರಗಟ್ಟಿ, ಗಂಗಪ್ಪ ಹೂಲಿಕಟ್ಟಿ, ಅಪ್ಪಣ್ಣ ರವಿ ಎಸ್.ಡಿ.ಕೆಂಪಾರ, ಆರ್.ಬಿ.ದಾಸರ, ಬಸವರಾಜ ದಳವಾಯಿ, ಮಂಜುನಾಥ ಮುಂಡೇಶ, ವಿಜಯ ಚಿಕ್ಕೋಡಿ, ಹನಂತ ತಳವಾರ, ತುಕಾರಾಮ ಕಮತಗಿ, ರುದ್ರಪ್ಪ ಮಾದರ, ಯರಗಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು