ಸ್ತ್ರೀ ಚೇತನ ಅಭಿಯಾನಕ್ಕೆ ಯಲ್ಲವ್ವಾ ಉಪ್ಪಾರ, ಆರ್‌.ಬಿ ರಕ್ಕಸಗಿ ಚಾಲನೆ

ಸ್ತ್ರೀ ಚೇತನ ಅಭಿಯಾನಕ್ಕೆ ಯಲ್ಲವ್ವಾ ಉಪ್ಪಾರ, ಆರ್‌.ಬಿ ರಕ್ಕಸಗಿ ಚಾಲನೆ Yallava Uppara, RB Rakkasagi drive for Stri Chetana Abhiyan

ಸ್ತ್ರೀ ಚೇತನ ಅಭಿಯಾನಕ್ಕೆ ಯಲ್ಲವ್ವಾ ಉಪ್ಪಾರ, ಆರ್‌.ಬಿ ರಕ್ಕಸಗಿ ಚಾಲನೆ 

ಸವದತ್ತಿ, 24 : ತಾಲೂಕಿನ ಚುಳಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾ ಪಂಚಾಯತ ಬೆಳಗಾವಿ, ತಾಲೂಕ ಪಂಚಾಯತ ಸವದತ್ತಿ ಹಾಗೂ ಚುಳಕಿ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಹಮ್ಮಿಕೊಂಡ"ಸ್ತ್ರೀ ಚೇತನ" ಅಭಿಯಾನವನ್ನು* ಗ್ರಾಮ ಪಂಚಾಯತಿ ಅಧ್ಯಕ್ಷೆ ಯಲ್ಲವ್ವ ಮಾರುತಿ ಉಪ್ಪಾರ ಹಾಗೂ ಮಾನ್ಯ ತಾಪಂ ಸಹಾಯಕ ನಿರ್ದೇಶಕರು (ಗ್ರಾ.ಉ) ಆರ್ ಬಿ ರಕ್ಕಸಗಿ ರವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆಯನ್ನು ನೀಡಿದರು. 

ತಾಪಂ ಸಹಾಯಕ ನಿರ್ದೇಶಕರು (ಗ್ರಾ.ಉ) ಆರ್ ಬಿ ರಕ್ಕಸಗಿ ರವರು ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ಕೈಗಳಿಗೆ ನಿರಂತರ ಕೂಲಿ ಕೆಲಸವನ್ನು ನೀಡಲಾಗುತ್ತಿದೆ. ಗಂಡು ಹೆಣ್ಣಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡಲಾಗುತ್ತಿದೆ. ಸನ್ 2024-25ನೇ ಸಾಲಿನಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ 50ಅ ಕ್ಕಿಂತ ಕಡಿಮೆ ಇರುವ ಗ್ರಾಮ ಪಂಚಾಯತಿಯಲ್ಲಿ *"ಸ್ತ್ರೀ-ಚೇತನ" ಅಭಿಯಾನ* ವನ್ನು ಹಮ್ಮಿಕೊಂಡು ನರೇಗಾ ಯೋಜನೆಯ ಕುರಿತು ಜಾಗೃತಿಯನ್ನು ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೂಡಾ ಭಾಗವಹಿಸುವಂತೆ ಮಾಡಿ ಅವರು ಕೂಡಾ ಆರ್ಥಿಕವಾಗಿ ಸಬಲರಾಗುವಂತೆ ಮಾಡಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಸದರಿ ಯೋಜನೆಯ ಲಾಭವನ್ನು ಪಡೆಯಬೇಕು ಎಂದು ತಿಳಿಸಿದರು.ಬಳಿಕ ಮನರೇಗಾ ಯೋಜನೆಯ ಮಾಹಿತಿಯುಳ್ಳ ಕರಪತ್ರಗಳ್ನು ಗ್ರಾಮದ ಮಹಿಳೆಯರಿಗೆ ಹಂಚಲಾಯಿತು ಹಾಗೂ ಮನೆ-ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ಹಂಚಿ ನರೇಗಾ ಯೋಜನೆಯ ಕುರಿತು ಮಾಹಿತಿಯನ್ನು ನೀಡಲಾಯಿತು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆನಂದ ಎ ಸುತಗಟ್ಟಿ, ಗ್ರಾಪಂ ಸರ್ವಸದಸ್ಯರು, ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ, ತಾಂತ್ರಿಕ ಸಹಾಯಕ ವಿಜಯ ಪೇಠೆ, ಬಿಎಫ್ ಟಿ, ಗ್ರಾಮ ಕಾಯಕ ಮಿತ್ರ, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಎಲ್ ಸಿ ಆರ್ ಪಿ, ಕೃಷಿ ಸಖಿ, ಗ್ರಾಮದ ಮಹಿಳೆಯರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.