ಯಲ್ಲಮ್ಮನ ಗುಡ್ಡ ಪ್ಲಾಸ್ಟಿಕ್ ಮುಕ್ತ ಅಭಿಯಾನ: ವ್ಯಾಪಾರಿಗಳಿಗೆ ಪರಿಸರ ಜಾಗೃತಿ
Yallammana Gudda Plastic-Free Campaign: Environmental Awareness for Traders
ಲೋಕದರ್ಶನ ವರದಿ
ಉಗರಗೋಳ 12: ಯಲ್ಲಮ್ಮನ ಗುಡ್ಡದಲ್ಲಿನ ಪ್ರತಿಯೋಬ್ಬ ವ್ಯಾಪಾರಿಗಳು ಪ್ಲಾಸ್ಟಿಕ್ ಮುಕ್ತವಾಗಿ ವ್ಯವಹಾರ ಮಾಡುವುದಾಗಿ ಸಂಕಲ್ಪ ತೋಡಬೇಕು ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಕಾರ್ಯಧರ್ಶಿ ಪ್ರಭಾವತಿ ಫಕೀರಪೂರ ಹೇಳಿದರು. ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಶನಿವಾರ ರಂದು ಹಮ್ಮಿಕೊಂಡ ಪ್ಲಾಸ್ಟಿಕ್ ಮುಕ್ತ ಯಲ್ಲಮ್ಮ ದೇವಸ್ಥಾನ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣವಾದರೆ ಮಾತ್ರ ಪರಿಸರ ಉಳಿಯಲು ಸಾಧ್ಯ. ಈ ಅಭಿಯಾನಕ್ಕೆ ದೇವಸ್ಥಾನದ ಎಲ್ಲ ವ್ಯಾಪಾರಿಗಳು ಕೈಜೋಡಿಸಬೇಕು ಎಂದು ಕರೆಕೊಟ್ಟರು. ಸ್ಥಳಿಯರು, ವ್ಯಾಪಾರಸ್ಥರು, ಭಕ್ತರು ಸಹ ಶುಚಿತ್ವಕ್ಕೆ ಆಧ್ಯತೆ ನೀಡಬೇಕು. ಪ್ಲಾಸ್ಟಿಕ್ ಮುಕ್ತ ಯಲ್ಲಮ್ಮನ ಗುಡ್ಡ ನಿರ್ಮಾಣಕ್ಕೆ ಈ ಅಭಿಯಾನ ನಡೆಸುತ್ತಿದ್ದೆವೆ, ಶ್ರೀಕ್ಷೇತ್ರದಲ್ಲಿನ ಪ್ರತಿಯೊಂದು ಅಂಗಡಿಗಳಿಗೆ ತೇರಳಿ ಜಾಗೃತಿ ಮೂಡಿಸುತ್ತಿದ್ದೆವೆ ಇದಕ್ಕೆ ಪ್ರತಿಯೊಬ್ಬರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದ ಪ್ರಭಾವತಿ ಫಕೀರಪೂರ ಅವರು ಮುಂದೆ ಬರುವ ದಿನಗಳಲ್ಲಿ ಸಂಪೂರ್ಣವಾಗಿ ಯಲ್ಲಮ್ಮನ ದೇವಸ್ಥಾನವನ್ನು ಪ್ಲಾಸ್ಟಿಕ್ ಮುಕ್ತ ದೇವಸ್ಥಾನವನ್ನಾಗಿ ಮಾಡಲಾಗುವುದು ಎಂದರು. ಅಲ್ಲಮಪ್ರಭು ಪ್ರಭುನವರ, ಶೀತಲ ಕಡಟ್ಟಿ, ಬೆಳಗಾವಿಯ ಶಿವು ನಂದಗಾಂವಿ ದೇವಸ್ಥಾನದ ಸಿಬ್ಬಂದಿ ಇದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 