ಯೆಸ್ ಬ್ಯಾಂಕನ್ನು ಸಾರ್ವಜನಿಕ ವಲಯದಡಿ ತರಲು ಎಐಬಿಇಎ ಒತ್ತಾಯ

ಹೈದರಾಬಾದ್, ಮಾರ್ಚ್ 7 , ಠೇವಣಿದಾರರು ಮತ್ತು ಬ್ಯಾಂಕಿನ ಗ್ರಾಹಕರ ಹಿತಾಸಕ್ತಿ ಕಾಪಾಡುವ ಸಲುವಾಗಿ, ಯೆಸ್ ಬ್ಯಾಂಕ್ ಅನ್ನು ತಕ್ಷಣವೇ ಸಾರ್ವಜನಿಕ ವಲಯದ ವ್ಯಾಪ್ತಿಗೆ ತರಬೇಕು ಎಂದು ಅಖಿಲ  ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಶನಿವಾರ ತಿಳಿಸಿದೆ. ಸರ್ಕಾರವು ವೈಭವೀಕರಿಸುತ್ತಿರುವ  ಖಾಸಗಿ ಬ್ಯಾಂಕುಗಳು ಒಂದೊಂದಾಗಿ ವಿಫಲವಾಗುತ್ತಿವೆ. ಸರ್ಕಾರವು 1969ರಲ್ಲಿ ನಡೆದ ಘಟನೆಯನ್ನು ಪುನರಾವರ್ತಿಸುವ ಸಮಯ ಬಂದಿದೆ.

ಎಲ್ಲಾ ಖಾಸಗಿ ಬ್ಯಾಂಕುಗಳನ್ನು ಸಾರ್ವಜನಿಕ  ವಲಯದ ಅಡಿಯಲ್ಲಿ ತರಲು ಇದು ಸೂಕ್ತ ಸಮಯ. ಜನರ ಹಣ ಜನರ ಕಲ್ಯಾಣಕ್ಕಾಗಿಯೇ ಹೊರತು ಖಾಸಗಿ ಲೂಟಿಗಾಗಿ  ಅಲ್ಲ ಎಂದು ಎಐಬಿಇಎ  ಪ್ರಧಾನ ಕಾರ್ಯದರ್ಶಿ ಚ. ವೆಂಕಟಾಚಲಂ ಈ ಬಗ್ಗೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದೇ ರೀತಿ, ಬ್ಯಾಂಕುಗಳು  ಸಾರ್ವಜನಿಕ ಹಣ ಮತ್ತು ಕಷ್ಟಪಟ್ಟು ಸಂಪಾದಿಸಿದ ಸಾರ್ವಜನಿಕ ಉಳಿತಾಯವನ್ನು  ನಿರ್ವಹಿಸುತ್ತವೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು.

ಬ್ಯಾಂಕುಗಳನ್ನು ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದರೆ ಯೆಸ್ ಬ್ಯಾಂಕ್ ಸೇರಿದಂತೆ ಬ್ಯಾಂಕಿನ ಉನ್ನತ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕ್ರಮ  ಕೈಗೊಳ್ಳಬೇಕು. ಈ ಘಟನೆಗೆ ಜವಾಬ್ದಾರರಾಗಿರುವವರಿಗೆ ಕಠಿಣ ಶಿಕ್ಷೆಗಳನ್ನು  ನೀಡಬೇಕು. ಅವರನ್ನು ಹಾಗೆ ಬಿಟ್ಟು ಬಿಡಬಾರದು ಎಂದು ಅವರು ಆಗ್ರಹಿಸಿದ್ದಾರೆ.2020 ರ  ಏಪ್ರಿಲ್ 3 ರವರೆಗೆ ಒಂದು ಅವಧಿಗೆ ಠೇವಣಿ ಹಿಂಪಡೆಯುವುದನ್ನು 50,000 ರೂ.ಗಳಿಗೆ  ನಿರ್ಬಂಧಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ,  ಯೆಸ್ ಬ್ಯಾಂಕ್ಗೆ ಗುರುವಾರ ನಿಷೇಧ ಹೇರಿದೆ. ಯಾವುದೇ ಮೊತ್ತವನ್ನು ಹಿಂಪಡೆಯಲು ಆರ್ಬಿಐ ಅನುಮತಿ ಅಗತ್ಯವಿರುತ್ತದೆ. ಮಾರ್ಚ್ 5 ರಿಂದ  2020 ರ ಏಪ್ರಿಲ್ 3 ರವರೆಗೆ 1800 ಗಂಟೆಯಿಂದ ನಿಷೇಧವನ್ನು ಅನ್ವಯವಾಗಲಿದೆ. ಆರ್ಬಿಐ ಕೂಡ ಯೆಸ್ ಬ್ಯಾಂಕಿನ ಮಂಡಳಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೂಪರ್ಸೀಡ್ ಮಾಡಿದೆ ಎಂದು ಹೇಳಿದೆ.